HOME » NEWS » Entertainment » ACTRESS RADHIKA PANDIT SHARED SON YATHARV NEW VIDEO IN SOCIAL MEDIA SESR

Yatharv-Radhika Pandit: ಮಗನೊಂದಿಗಿನ ಕ್ಯೂಟ್​ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್​​

ಈಗ ಮಗ ಯಥರ್ವ್​ ಕೂಡ ಅಕ್ಕನಂತೆ ಅಮ್ಮನಿಗೆ ಉಗುರು ಕತ್ತರಿಸಲು ಕಾಟ ಕೊಡದೆ ಎಂಜಾಯ್​ ಮಾಡಿದ್ದಾನೆ.

news18-kannada
Updated:June 12, 2021, 8:51 PM IST
Yatharv-Radhika Pandit: ಮಗನೊಂದಿಗಿನ ಕ್ಯೂಟ್​ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್​​
ಮಗನ ಜೊತೆ ರಾಧಿಕಾ
  • Share this:
ಕೊರೋನಾ ಲಾಕ್​ಡೌನ್​ ಆಗೊಮ್ಮೆ ಈಗೊಮ್ಮೆ ಮಕ್ಕಳ ಪೋಟೋಗಳನ್ನು ನಟಿ ರಾಧಿಕಾ ಪಂಡಿತ್​ ಹಂಚಿಕೊಳ್ಳುತ್ತಿರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಮಗಳು ಆಯ್ರಾ ನೆರಳಿನೊಂದಿಗೆ ಹೆಜ್ಜೆ ಹಾಕುವ ವಿಡಿಯೋ ಹಂಚಿಕೊಂಡಿದ್ದ ನಟಿ ಇಂದು ಮಗನ ಮುಗ್ದ ನಗುವಿನ ವಿಡೀಯೋ ಹಂಚಿಕೊಂಡಿದ್ದಾರೆ. ವಿಶೇಷ ಎಂದರೇ ಈ ಹಿಂದೆ ಮಗಳು ಆಯ್ರಾಳ ಉಗುರ ಕತ್ತರಿಸುವ ವಿಡಿಯೋದಲ್ಲಿ ಮಾಡಿದ ಮಸ್ತಿಯನ್ನು ಮಗ ಕೂಡ ಮಾಡುತ್ತಿದ್ದಾನೆ. ಈ ಮೂಲಕ ಈ ಸಂಪ್ರದಾಯ ಮುಂದುವರೆಸಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಮ್ಮ ರಾಧಿಕಾ ಕಟ್​ ಎಂದು ಸದ್ದು ಮಾಡುತ್ತ ಉಗುರು ಕತ್ತರಿಸುತ್ತಿದ್ದರೆ, ಯಥರ್ವ ನೋಡುಗರಲ್ಲೂ ನಗೆ ಮೂಡಿಸುವಂತೆ ಅಮ್ಮನ ಈ ಕೆಲಸವನ್ನು ಎಂಜಾಯ್​ ಮಾಡಿದ್ದಾನೆ.





ಈ ಹಿಂದೆ ಮಗಳು ಆಯ್ರಾ ಉಗುರು ಕತ್ತರಿಸುವ ವಿಡಿಯೋವನ್ನು ನಟಿ ಹಂಚಿಕೊಂಡಿದ್ದರು. ಆಗ ಮಗಳು ಯಾವುದೇ ಹಠ ಮಾಡದೇ ಎಂಜಾಯ್​ ಮಾಡಿದ್ದಳು. ರಾಧಿಕಾ ಮಗಳ ಗಮನವನ್ನು ಬೇರೆಡೆ ಸೆಳೆಯುವ ಮೂಲಕ ತಾವೂ ನಗುತ್ತಾ ಉಗುರು ಕತ್ತರಿಸಿದ್ದ ವಿಡಿಯೋ ವೈರಲ್​ ಆಗಿತ್ತು. ಈಗ ಮಗ ಯಥರ್ವ್​ ಕೂಡ ಅಕ್ಕನಂತೆ ಅಮ್ಮನಿಗೆ ಉಗುರು ಕತ್ತರಿಸಲು ಕಾಟ ಕೊಡದೇ ಎಂಜಾಯ್​ ಮಾಡಿದ್ದಾನೆ. ಇದೇ ಕಾರಣಕ್ಕೆ ರಾಧಿಕ ಹಳೆ ಸಂಪ್ರದಾಯ ಮುಂದುವರೆದಿದೆ ಎಂದಿದ್ದಾರೆ.




ಈ ಮೊದಲೆಲ್ಲ ರಾಧಿಕಾ ಪಂಡಿತ್​​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದರು. ಕೋವಿಡ್​ ಎರಡಲೇ ಅಲೆ ಬಳಿಕ ಅವರು ಸಾಮಾಜಿಕ ಜಾಲತಾಣದಿಂದಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಅವರು ಆಗೊಮ್ಮೆ ಈಗೊಮ್ಮೆ ಅಭಿಮಾನಿಗಳಿಗಎ ಸಂತಸ ಮೂಡುವ ಪೋಸ್ಟ್​ ಹಂಚಿಕೊಳ್ಳುತ್ತಿರುತ್ತಾರೆ.




ಇತ್ತೀಚೆಗಷ್ಟೇ ಈ ಕುರಿತು ತಿಳಿಸಿದ್ದರ ಅವರು, ನಾವು ಪ್ರಸ್ತುತ ಸಂಕಷ್ಟದ ಸಮಯದಲ್ಲಿದ್ದೇವೆ, ವಾವೆಲ್ಲರೂ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವು, ಸಂಕಟ ಅನುಭವಿಸುತ್ತಿದ್ದೇವೆ, ಮುಂದೇನು ಆಗುತ್ತದೆ ಎಂದು ತಿಳಿಯದೇ ಭಯಭೀತರಾಗಿದ್ದೇವೆ, ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಆದರೆ, ನಿಮಗೆ ನೀವೇ ಪ್ರತಿ ದಿನ ಧೈರ್ಯ ಹೇಳಿಕೊಂಡಿ ಒಳ್ಳೆಯ ದಿನ ಮುಂದೆ ಬರಲಿದೆ ಎಂದು ಭಾವಿಸಬೇಕು. ನಾವು ಹೊಸ ಭರವಸೆ, ನಂಬಿಕೆ ಹೊಂದಬೇಕು. ಈ ಹೋರಾಟದಲ್ಲಿ ನಾವು ಒಟ್ಟಾಗಿ ಜಯಿಸಬೇಕು ಎಂದು ತಿಳಿಸಿದ್ದರು.








ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 12, 2021, 8:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories