Radhika Pandit: ರಾಧಿಕಾ ಪಂಡಿತ್​ಗೆ ತಿಳಿಯದಂತೆ ಅವರ ವಿಡಿಯೋ ಮಾಡಿದ ಯಶ್​-ಆಯ್ರಾ..! ​

Yash: ಯಶ್​ ಹಾಗೂ ರಾಧಿಕಾ ಪಂಡಿತ್​ ಸದ್ಯ ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಬಹಳ ಸಮಯದಿಂದ ಮನೆಯಲ್ಲೇ ಇದ್ದು ಬೋರಾಗಿರುವ ಯಶ್​, ಪತ್ನಿಯ ಕ್ಯೂಟ್​ ವಿಡಿಯೋವೊಂದನ್ನು ರೆಕಾರ್ಡ್​ ಮಾಡಿದ್ದಾರೆ. ಆದರೆ ಈ ವಿಡಿಯೋ ರೆಕಾರ್ಡ್​ ಮಾಡಿರುವ ವಿಷಯ ರಾಧಿಕಾಗೆ ತಿಳಿದೇ ಇರಲಿಲ್ಲವಂತೆ.

Anitha E | news18-kannada
Updated:September 15, 2020, 11:11 AM IST
Radhika Pandit: ರಾಧಿಕಾ ಪಂಡಿತ್​ಗೆ ತಿಳಿಯದಂತೆ ಅವರ ವಿಡಿಯೋ ಮಾಡಿದ ಯಶ್​-ಆಯ್ರಾ..! ​
ರಾಧಿಕಾ ಪಂಡಿತ್​
  • Share this:
ರಾಧಿಕಾ ಪಂಡಿತ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರು ಯಾವುದೇ ವಿಡಿಯೋ ಅಥವಾ ಫೋಟೋ ಪೋಸ್ಟ್​ ಮಾಡಿದರೆ ಸಾಕು, ಲಕ್ಷಗಟ್ಟಲೆ ವೀಕ್ಷಣೆ ಸಿಗುತ್ತದೆ. ಇನ್ನು ರಾಧಿಕಾರ ಮಕ್ಕಳು ಯಥರ್ವ್​​ ಹಾಗೂ ಆಯ್ರಾ ಕುರಿತಾದ ಅಪ್ಡೇಟ್​ಗಾಗಿ ಅಭಿಮಾನಿಗಳು ಕಾತರರಾಗಿರುತ್ತಾರೆ. ಇತ್ತೀಚೆಗಷ್ಟೆ ಯಶ್​ ತಮ್ಮ ಮಗಳು ಆಯ್ರಾ ಕೈಯಿಂದ ಕರುವಿಗೆ ಬಾಳೆಹಣ್ಣು ತಿನ್ನಿಸುವ ಫೋಟೋವೊಂದನ್ನು ರಾಧಿಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ನಟಿ ರಾಧಿಕಾ ಪಂಡಿತ್​ ಮಕ್ಕಳ ಅಪ್ಡೇಟ್​ ಜೊತೆಗೆ ತಮ್ಮ ವೈಯಕ್ತಿಕ ಆಸಕ್ತಿ ಹಾಗೂ ಕೆಲವೊಂದು ವಿಷಯಗಳ ಬಗ್ಗೆಯೂ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಅವರು ಅಭಿಮಾನಿಗಳಿಗೆ ಸೆಲ್ಫಿ ತೆಗೆದುಕೊಳ್ಳುವ ಬಗ್ಗೆ ಒಂದು ಪುಟ್ಟ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಅವರ ಈ ವಿಡಿಯೋ ನೋಡಿದ ನೆಟ್ಟಿಗರು ಸಖತ್​  ಕ್ಯೂಟ್​ ಅಂತ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಯಶ್​ ಹಾಗೂ ರಾಧಿಕಾ ಪಂಡಿತ್​ ಸದ್ಯ ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಬಹಳ ಸಮಯದಿಂದ ಮನೆಯಲ್ಲೇ ಇದ್ದು ಬೋರಾಗಿರುವ ಯಶ್​, ಪತ್ನಿಯ ಕ್ಯೂಟ್​ ವಿಡಿಯೋವೊಂದನ್ನು ರೆಕಾರ್ಡ್​ ಮಾಡಿದ್ದಾರೆ. ಆದರೆ ಈ ವಿಡಿಯೋ ರೆಕಾರ್ಡ್​ ಮಾಡಿರುವ ವಿಷಯ ರಾಧಿಕಾಗೆ ತಿಳಿದೇ ಇರಲಿಲ್ಲವಂತೆ.

Yash shared the meaning of his son’s name
ಯಶ್​ ಮಗನ ನಾಮಕರಣ ಸಮಾರಂಭದ ಚಿತ್ರ


ಯಶ್​ ಹಾಗೂ ಆಯ್ರಾ ತೆಗೆದಿರುವ ಈ ವಿಡಿಯೋವನ್ನು ರಾಧಿಕಾ ಪಂಡಿತ್​ ಪೋಸ್ಟ್​ ಮಾಡಿದ್ದು, ಅದರಲ್ಲಿ ಏನಿದೆ ಗೊತ್ತಾ..? ಕ್ಯಾಮೆರಾ ಮುಂದೆ ಯಾವುದೇ ಭಯವಿಲ್ಲದೆ ಡೈಲಾಗ್​ ಹೇಳುತ್ತಾ ನಟಿಸುವ ರಾಧಿಕಾಗೆ, ಸೆಲ್ಫಿ ತೆಗೆದುಕೊಳ್ಳುವಾಗ ಅದು ಒಂದು ಸವಾಲು ಏನಿಸುತ್ತದೆಯಂತೆ.
ಪ್ರತಿ ಹುಡುಗಿಯ ಸೆಲ್ಫಿ ಲೈಫ್​ ಹೇಗಿರುತ್ತೆ ಅಂತ ಒಂದು ತಮ್ಮ ಅನುಭವದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪರ್ಫೆಕ್ಟ್​ ಸೆಲ್ಫಿ ಅಂದರೆ, ಆ್ಯಂಗಲ್​, ಶಾಟ್​ ಸರಿಯಾಗಿ ಬರುವಂತೆ ಸೆಲ್ಫಿ ತೆಗೆಯೋದು ನಿಜಕ್ಕೂ ಒಂದು ಟಾಸ್ಕ್​ ಅಂತ ಹೇಳಿದ್ದಾರೆ. ಇನ್ನು ರಾಧಿಕಾ ಸೆಲ್ಫಿ ತೆಗೆಯುವಾಗ ಅದರ ವಿಡಿಯೋವನ್ನು ಅವರಿಗೇ ತಿಳಿಯದಂತೆ ಯಶ್​ ಹಾಗೂ ಆಯ್ರಾ ರೆಕಾರ್ಡ್​ ಮಾಡಿದ್ದಾರಂತೆ.
Published by: Anitha E
First published: September 15, 2020, 10:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading