Radhika Pandit: ಎದೆಹಾಲು ದಾನದ ಮಹತ್ವ ಸಾರಿದ ನಟಿ ರಾಧಿಕಾ ಪಂಡಿತ್, ಅಮ್ಮಂದಿರಿಗೆ 'ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ' ಹೇಳಿದ್ದೇನು?

ಈಗಲೂ ಎದೆಹಾಲಿನ ಬಗೆಗಿನ ಅಜ್ಞಾನ ನಿಂತಿಲ್ಲ, ಎದೆಹಾಲಿನ ಕೊರತೆ ತಪ್ಪಿಲ್ಲ, ಎದೆಹಾಲಿನ ದಾನದ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿ ಎದೆಹಾಲಿನ ಮಹತ್ವ, ಎದೆಹಾಲು ದಾನದ ಬಗ್ಗೆ ತಿಳುವಳಿಕೆ ಮೂಡಿಸಲು, ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಮುಂದಾಗಿದ್ದಾರೆ. 

ನಟಿ ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್

  • Share this:
    ಅಮ್ಮನ (Mother) ಎದೆಹಾಲು ಮಗುವಿನ (Baby) ಪಾಲಿಗೆ ಅಮೃತಕ್ಕೆ ಸಮಾನ. ಸ್ತನಪಾನ (Breastfeeding) ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ (Health) ದೃಷ್ಟಿಯಿಂದ ಬಹುಮುಖ್ಯ. ಸ್ತನಪಾನದಿಂದ ಪ್ರತಿವರ್ಷ ವಿಶ್ವದಾದ್ಯಂತ 8 ಲಕ್ಷ ಜೀವ ಉಳಿಸಲು ಸಾಧ್ಯವಾಗುತ್ತಿದೆ. ಅದರಲ್ಲೂ 6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಪೋಷಕಾಂಶದ (Nutrition) ಕೊರತೆ ಉಂಟಾಗದಿರಲು ಹಾಗೂ ಅವರಲ್ಲಿ ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸಲು ಸ್ತನಪಾನ ಅವಶ್ಯಕ. ಸ್ತನಪಾನದ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1990ರಿಂದ ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ‘ಬ್ರೆಸ್ಟ್‌ ಫೀಡಿಂಗ್‌ ವೀಕ್’ (Breastfeeding Week) ಎಂದು ಆಚರಿಸಲಾಗುವುದು. ಇಷ್ಟಾದರೂ ಎದೆಹಾಲಿನ ಬಗೆಗಿನ ಅಜ್ಞಾನ ನಿಂತಿಲ್ಲ, ಎದೆಹಾಲಿನ ಕೊರತೆ ತಪ್ಪಿಲ್ಲ. ಹೀಗಾಗಿ ಎದೆಹಾಲಿನ ಮಹತ್ವ, ಎದೆಹಾಲು ದಾನದ (Breastfeed Donation) ಬಗ್ಗೆ ತಿಳುವಳಿಕೆ ಮೂಡಿಸಲು, ಸ್ಯಾಂಡಲ್‌ವುಡ್ (Sandalwood) ನಟಿ (Actress) ರಾಧಿಕಾ ಪಂಡಿತ್ (Radhika Pandit) ಮುಂದಾಗಿದ್ದಾರೆ. 

    ಎದೆಹಾಲಿನ ಮಹತ್ವ ಸಾರಿದ ರಾಧಿಕಾ ಪಂಡಿತ್

    ನಟಿ ರಾಧಿಕಾ ಪಂಡಿತ್ ಖುದ್ದು ಎರಡು ಮಕ್ಕಳ ತಾಯಿ. ಹೀಗಾಗಿ ಎದೆಹಾಲಿನ ಮಹತ್ವ, ಅದು ಮಕ್ಕಳಿಗೆ ಎಷ್ಟು ಮುಖ್ಯ, ಸ್ತನಪಾನದ ಲಾಭ ಮಕ್ಕಳು ಹಾಗೂ ತಾಯಂದಿರಿಗೆ ಯಾವ ರೀತಿ ಆಗುತ್ತದೆ ಎಂಬ ಬಗ್ಗೆ ಅವರಿಗೆ ಅರಿವಿದೆ. ಹೀಗಾಗಿ ಈಗ ತಾವೇ ಖುದ್ದಾಗಿ ಎದೆಹಾಲಿನ ಮಹತ್ವ ಸಾರಲು ಮುಂದಾಗಿದ್ದಾರೆ.

     “ಎದೆಹಾಲು ದಾನದ ಅಗತ್ಯವಿದೆ”

    ಎದೆಹಾಲು ದಾನದ ಬಗ್ಗೆ ಅರಿವು ಮೂಡಿಸುವ ವಿಡಿಯೋದಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಮಕ್ಕಳ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ. ಆದರೆ ಹಲವು ಕಾರಣದಿಂದ ಶಿಶುಗಳು ಸ್ತನ್ಯಪಾನದಿಂದ ವಂಚಿತರಾಗುತ್ತಾರೆ. ಹೀಗಾಗಿ ಎದೆಹಾಲು ದಾನ ಹಾಗೂ ಎದೆಹಾಲು ಬ್ಯಾಂಕ್‌ಗಳ ಸ್ಥಾಪನೆಯ ಅಗತ್ಯವಿದೆ ಅಂತ ಹೇಳಿದ್ದಾರೆ.

    ಇದನ್ನೂ ಓದಿ: Breast milk: ಎದೆ ಹಾಲು ಮಾರಿ ಲಕ್ಷಾಂತರ ಹಣ ಗಳಿಸುತ್ತಿದ್ದಾಳೆ ಈ ತಾಯಿ! 30 ml ಹಾಲಿನ ಬೆಲೆ ಎಷ್ಟು ಗೊತ್ತಾ?

    ಇನ್‌ಸ್ಟಾಗ್ರಾಮ್‌ನಲ್ಲಿ ರಾಧಿಕಾ ಪಂಡಿತ್ ಮನವಿ

    ನಟಿ ರಾಧಿಕಾ ಪಂಡಿತ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಬರೆದುಕೊಂಡಿದ್ದಾರೆ.  ಕೆಲವು ಸಂದರ್ಭಗಳಲ್ಲಿ ತಾಯಂದಿರಲ್ಲಿ ಅಗತ್ಯವಾಗಿದ್ದಷ್ಟು ಹಾಲು ಉತ್ಪಾದನೆಯಾದೇ ಇರಬಹುದು. ಅಂತಹ ತಾಯಂದಿರ ಮಕ್ಕಳಿಗೆ ಸಹಾಯವಾಗುವ ದೃಷ್ಟಿಯಿಂದ ‘ಎದೆಹಾಲು ಬ್ಯಾಂಕ್’ಗಳನ್ನು ಸ್ಥಾಪಿಸಲಾಗಿದೆ.

    ಯಾರು ಸಶಕ್ತರೋ ಅವರು ಎದೆಹಾಲನ್ನು ದಾನ ಮಾಡಬಹುದು. ನಿಮ್ಮ ಜಿಲ್ಲೆಗಳಲ್ಲಿರುವ ಮಿಲ್ಕ್ ಬ್ಯಾಂಕ್​ಗಳಲ್ಲಿ ದಾನ ಮಾಡಬಹುದು. ಇದರಿಂದ ಎದೆಹಾಲು  ಅಗತ್ಯವಿರುವವರಿಗೆ ಸಹಾಯವಾಗಲಿದೆ’’ ಎಂದು ಸಂದೇಶ ನೀಡಿದ್ದಾರೆ.




    ಮಕ್ಕಳಿಗೆ ಅಮೃತದ ಸಮಾನ ತಾಯಿ ಎದೆ ಹಾಲು

    ವಿಶ್ವ ಆರೋಗ್ಯ ಸಂಸ್ಥೆಯು ಮಗು ಹುಟ್ಟಿದ ಒಂದು ಗಂಟೆಯ ಒಳಗಾಗಿ ಸ್ತನಪಾನ ಮಾಡಬೇಕು ಹಾಗೂ 6 ತಿಂಗಳವರೆಗೆ ಸ್ತನಪಾನ ನೀಡಲೇಬೇಕು, 6 ತಿಂಗಳ ನಂತರ ಸ್ತನಪಾನ ನೀಡುತ್ತಲೇ ಮಕ್ಕಳಿಗೆ ಬೇರೆ ಆಹಾರ ಪ್ರಾರಂಭಿಸಬೇಕು, ಎರಡು ವರ್ಷ ಹಾಗೂ ಅದಕ್ಕೂ ಅಧಿಕ ಸಮಯ ಸ್ತನಪಾನ ಮಾಡುವುದು ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಅವಶ್ಯಕ ಎಂದಿದೆ.

    ಹೆರಿಗೆಯಾಗಿ 60 ನಿಮಿಷದ ಒಳಗೆ ಸ್ತನಪಾನ

    ಹೆರಿಗೆಯಾಗಿ 30-60 ನಿಮಿಷದ ಒಳಗೆ ಸ್ತನಪಾನ ಮಾಡುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಗುವಿಗೆ 6 ತಿಂಗಳವರೆಗೆ ಎದೆಹಾಲನ್ನು ಮಾತ್ರ ಕುಡಿಸಬೇಕು, ಅದಾದ ಬಳಿಕ 2 ವರ್ಷದವರೆಗೆ ಎದೆಹಾಲು ನೀಡಬಹುದು. ಎದೆಹಾಲು ಒಂದು ಸಂಪೂರ್ಣ ಪೋಷಕಾಂಶವಿರುವ ಆಹಾರವಾಗಿದ್ದು ಅಸ್ತಮಾ, ಸೋಂಕು, ಅಲರ್ಜಿ ಸಮಸ್ಯೆ ತಡೆಗಟ್ಟುತ್ತದೆ. ಎದೆಹಾಲು ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ.

    ಎದೆಹಾಲು ಉಣಿಸಿದರೆ ತಾಯಂದರ ಆರೋಗ್ಯಕ್ಕೂ ಒಳಿತು

    ಇನ್ನು ತಾಯಿಯಲ್ಲಿ ಸ್ತನ ಕ್ಯಾನ್ಸರ್, ಟೈಪ್‌ 2 ಮಧುಮೇಹ, ಹೃದಯ ಸಮಸ್ಯೆ ತಡೆಗಟ್ಟುವಲ್ಲಿ ಸ್ತನಪಾನ ಸಹಾಯಕಾರಿಯಾಗಿದೆ. ಪ್ರತಿವರ್ಷ 20000 ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಸ್ತನಪಾನ ಮಾಡುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು. ಜೊತೆಗೆ ಎದೆಹಾಲು ನೀಡುವುದರಿಂದ ತಾಯಿಗೆ ಆಗುವ ಅನುಕೂಲಗಳೆಂದರೆ ರಕ್ತಸ್ರಾವ ಕಡಿಮೆ ಮಾಡುತ್ತದೆ,  ಸ್ತನ ಕ್ಯಾನ್ಸರ್‌ ತಡೆಗಟ್ಟುತ್ತದೆ. ಅಲ್ಲದೇ ತಾಯಿ ಹಾಗೂ ಮಗುವಿನ ಬಾಂಧವ್ಯ ಗಟ್ಟಿಯಾಗಿಸುತ್ತದೆ.

    ಇದನ್ನೂ ಓದಿ: Breastfeeding: ಮಗುವಿಗೆ ಎಷ್ಟು ದಿನ ಹಾಲುಣಿಸಬೇಕು? ತಜ್ಞರು ಹೇಳೋದೇನು ಕೇಳಿ

    2016ರಲ್ಲಿ ಎದೆಹಾಲಿನ ಬ್ಯಾಂಕ್ ಸ್ಥಾಪನೆ

    ಜುಲೈ 13, 2016ರಲ್ಲಿ ಬ್ರೆಸ್ಟ್ ಮಿಲ್ಕ್ ಬ್ಯಾಂಕ್‌ ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರಲ್ಲಿ ತಾಯಿ ತನ್ನ ಮಗುವಿಗೆ ನೀಡಿ, ಅಧಿಕವಾದ ಹಾಲನ್ನು ಮಿಲ್ಕ್‌ ಬ್ಯಾಂಕ್‌ಗೆ ದಾನ ಮಾಡಬಹುದಾಗಿದೆ.
    Published by:Annappa Achari
    First published: