ಮದುವೆಗೆ ಸಿದ್ಧರಾದರಾ ಸ್ಯಾಂಡಲ್​ವುಡ್ ಸ್ವೀಟಿ: ನಟಿ ರಾಧಿಕಾ ಮದುವೆಗೆ ಜೋರಾದ ಸಿದ್ಧತೆ..!

ರಾಧಿಕಾ ಕುಮಾರಸ್ವಾಮಿ ಅವರ ಮದುವೆಗೆ ಸಿದ್ದತೆ ಜೋರಾಗಿದೆ. ಮಧುಮಗಳಾಗಲು ಸ್ವೀಟಿ ಸಿದ್ಧರಾಗಿದ್ದಾರೆ. ಅರಿಶಿನ ಶಾಸ್ತ್ರದ ಜತೆಗೆ ಸಕಲ ವಿಧಿ ವಿಧಾನಗಳೂ ನಡೆಯುತ್ತಿವೆ.

Anitha E | news18
Updated:March 26, 2019, 4:36 PM IST
ಮದುವೆಗೆ ಸಿದ್ಧರಾದರಾ ಸ್ಯಾಂಡಲ್​ವುಡ್ ಸ್ವೀಟಿ: ನಟಿ ರಾಧಿಕಾ ಮದುವೆಗೆ ಜೋರಾದ ಸಿದ್ಧತೆ..!
ರಾಧಿಕಾ ಕುಮಾರಸ್ವಾಮಿ ಅವರ ಮದುವೆಗೆ ಸಿದ್ದತೆ ಜೋರಾಗಿದೆ. ಮಧುಮಗಳಾಗಲು ಸ್ವೀಟಿ ಸಿದ್ಧರಾಗಿದ್ದಾರೆ. ಅರಿಶಿನ ಶಾಸ್ತ್ರದ ಜತೆಗೆ ಸಕಲ ವಿಧಿ ವಿಧಾನಗಳೂ ನಡೆಯುತ್ತಿವೆ.
  • News18
  • Last Updated: March 26, 2019, 4:36 PM IST
  • Share this:
ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್​ವುಡ್ ಸ್ವೀಟಿ, ಬ್ಯೂಟಿ, ಕ್ಯೂಟಿ ಎಂದೆಲ್ಲ ಕರೆಸಿಕೊಳ್ಳುವ ನಟಿ. ಕಾರಣಾಂತರಗಳಿಂದಾಗಿ ಸಿನಿಮಾಗಳಿಂದ ದೂರ ಉಳಿದಿದ್ದ ರಾಧಿಕಾ ಕುಮಾರಸ್ವಾಮಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ನನ್ನ ಮುತ್ತು, ನನ್ನ ಇಷ್ಟ: ವಿಜಯ್​ ದೇವರಕೊಂಡ ಜತೆ ಲಿಪ್​ಲಾಕ್ ಮಾಡಿದ್ದಕ್ಕೆ ಟ್ರೋಲ್ ಮಾಡಿದವರಿಗೆ ರಶ್ಮಿಕಾ ತಿರುಗೇಟು..!

ಇತ್ತೀಚೆಗಷ್ಟೆ 'ಭೈರಾದೇವಿ' ಚಿತ್ರದ ಚಿತ್ರೀಕರಣದಿಂದಾಗಿ ಸುದ್ದಿಯಲ್ಲಿದ್ದ ರಾಧಿಕಾ ಕುಮಾರಸ್ವಾಮಿ ಈಗ ಮತ್ತೆ 'ಕಾಂಟ್ರಾಕ್ಟ್​' ಚಿತ್ರದಿಂದಾಗಿ ಸದ್ದು ಮಾಡುತ್ತಿದ್ದಾರೆ. ಭೈರಾದೇವಿ ನಂತರ ರಾಧಿಕಾ 'ಕಾಂಟ್ರಾಕ್ಟ್​' ಸಿನಿಮಾದಲ್ಲಿ ವ್ಯಸ್ತವಾಗಿದ್ದಾರೆ.

ಈ ಚಿತ್ರದಲ್ಲಿ ರಾಧಿಕಾ, ಅರ್ಜುನ್​ ಸರ್ಜಾ ಜತೆ ತೆರೆ ಹಂಚಿಕೊಂಡಿದ್ದು, ಅದರ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಜತೆಗೆ ಸಿನಿಮಾದ ಚಿತ್ರೀಕರಣ ಸಹ ವೇಗವಾಗಿ ಸಾಗುತ್ತಿದೆ. ಇತ್ತೀಚೆಗೆ ನಡೆದ ಈ ಚಿತ್ರದ ಚಿತ್ರೀಕರಣದಲ್ಲಿ ದೃಶ್ಯ​ವೊಂದರಲ್ಲಿ ರಾಧಿಕಾ ಗೆಳತಿಯರೊಂದಿಗೆ ಸೇರಿ ಮದುವೆಗೆ ತಯಾರಿ ನಡೆಸಿದ್ದಾರೆ.

ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಬ್ಯುಸಿನೆಸ್ ಹಾಗೂ ರಾಧಿಕಾ ಸಾಫ್ಟವೇರ್​ ಎಂಜಿನಿಯರ್​ ಆಗಿ ಬೋಲ್ಡ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾವನ್ನು ಸಮೀರ್ ನಿರ್ದೇಶನ ಮಾಡುತ್ತಿದ್ದು, ಅವರೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಸುಭಾಷ್ ಆನಂದ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ: The Tashkent Files Trailer: ಲಾಲ್​ ಬಹದ್ದೂರ್​ ಶಾಸ್ತ್ರಿ ನಿಗೂಢ ಸಾವಿನ ಕತೆ ಹೇಳುವ ಸಿನಿಮಾ..!

ಈ ಸಿನಿಮಾದಲ್ಲಿ ಚಿತ್ರದಲ್ಲಿ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಹಾಗೂ ಬಹುಭಾಷಾ ನಟ ಜೆ.ಡಿ. ಚಕ್ರವರ್ತಿ ಸೇರಿದಂತೆ ಬಹುತೇಕರು ಬಣ್ಣ ಹಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಚಿತ್ರ ಏಪ್ರಿಲ್​ನಲ್ಲಿ ರಾಜ್ಯದಾದ್ಯಂತ ತೆರೆ ಕಾಣುವ ನಿರೀಕ್ಷೆಯಿದೆ. ರಾಧಿಕಾ ಅಭಿನಯದ ‘ಭೈರಾದೇವಿ’, ‘ದಮಯಂತಿ’ ಹಾಗೂ ‘ರಾಜೇಂದ್ರ ಪೊನ್ನಪ್ಪ’ ಸೇರಿದಂತೆ ಹಲವು ಸಿನಿಮಾಗಳು ಸಹ ಬಿಡುಗಡೆಗೆ ಸಿದ್ದವಾಗಿವೆ.PHOTOS: ತನ್ನದೇ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ತೆಗೆದುಕೊಂಡ ಪ್ರಿನ್ಸ್​ ಮಹೇಶ್​ ಬಾಬು
First published:March 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading