'ಭೈರಾದೇವಿ' ಚಿತ್ರದ ಶೂಟಿಂಗ್​ ವೇಳೆ ರಾಧಿಕಾ ಕುಮಾರಸ್ವಾಮಿಗೆ ತೀವ್ರ ಪೆಟ್ಟು

ಘಟನೆ ನಂತರ ಶೂಟಿಂಗ್​ ಅರ್ಧಕ್ಕೆ ನಿಲ್ಲಿಸಿ ಅವರನ್ನು ಮನೆಗೆ ಕರೆದೊಯ್ಯಲಾಗಿದೆ.  ಕುಟುಂಬದ ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಅಷ್ಟೇ ಅಲ್ಲ, 30 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಅವರು ಸೂಚಿಸಿದ್ದಾರೆ. 

Rajesh Duggumane | news18
Updated:February 9, 2019, 7:39 PM IST
'ಭೈರಾದೇವಿ' ಚಿತ್ರದ ಶೂಟಿಂಗ್​ ವೇಳೆ ರಾಧಿಕಾ ಕುಮಾರಸ್ವಾಮಿಗೆ ತೀವ್ರ ಪೆಟ್ಟು
ಭೈರಾದೇವಿ ಚಿತ್ರದಲ್ಲಿ ರಾಧಿಕಾ
Rajesh Duggumane | news18
Updated: February 9, 2019, 7:39 PM IST
ರಕ್ಷಾ ಜಾಸ್ಮಿನ್​​

ಬೆಂಗಳೂರು (ಫೆ.9):  'ಭೈರಾದೇವಿ' ಚಿತ್ರದ ಶೂಟಿಂಗ್​ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ವೇಳೆ ಚಿತ್ರತಂಡಕ್ಕೆ ಸಮಸ್ಯೆಯೊಂದು ಎದುರಾಗಿದೆ. ಅದೇನೆಂದರೆ, ಚಿತ್ರೀಕರಣದ​ ವೇಳೆ ನಾಯಕಿ ರಾಧಿಕಾ ಕುಮಾರಸ್ವಾಮಿ ಕೆಳಗೆ ಬಿದ್ದಿದ್ದು, ತೀವ್ರ ಪೆಟ್ಟಾಗಿದೆ.

ಶಾಂತಿನಗರದ ಸ್ಮಶಾನದಲ್ಲಿ 'ಭೈರಾದೇವಿ' ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅವರು ಗೋರಿ ಮೇಲಿನಿಂದ ಅವರು ಕೆಳಗಿಳಿಯುವ ದೃಶ್ಯ ಸೆರೆ ಹಿಡಿಯಲಾಗುತ್ತಿತ್ತು. ಈ ವೇಳೆ ರಾಧಿಕಾ ಆಯತಪ್ಪಿ ಬಿದ್ದಿದ್ದಾರೆ. ಅವರು ಬಿದ್ದ ರಭಸಕ್ಕೆ ಬೆನ್ನು ಹುರಿಗೆ ಪೆಟ್ಟು ಬಿದ್ದಿದೆ. ನಡೆಯಲೂ ಆಗದ ಸ್ಥಿತಿಗೆ ಅವರು ತಲುಪಿದ್ದರು ಎಂದು ಮೂಲಗಳು ತಿಳಿಸಿವೆ.

ಘಟನೆ ನಂತರ ಶೂಟಿಂಗ್​ ಅರ್ಧಕ್ಕೆ ನಿಲ್ಲಿಸಿ ರಾಧಿಕಾರನ್ನು ಮನೆಗೆ ಕರೆದೊಯ್ಯಲಾಗಿದೆ.  ಕುಟುಂಬದ ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಅಷ್ಟೇ ಅಲ್ಲ, 30 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಭೈರಾದೇವಿ ಚಿತ್ರದಲ್ಲಿ ರಾಧಿಕಾ ಅಘೋರಿ ರೂಪ ತಾಳಿದ್ದಾರೆ. ಅಷ್ಟೇ ಅಲ್ಲ, ಕಾಳಿ ಅವತಾರದಲ್ಲೂ ಅವರು ಪ್ರೇಕ್ಷಕರ ಎದುರು ಬರಲಿದ್ದಾರೆ. ಶ್ರೀಜಿ ನಿರ್ದೇಶನದ ಈ ಚಿತ್ರ ರಾಧಿಕಾ ಕುಮಾರಸ್ವಾಮಿ ಅವರ ಹೋಮ್ ಬ್ಯಾನರ್, ಶಮಿಕಾ ಎಂಟರ್ ಪ್ರೈಸಸ್ ಲಾಂಛನದಡಿ ಮೂಡಿಬರುತ್ತಿದೆ.ವಿಶೇಷವೆಂದರೆ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪೋಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.

First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...