• Home
  • »
  • News
  • »
  • entertainment
  • »
  • Radhika Kumaraswamy: ಡ್ಯಾನ್ಸ್ ಮಾಡುವಾಗ ಕಾಲು ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ, ವಿಡಿಯೋ ವೈರಲ್

Radhika Kumaraswamy: ಡ್ಯಾನ್ಸ್ ಮಾಡುವಾಗ ಕಾಲು ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ, ವಿಡಿಯೋ ವೈರಲ್

ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ಹಾಡೊಂದಕ್ಕೆ ಡಾನ್ಸ್ ಮಾಡುವಾಗ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹರಿದಾಡುತ್ತಿದೆ. 

  • Share this:

ರಾಧಿಕಾ ಕುಮಾರಸ್ವಾಮಿ (Radhika Kumaraswamy) ಒಂದು ಕಾಲದಲ್ಲಿ ಸ್ಯಾಂಡಲ್​ವುಡ್ (Sandalwood)​ ಆಳಿದ ನಟಿ. ಇವರು ನಟಿಸಿದ ಅಷ್ಟು ಸಿನಿಮಾಗಳು ಭರ್ಜರಿ ಕೆಲೆಕ್ಷನ್ ಮಾಡಿತ್ತು ಎಂದರೆ ತಪ್ಪಾಗಲಾರದು.  ರಾಧಿಕಾ ಅವರು ಒಳ್ಳೆಯ ಡ್ಯಾನ್ಸರ್ (Dancer). ಇವರ ನೃತ್ಯ ನೋಡಲೆಂದು ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದರು. ಆದರೆ ಇದೀಗ ರಾಧಿಕಾ ಅವರು ಚಿತ್ರರಂಗದಿಂದ ಸಂಪೂರ್ಣ ದೂರಸರಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ.  ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್‌ಗಳನ್ನು ಕೊಡುತ್ತಾ ಇರುತ್ತಾರೆ. ಜೊತೆಗೆ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಇದೀಗ ರಾಧಿಕಾ ಅವರು ಡ್ಯಾನ್ಸ್ ಮಾಡುವಾಗ ಆಯ ತಪ್ಪಿ ಬಿದ್ದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.


ಡ್ಯಾನ್ಸ್ ಮಾಡುವಾಗ ಬಿದ್ದ ರಾಧಿಕಾ ಕುಮಾರಸ್ವಾಮಿ:


ಹೌದು, ರಾಧಿಕಾ ಕುಮಾರಸ್ವಾಮಿ ಹಾಡೊಂದಕ್ಕೆ ಡಾನ್ಸ್ ಮಾಡುವಾಗ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹರಿದಾಡುತ್ತಿದೆ. ಡಾನ್ಸ್ ಕ್ಲಾಸ್​ನಲ್ಲಿ ನೃತ್ಯದ ಅಭ್ಯಾಸ ಮಾಡುವಾಗ ಬಿದ್ದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಕೂಡ  ಆಗಿದೆ. ಇದರ ವಿಡಿಯೋವನ್ನು ರಾಧಿಕಾ ಕುಮಾರಸ್ವಾಮಿ ಅವರ ಅಭಿಮಾನಿಗಳ ಇನ್ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ.
ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುವ ರಾಧಿಕಾ:


ಇನ್ನು, ರಾಧಿಕಾ ಕುಮಾರಸ್ವಾಮಿ ಅವರು ಸದ್ಯ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಅನೇಕ ವರ್ಷಗಳಿಂದ ಅವರ ಯಾವುದೇ ಸಿನಿಮಾಗಳಲ್ಲಿ ಅವರು ನಟಿಸಿಲ್ಲ. ಆದರೂ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಅಭಿನಯ ಮಾತ್ರ ಅಲ್ಲ, ಅವರಿಗೆ ಡಾನ್ಸ್‌ನಲ್ಲೂ ಅಷ್ಟೇ ಹೆಚ್ಚಿನ ಆಸಕ್ತಿ ಇದೆ. ಇದೀಗ ಅರೆಯದ ಹುಡುಗಿರು ಕೂಡ ನಾಚುವಂತೆ ಡಾನ್ಸ್  ಮಾಡುತ್ತಾರೆ. ಅದರ ವಿಡಿಯೋಗಳನ್ನು ಇನ್ಸ್ಟಾಗ್ರಾಂ ಗಳಲ್ಲಿ ಹಂಚಿಕೊಳ್ಳುತ್ತಾರೆ.
ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಹಲವಾರು ಅಕೌಂಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಇದೆ. ಇದನ್ನೆಲ್ಲ ಅವರ ಅಭಿಮಾನಿಗಳು ಹ್ಯಾಂಡಲ್​ ಮಾಡುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಜೊತೆ ಸ್ವತಃ ಸಂಪರ್ಕದಿಂದ ಇರಲು ಫೇಸ್​​ಬುಕ್​​ನಲ್ಲಿ ಹೊಸ ಅಕೌಂಟ್​ ತೆರೆದಿದ್ದಾರೆ. ಈ ಬಗ್ಗೆ ಸ್ವತಃ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ.. ನಾನು ರಾಧಿಕಾ ಕುಮಾರಸ್ವಾಮಿ ಎಂಬ ಹೊಸ ಫೇಸ್​​ಬುಕ್ ಅಕೌಂಟ್​ ತೆರೆಯುತ್ತಿದ್ದೇನೆ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಈಗಾಗಲೇ ಅವರ ಇನ್ಸ್ಟಾಗ್ರಾಂ ಅಕೌಂಟ್​ಗೆ ಬರೋಬ್ಬರಿ 94.4K ಅನುಯಾಯಿಗಳು ಇದ್ದು, ಫೇಸ್​ಬುಕ್​ನಲ್ಲಿಯೂ ಹವಾ ಎಬ್ಬಿಸಿದ್ದಾರೆ.


ಇದನ್ನೂ ಓದಿ: Allu Arjun: ಹೊಸ ದಾಖಲೆ ಸೃಷ್ಟಿಸಿದ ಐಕಾನಿಕ್ ಸ್ಟಾರ್, ಟಾಲಿವುಡ್ ಇಂಡಸ್ಟ್ರಿಯನ್ನು ಶೇಕ್​ ಮಾಡಿದೆ ಆ ಒಂದು ಫೋಟೋ


ಈ ಹಿಂದೆ ವೈರಲ್​ ಆಗಿದ್ದ ‘ಜುಗ್ನು’ ಡಾನ್ಸ್ ವಿಡಿಯೋ!


ಈ ಹಿಂದೆ ಮತ್ತೊಂದು ವಿಡಿಯೋವನ್ನು ರಾಧಿಕಾ ಕುಮಾರಸ್ವಾಮಿಯವರು ಶೇರ್​ ಮಾಡಿಕೊಂಡಿದ್ದರು. ಬೀಚ್ ಮುಂದೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದನ್ನು ರಾಧಿಕಾ ಕುಮಾರಸ್ವಾಮಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ರ್‍ಯಾಪರ್ ಬಾದ್‌ಶಾನ 'ಜುಗ್ನು' ಹಾಡಿಗೆ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕಿದ್ದು, ಯಾವುದೇ ಕೊರಿಯಾಗ್ರಾಫರ್ ಇಲ್ಲದೆ ಹಾಡಿನ ತಾಳಕ್ಕೆ ತಕ್ಕಂತೆ ನರ್ತಿಸಿರುವುದನ್ನು ಹಲವರು ಪ್ರಶಂಸಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು