ನಟಿ ರಚಿತಾ ರಾಮ್ ಹಾಗೂ ನಿಖಿಲ್ ನಡುವೆ ಮದುವೆ ಏರ್ಪಡಲಿದೆ ಎನ್ನುವ ವಿಚಾರ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಈ ವಿಚಾರಕ್ಕೆ ರಚಿತಾ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಅವರು ಮತ್ತೆ ಸುದ್ದಿಯಾಗಿದ್ದಾರೆ! ಇದಕ್ಕೆ ಕಾರಣ ಅವರು ಸಿಗರೇಟ್ ಸೇದಿದ್ದು. ರಚಿತಾ ರಾಮ್ ಸಿಗರೇಟ್ ಸೇದುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಹಾಗಿದ್ರೆ ರಚಿತಾ ರಾಮ್ ಚೈನ್ ಸ್ಮೋಕರ್ ಆದ್ರಾ? ಅಷ್ಟಕ್ಕೂ ಅವರು ಸಿಗರೇಟ್ ಸೇದಿದ್ದೇಕೆ? ಈ ಎಲ್ಲ ಪ್ರಶ್ನೆಗೆ ಉತ್ತರ ‘ಏಕ್ ಲವ್ ಯಾ’ ಸಿನಿಮಾ. ಹೌದು, ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ದಲ್ಲಿ ರಚಿತಾ ರಾಮ್ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಟೀಸರ್ ನಾಳೆ ರಿಲೀಸ್ ಆಗುತ್ತಿದೆ. ಇದರಲ್ಲಿ ರಚಿತಾ ಸ್ಮೋಕ್ ಮಾಡುವ ದೃಶ್ಯ ಇರಲಿದೆಯಂತೆ.
‘ಎಕ್ ಲವ್ ಯಾ’ ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಿತಾ ಸಹೋದರ ರಾಣಾ ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ‘ಏಕ್ ಲವ್ ಯಾ’ದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆ ಅಂಗವಾಗಿ ನಾಳೆ ಟೀಸರ್ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.
ಇದನ್ನೂ ಓದಿ: ಸ್ಮಶಾನದಲ್ಲಿ ಘೀಳಿಟ್ಟ ದುನಿಯಾ ವಿಜಯ್ ಸಲಗ
ಈ ಮೊದಲು ಜೋಗಿ ಪ್ರೇಮ್ ನಿರ್ದೇಶನದ ‘ಕರಿಯ’, ‘ಎಕ್ಸ್ ಕ್ಯೂಸ್ ಮಿ’, ‘ಜೋಗಿ’, ‘ಜೋಗಯ್ಯ’, ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಈಗ ಈ ಸಿನಿಮಾದ ಹಾಡುಗಳು ಕೂಡ ಭರವಸೆ ಮೂಡಿಸುವ ಲಕ್ಷಣ ಗೋಚರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ