ಸಿನಿಮಾ ತಾರೆಯರೆ ದೇವಾಲಯಕಟ್ಟಿ ಪೂಜಿಸುವ ಅಭಿಮಾನಿಗಳಿದ್ದಾರೆ. ಆದರೆ ರಾಜ್ ಕುಮಾರ್ ಅವರು ಅಭಿಮಾನಿಗಳೇ ದೇವರೆಂದು ಪೂಜಿಸುತ್ತಿದ್ದರು. ಇದು ಕಲಾವಿದರು ಹಾಗೂ ಅಭಿಮಾನಿಗಳ ನಡುವೆ ಇರುವ ಸಂಬಂಧಕ್ಕೆ ಒಂದು ಪುಟ್ಟ ಮಗು ಉದಾಹರಣೆ.
ನೆಚ್ಚಿನ ನಟ-ನಟಿಯರನ್ನುನೋಡಲು ಅವರ ಮನೆಗಳ ಬಳಿ ಹೋಗಿ ಕಾಯುವ ಅಭಿಮಾನಿಗಳಿರುವಾಗ, ಅವರನ್ನು ಸೆಲೆಬ್ರಿಟಿಗಳಂತೆ ನಡೆಸಿಕೊಳ್ಳುವ ನಟರೂ ಇದ್ದಾರೆ. ಅಭಿಮಾನಿಗಳು ತಮ್ಮ ಇಷ್ಟದ ನಟ-ನಟಿಯರೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿರುತ್ತಾರೆ. ಅಂತೆಯೇ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೂ ದೊಡ್ಡ ಅಭಿಮಾನಿಗಳ ಬಳಗವೇ ಇದೆ.
ಆ ಅಭಿಮಾನಿಯ ಹೆಸರು ಕೇಳುವಷ್ಟರಲ್ಲಿ ಖುಷಿಯಿಂದ ಹೊರಟು ಹೋಗಿದ್ದ ಅಭಿಮಾನಿಯ ಬಗ್ಗೆ ಭಾವುಕರಾಗಿ ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅಣ್ಣಾವ್ರ ಮಾತನ್ನೂ ನೆನಪಿಸಿಕೊಂಡಿದ್ದಾರೆ. ನಡೆದ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: Darshan: ದರ್ಶನ್ ಅಭಿನಯದ ಶಾಸ್ತ್ರಿ ಸಿನಿಮಾದ ಹಾಡು ಹಾಡಿದ ಟಾಲಿವುಡ್ ನಟಿ: ಇಲ್ಲಿದೆ ವಿಡಿಯೋ..!
'ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ ಹಾಗೂ ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು.
ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ. ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ. ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ನನ್ನನ್ನ ಟ್ಯಾಗ್ ಮಾಡಿ. ನಾನು ಅದನ್ನು ರೀಪೋಸ್ಟ್ ಮಾಡುತ್ತೇನೆ. ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ' ಎಂದು ರಚಿತಾ ಅಭಿಮಾನಿಗೆ ಮನವಿ ಮಾಡಿದ್ದಾರೆ.
ರಚಿತಾ ರಾಮ್ ಅಭಿಮಾನಿಯ ಕುರಿತು ಬರೆದಿರುವ ಈ ಭಾವುಕ ಪೋಸ್ಟ್ ನೋಡಿದ ನೆಟ್ಟಿಗರು ಮೆಚ್ಚಿಕೊಳ್ಳುತ್ತಿದ್ದಾರೆ.
Rashmika Mandanna: ಅಮ್ಮ ಇಬ್ಬರು ಮಕ್ಕಳನ್ನು ಹೇಗೆ ಬೆಳೆಸಿದರು ಅಂತ ರಶ್ಮಿಕಾಗೆ ಈಗ ಅರ್ಥವಾಗಿದೆಯಂತೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ