ಎಂ.ಎಸ್​. ಧೋನಿ ಎಂದಿಗೂ ನನ್ನ ಜೀವನದಲ್ಲಿ ಮಾಸದ ಕಲೆ: ಯಾಕ್​ ಹೀಗಂದ್ರು ಈ ನಟಿ!

MS Dhoni: “ಧೋನಿ ಜೊತೆಗೆ ನನ್ನ ಸಂಬಂಧ ಒಂದು ರೀತಿಯ ಕಲೆ ಇದ್ದಂತೆ ಹಾಗೂ ಅದು ಬಹು ಕಾಲದವರೆಗೂ ಮಾಸುವುದಿಲ್ಲ ಎಂದು ನಂಬಿದ್ದೇನೆ. ನಾವು ಬೇರೆಯಾಗಿ ಐದು ವರ್ಷಗಳಾದರೂ ಸಹ ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ,” ಎಂದು ಇದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಭಾರಿ ವೈರಲ್​ ಆಗುತ್ತಿದೆ.

ರೈ ಲಕ್ಷ್ಮಿ, ಧೋನಿ

ರೈ ಲಕ್ಷ್ಮಿ, ಧೋನಿ

  • Share this:
ಮಹೇಂದ್ರ ಸಿಂಗ್​ ಧೋನಿ (Dhoni) ಇಲ್ಲದೇ ಕ್ರಿಕೆಟ್(Cricket)​ ಇದ್ದ ಕಳೆಯೂ ಕಡಿಮೆಯಾಗಿದೆ. ಭಾರತ ಕ್ರಿಕೆಟ್​ ಇತಿಹಾಸದಲ್ಲೇ ಯಾರೂ ಮಾಡದ್ದನ್ನು ಮಹೇಂದ್ರ ಸಿಂಗ್​ ಧೋನಿ ಮಾಡಿದ್ದಾರೆ. ಅವರು ನಿವೃತ್ತಿ ಪಡೆದ ದಿನ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಬೇರೆ ದೇಶದ ಅಭಿಮಾನಿಗಳಿಗೂ ಧೋನಿ ಅಂದರೆ ಅಚ್ಚುಮೆಚ್ಚು. ಭಾರತ ಕ್ರಿಕೆಟ್ (Indian Cricket) ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಇತ್ತೀಚೆಗೆ ಟಿ20 ವಿಶ್ವಕಪ್​ನಲ್ಲಿ (T20 World Cup) ಟೀಮ್ ಇಂಡಿಯಾ (Team India) ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಕೇವಲ ಐಪಿಎಲ್​ನಲ್ಲಿ ಮಾತ್ರ ಮಹೇಂದ್ರ ಸಿಂಗ್​ ಆಡುತ್ತಿದ್ದಾರೆ. ಅದು ಬಿಟ್ಟರೆ ತನ್ನ ಹೆಂಡತಿ, ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಐಪಿಎಲ್​ 2021 ಚೆನ್ನೈ(Chennai) ತಂಡಕ್ಕೆ ಧೋನಿ ಸೈನ್ ಮಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೂ ಮುನ್ನ ಆಕೆಯ ಪತ್ನಿ ಮತ್ತೆ ಪ್ರೆಗ್ನೆಂಟ್(Pregnant) ಎಂಬ ಸುದ್ದಿ ಕೂಡ ವೈರಲ್​ ಆಗಿತ್ತು. ಈಗ ಧೋನಿಗೆ ಸಂಬಂಧಿಸಿದ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಅದು ಕಾಲಿವುಡ್(Kollywood)​, ಸ್ಯಾಂಡಲ್​ವುಡ್​(Sandalwood) ನಟಿಯೊಬ್ಬರು ಧೋನಿ ಬಗ್ಗೆ ಹೇಳಿಕೆ ನೀಡಿದ್ದು, ಅದು ನೆಟ್ಟಿಗರ ತಲೆಕೆಡಿಸಿದೆ.  ಅಷ್ಟಕ್ಕೂ ಆ ನಟಿ ಧೋನಿ ಬಗ್ಗೆ ಹೇಳಿದ್ದೇನು  ಗೊತ್ತಾ?  ಎಂಎಸ್​ಡಿ ಬಗ್ಗೆ ಹೇಳಿದ ಆ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ

ಧೋನಿ ಒಬ್ಬ ಕರುಣಾಮಯಿ ಎಂದ ಲಕ್ಷ್ಮಿ ರೈ

2009 ರಲ್ಲಿ ಸ್ಯಾಂಡಲ್​​ವುಡ್, ಕಾಲಿವುಡ್​ನಲ್ಲಿ ಮಿಂಚುತ್ತಿದ್ದ ನಟಿ ಲಕ್ಷ್ಮೀ ರೈ (Lakshmi Rai) ಜೊತೆ ಧೋನಿ ಡೇಟಿಂಗ್ ಮಾಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ಕುರಿತು ಸ್ವತಃ ಲಕ್ಷ್ಮೀ ರೈ ಕೂಡ ಮಾತನಾಡಿದ್ದರು. ಸದ್ಯ ಆ ವಿಡಿಯೋ ಮತ್ತೊಮ್ಮೆ ವೈರಲ್ ಆಗುತ್ತಿದೆ. ಧೋನಿ ಹೊರತುಪಡಿಸಿ ಮಿಕ್ಕ ಯಾರೊಂದಿಗಿನ ಜೊತೆಗೆ ತಮ್ಮ ರೊಮ್ಯಾಂಟಿಕ್ ಸಂಬಂಧ ಅಷ್ಟಾಗಿ ಸುದ್ದಿ ಮಾಡಲಿಲ್ಲ ಎಂದು ಹೇಳಿಕೊಂಡಿರುವ ಲಕ್ಷ್ಮೀ ಬ್ರೇಕ್‌ ಅಪ್ ಆದ ಬಳಿಕವೂ ತಮ್ಮಿಬ್ಬರ ನಡುವೆ ಪರಸ್ಪರ ಗೌರವವಿದೆ ಎಂಬ ಮಾತುಗಳನ್ನು ಆಡಿದ್ದಾರೆ. “ಧೋನಿ ಒಬ್ಬ ಒಳ್ಳೆಯ ವ್ಯಕ್ತಿ. ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಇಷ್ಟ ಪಡುವಂಥ ವ್ಯಕ್ತಿಯಾದ ಧೋನಿ ಒಬ್ಬ ಕರುಣಾಮಯಿ ಹಾಗೂ ಸಮತೋಲಿತ ವ್ಯಕ್ತಿ,” ಎಂದು ಹೇಳಿದ್ದಾರೆ.

ಇದನ್ನು ಓದಿ : `ಕೌನ್​ ಬನೇಗಾ ಕರೋಡ್​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಹವಾ: ಬಿಗ್​ ಬಿ ಬಾಯಲ್ಲೂ ಇದೇ ಟೈಟಲ್​..!

ನಮ್ಮ ಸಂಬಂಧ ಎಂದಿಗೂ ಮಾಸದ ಕಲೆ!

ಹೌದು, ತಮ್ಮ ಹಾಗೂ ಧೋನಿ ನಡುವಣ ಬ್ರೇಕ್‌ ಅ‌ಪ್‌ ಬಗ್ಗೆ 2014ರಲ್ಲಿ ಲಕ್ಷ್ಮೀ ರೈ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. “ಧೋನಿ ಜೊತೆಗೆ ನನ್ನ ಸಂಬಂಧ ಒಂದು ರೀತಿಯ ಕಲೆ ಇದ್ದಂತೆ ಹಾಗೂ ಅದು ಬಹು ಕಾಲದವರೆಗೂ ಮಾಸುವುದಿಲ್ಲ ಎಂದು ನಂಬಿದ್ದೇನೆ. ನಾವು ಬೇರೆಯಾಗಿ ಐದು ವರ್ಷಗಳಾದರೂ ಸಹ ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ,” ಎಂದು ಇದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಭಾರಿ ವೈರಲ್​ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋವನ್ನು ಹೆಚ್ಚು ಹೆಚ್ಚು ಶೇರ್​ ಮಾಡುತ್ತಿದ್ದಾರೆ.

ಇದನ್ನು ಓದಿ :ಏನ್​ ಖದರ್​ ಲುಕ್​ ಗುರೂ.. ಗಡ್ಡದಾರಿಗಳಿಗೆ ಯಶ್​ ಅವರೇ ಬಾಸ್​: ನ್ಯೂ ಗೆಟಪ್​ ನೀವೇ ನೋಡಿ..

ಕನ್ನಡದಲ್ಲೂ ನಟಿಸಿದ್ದ ಲಕ್ಮೀ ರೈ

ಲಕ್ಷ್ಮೀ ರೈ ಬೆಂಗಳೂರಿನವರು. ಆದರೆ ಮಿಂಚಿದ್ದು ಮಾತ್ರ ತೆಲುಗು, ತಮಿಳು ಚಿತ್ರರಂಗದಲ್ಲಿ. ಈಕೆ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ವಾಲ್ಮೀಕಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟಿದ್ದರು. ಕಲ್ಪನ, ಝಾನ್ಸಿ, ಅಟ್ಟಹಾಸ ಸಿನಿಮಾಗಳಲ್ಪಿ ಲಕ್ಷ್ಮೀ ರೈ ನಟಿಸಿದ್ದಾರೆ. ಇನ್ನು ಇವರ ಜೂಲಿ ಸಿನಿಮಾದಲ್ಲಿ ಸಖತ್​ ಬೋಲ್ಡ್​ ಹಾಗೂ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಖತ್​ ಸುದ್ಧಿಯಾಗಿತ್ತು.
Published by:Vasudeva M
First published: