Priyanka Chopra: ಮುದ್ದಾದ ಮಗಳ ವಿಡಿಯೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ  ತಮ್ಮ ಮಗಳು ಮಾಲ್ತಿ ಮೇರಿ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇನ್‌ಸ್ಟಾಗ್ರಾಮ್​ನಲ್ಲಿ ಮಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಮಗಳ ಜೊತೆ ಪ್ರಿಯಾಂಕಾ

ಮಗಳ ಜೊತೆ ಪ್ರಿಯಾಂಕಾ

  • Share this:
ಬಾಲಿವುಡ್‌ನ 'ದೇಸಿ ಗರ್ಲ್',  ಗ್ಲೋಬಲ್​ ಸ್ಟಾರ್ (Global Star) ಪ್ರಿಯಾಂಕಾ ಚೋಪ್ರಾ (Priyanka Chopra)  ಕೆಲ ದಿನಗಳ ಹಿಂದಷ್ಟೇ ತಮ್ಮ ಅಭಿಮಾನಿಗಳಿಗೆ ತನ್ನ ಮಗುವಿ ದರ್ಶನ ಮಾಡಿಸಿದ್ದಾರೆ . ನಟಿ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಚಿತ್ರವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ರು. ಇದೀಗ ಮಗುವಿನ ವಿಡಿಯೋವನ್ನು ಶೇರ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮಗಳನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ (Social Media) ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ  ತಮ್ಮ ಮಗಳು ಮಾಲ್ತಿ ಮೇರಿ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.  ಇನ್‌ಸ್ಟಾಗ್ರಾಮ್​ನಲ್ಲಿ ಮಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಹಾಡಿಗೆ ತಲೆದೂಗಿದ ಮುದ್ದು ಕಂದ

ಈ ವಿಡಿಯೋದಲ್ಲಿ ಸೋನಮ್ ಕಪೂರ್-ಅಭಿಷೇಕ್ ಬಚ್ಚನ್ ಅವರ ಚಿತ್ರ ದೆಹಲಿ 6ನ ಸಸುರಾಲ್ ಗೆಂಡಾ ಫೂಲ್ ಹಾಡನ್ನು (Sasural Genda Phool) ನಾವು  ಕೇಳಬಹುದು. ಈ ಸುಂದರ ವಿಡಿಯೋದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಮಗಳು ಮಾಲ್ತಿ ಸಂಗೀತವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅವರ ಹಾಡಿನ ಪ್ರತೀ ಪದಗಳಿಗೂ ಮಗು ತಲೆದೂಗುತ್ತಿತ್ತು.











View this post on Instagram






A post shared by Priyanka (@priyankachopra)






ಅಭಿಮಾನಿಗಳ ಪ್ರೀತಿಯ ಕಾಮೆಂಟ್

ಶನಿವಾರ ಮುಂಜಾನೆಯ ಸಮಯ ಹೀಗಿತ್ತು ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಮಗುವನ್ನು ಹಿಡಿದು ತೆಗೆದ ಸೆಲ್ಫಿ ಫೋಟೋವನ್ನೂ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟಿಜೆನ್​ಗಳು ಬಹಳ ಸುಂದರವಾಗಿದೆ  ಕಾಂಪ್ಲಿಮೆಂಟ್ಸ್​​ ನೀಡಿದ್ದಾರೆ.


ಮಗುವಿನ ಫೋಟೋ ಹಂಚಿಕೊಂಡಿದ್ದ ನಟಿ

ಮೊದಲ ಚಿತ್ರದಲ್ಲಿ, ಪ್ರಿಯಾಂಕಾ, ತನ್ನ ಏಳು ತಿಂಗಳ ಮಗಳನ್ನು ಅಪ್ಪಿಕೊಂಡು ಸೆಲ್ಫಿ ತೆಗೆದುಕೊಂಡಿದ್ದರು. ಈ ಫೋಟೋ ಕೆಳಗೆ ಇತರರಂತೆ ಪ್ರೀತಿಸಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra: ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ


ಕೆಲ ದಿನಗಳ ಹಿಂದೆ ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ದಂಪತಿ ಮೊದಲ ಬಾರಿಗೆ ಮಗಳ ಫೋಟೋ ಶೇರ್​ ಮಾಡಿದ್ದರು. ಅದರಲ್ಲಿ, ಮಾಲ್ತಿಯ ಟೀ ಶರ್ಟ್ ಮೇಲೆ 'ದೇಸಿ ಗರ್ಲ್' ಎಂದು ಬರೆಯಲಾಗಿತ್ತು. ಈ ಚಿತ್ರಕ್ಕೆ'ದೇಸಿ ಗರ್ಲ್' ಎಂಬ ಶೀರ್ಷಿಕೆ ಕೊಟ್ಟಿದ್ದರು. ಚಿತ್ರದಲ್ಲಿ ಮಾಲ್ತಿಯ ಮುಖ ಅರ್ಧದಷ್ಟು ಮಾತ್ರ ಗೋಚರಿಸಿತ್ತು. ಪುಟ್ಟ ಮಗುವಿನ ಫೋಟೋ ಸಖತ್ ಕ್ಯೂಟ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.





ಬಾಡಿಗೆ ತಾಯಿ  ಮೂಲಕ ಮಗು ಪಡೆದ ದಂಪತಿ

ಪ್ರಿಯಾಂಕಾ ಮತ್ತು ಅವರ ಪತಿ, ಗಾಯಕ ನಿಕ್ ಜೋನಾಸ್ ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯಿ  ಮೂಲಕ ತಮ್ಮ ಮಗಳನ್ನು ಪಡೆದಿದ್ದಾರೆ. ಈ ಜೋಡಿಯು ಹಲವಾರು ಸಂದರ್ಭಗಳಲ್ಲಿ ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

Actress Priyanka Chopra shared daughter another video
ಮಗಳ ಜೊತೆ ಪ್ರಿಯಾಂಕಾ


ಮಾಲ್ಟಿ ಮೊದಲ 100 ದಿನಗಳನ್ನು ನವಜಾತ ತೀವ್ರ ನಿಗಾ ಘಟಕದಲ್ಲಿ ಕಳೆದರು. ಅನುಭವದ ಬಗ್ಗೆ ಮಾತನಾಡುತ್ತಾ,  “ಈ ತಾಯಂದಿರ ದಿನದಂದು ನಾವು ಕಳೆದ ಕೆಲವು ತಿಂಗಳುಗಳ ಬಗ್ಗೆ ಮತ್ತು ನಾವು ಈಗ ತಿಳಿದಿರುವ ರೋಲರ್ ಕೋಸ್ಟರ್ ಅನ್ನು ಪ್ರತಿಬಿಂಬಿಸದೆ ಇರಲು ಸಾಧ್ಯವಿಲ್ಲ. ಅನೇಕ ಜನರು ಸಹ ಅನುಭವಿಸಿದ್ದಾರೆ. NICU ನಲ್ಲಿ 100 ಪ್ಲಸ್ ದಿನಗಳ ನಂತರ, ನಮ್ಮ ಮಗು ಅಂತಿಮವಾಗಿ ಮನೆಗೆ ಬಂದಿದ್ದಾಳೆ. ಪ್ರತಿಯೊಂದು ಪ್ರಯಾಣವು ವಿಶಿಷ್ಟವಾಗಿದೆ. ನಮ್ಮದು ಸವಾಲಿನ ಕೆಲವು ತಿಂಗಳುಗಳಾಗಿದ್ದರೂ, ಪ್ರತಿ ಕ್ಷಣವೂ ಎಷ್ಟು ಅಮೂಲ್ಯ ಮತ್ತು ಪರಿಪೂರ್ಣವಾಗಿದೆ. ಪ್ರಿಯಾಂಕಾ ಅವರು ತಾಯಂದಿರ ದಿನದಂದು ವಿಶೇಷ ಪೋಸ್ಟ್ ಅನ್ನು ಹಾಕಿದ್ರು.
Published by:Pavana HS
First published: