Priyanka Chopra: ಮಗಳಿಗೆ ಮುದ್ದಾದ ಹೆಸರು ಹುಡುಕ್ತಿದ್ದಾರಂತೆ ಪ್ರಿಯಾಂಕಾ ಚೋಪ್ರಾ-ನಿಕ್​!

ಮೊನ್ನೆ ಪ್ರಿಯಾಂಕಾ ಅವರ ಮನೆಯಲ್ಲಿ ಅವರ ಪುಟ್ಟ ಮಗು ಬಂದಾಗಿನಿಂದ ಹೇಗೆ ಅವರ ಮನೆಯ ದೃಶ್ಯ ಸಂಪೂರ್ಣವಾಗಿ ಬದಲಾಗಿದೆ ಎಂಬುದರ ಬಗ್ಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.ಈ ಮಧ್ಯೆ, ಈ ಪುಟ್ಟ ಮಗುವಿಗೆ ಪ್ರಿಯಾಂಕಾ ಅವರು ಏನು ಹೆಸರಿಟ್ಟಿದ್ದಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಿಗೂ ಇರುತ್ತದೆ ಅಲ್ಲವೇ?

ಪ್ರಿಯಾಂಕ ಚೋಪ್ರಾ, ನಿಕ್​ ಜೊನಾಸ್​

ಪ್ರಿಯಾಂಕ ಚೋಪ್ರಾ, ನಿಕ್​ ಜೊನಾಸ್​

  • Share this:
ಮೊನ್ನೆ ಅಷ್ಟೇ ಬಾಲಿವುಡ್(Bollywood) ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ತಮ್ಮ ಮನೆಯಲ್ಲಿನ ಕೆಲವು ದೃಶ್ಯಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ನಮಗೆ ಇನ್ನೂ ಆ ನೆನಪು ಮಾಸದಿರುವ ಮುಂಚೆಯೇ ಇನ್ನೊಂದು ಸುದ್ದಿ ಬಂದಿದೆ ನೋಡಿ. ಮೊನ್ನೆ ಪ್ರಿಯಾಂಕಾ ಅವರ ಮನೆಯಲ್ಲಿ ಅವರ ಪುಟ್ಟ ಮಗು ಬಂದಾಗಿನಿಂದ ಹೇಗೆ ಅವರ ಮನೆ(Home)ಯ ದೃಶ್ಯ ಸಂಪೂರ್ಣವಾಗಿ ಬದಲಾಗಿದೆ ಎಂಬುದರ ಬಗ್ಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.ಈ ಮಧ್ಯೆ, ಈ ಪುಟ್ಟ ಮಗುವಿಗೆ ಪ್ರಿಯಾಂಕಾ ಅವರು ಏನು ಹೆಸರಿಟ್ಟಿ(Name)ದ್ದಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಿಗೂ ಇರುತ್ತದೆ ಅಲ್ಲವೇ?

ಹೌದು.. ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೊನಾಸ್(Nick Jonas) ಅವರು ತಮ್ಮ ಮೊದಲ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಪುಟ್ಟ ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಮಾಡಿರುವ ಸಮಾರಂಭ ಸಹ ತುಂಬಾನೇ ಅದ್ದೂರಿಯಾಗಿತ್ತು.

ಇನ್ನೂ ಮಗಳಿಗೆ ಹೆಸರಿಟ್ಟಿಲ್ವಂತೆ ನಿಕ್​-ಪಿಗ್ಗಿ!

ಈ ದಂಪತಿಗಳು ಅವರ ಈ ಪುಟ್ಟ ಮಗುವನ್ನು ಅವರ ಮನೆಗೆ ಸ್ವಾಗತಿಸಿದ್ದಾಗಿನಿಂದಲೂ, ಇಂದಿನವರೆಗೆ ಅಭಿಮಾನಿಗಳು ಪುಟ್ಟ ಮಗುವಿನ ಬಗ್ಗೆ ಯಾವುದೇ ಸುದ್ದಿಯನ್ನು ಕೇಳಲು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ, ಪ್ರಿಯಾಂಕಾ ಅವರ ತಾಯಿ ಡಾ. ಮಧು ಚೋಪ್ರಾ, ದಂಪತಿಗಳು ತಮ್ಮ ನವಜಾತ ಶಿಶುವಿಗೆ ಇನ್ನೂ ಹೆಸರನ್ನು ಅಂತಿಮಗೊಳಿಸಿಲ್ಲ ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: ಡಿಪ್ಪಿ ಎದೆ ನೋಡಿ ಹೀಗೆಲ್ಲ ಹೇಳಿದ್ರಂತೆ! ಸ್ತನ ಕಸಿ ಮಾಡಿಸ್ಕೋ ಅಂದವರಿಗೆ `ಪದ್ಮಾವತಿ’ ಹೇಳಿದ್ದೇನು?

ಅಜ್ಜಿಯಾಗಿದ್ದಕ್ಕೆ ಸಂತೋಷವಾಯ್ತು ಎಂದ ನಟಿ ತಾಯಿ!

ಶನಿವಾರದಂದು ಪ್ರಿಯಾಂಕಾ ಚೋಪ್ರಾ ಮಧು ತನ್ನ ಸೌಂದರ್ಯವರ್ಧಕ ಕ್ಲಿನಿಕ್‌ನ 14 ವರ್ಷಗಳ ವಾರ್ಷಿಕೋತ್ಸವವನ್ನು ಆಚರಿಸಿದರು. ಅದಕ್ಕಾಗಿ ಮುಂಬೈನಲ್ಲಿ ಒಂದು ಚಿಕ್ಕ ಕಾರ್ಯಕ್ರಮ ಸಹ ಹಮ್ಮಿಕೊಂಡಿದ್ದರು. ಅಲ್ಲಿ ಅವರು ತನ್ನ ಮೊದಲ ಮೊಮ್ಮಗಳ ಬಗ್ಗೆ ಮನೋರಂಜನಾ ಮಾಧ್ಯಮಗಳ ಜೊತೆಗೆ ಮನಬಿಚ್ಚಿ ಮಾತನಾಡಿದರು.“ನಾನು ಅಜ್ಜಿಯಾಗಿದ್ದಕ್ಕೆ ತುಂಬಾ ಸಂತೋಷಪಟ್ಟೆ. ನಾನು ಯಾವಾಗಲೂ ಖುಷಿಯಾಗಿರುತ್ತೇನೆ, ಮೊಮ್ಮಗಳು ಬಂದ ಆ ಕ್ಷಣ ಇನ್ನೂ ಹೆಚ್ಚು ಸಂತೋಷವಾಗಿದೆ" ಎಂದು ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಛೇ.. ಛೇ.. ಸ್ಟೇಜ್​ ಮೇಲೆ ಹಿಂಗಾ ಮಾಡೋದು ಸಲ್ಲು ಭಾಯ್​? ಪೂಜಾ ಹೆಗ್ಡೆಗೂ ಮುಜುಗರ ಮಾಡ್ಬಿಟ್ರಿ!

ಇದಲ್ಲದೆ, ಪ್ರಿಯಾಂಕಾ ಮತ್ತು ನಿಕ್ ಅವರು ತಮ್ಮ ಹೆಣ್ಣು ಮಗುವಿಗೆ ಹೆಸರಿಟ್ಟಿದ್ದಾರೆಯೇ ಎಂದು ಕೇಳಿದಾಗ, ಮಧು ಅವರು "ನಾವು ಆಕೆಯ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಏಕೆಂದರೆ ಅದಕ್ಕೆ ಪುರೋಹಿತರು ಬಂದು ನಮಗೆ ಒಂದು ಹೆಸರನ್ನು ನೀಡಿದಾಗ ಮಾತ್ರವೇ ಆಕೆಗೆ ಹೆಸರಿಡುತ್ತೇವೆ” ಎಂದು ಹೇಳಿದರು.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿರುವ ಜೋಡಿ!

ಜನವರಿ 22, 2022 ರಂದು, ಪ್ರಿಯಾಂಕಾ ಮತ್ತು ನಿಕ್ ತಮ್ಮ ಮಗುವಿನ ಆಗಮನವನ್ನು ಘೋಷಿಸಿದಾಗ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆಗ ದಂಪತಿಗಳು ತಮ್ಮ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯ ಪುಟದಲ್ಲಿ "ನಾವು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಸ್ವಾಗತಿಸಿದ್ದೇವೆ ಎಂದು ದೃಢೀಕರಿಸಲು ನಮಗೆ ತುಂಬಾ ಸಂತೋಷವಾಗಿದೆ. ನಾವು ನಮ್ಮ ಕುಟುಂಬದ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಈ ವಿಶೇಷ ಸಮಯದಲ್ಲಿ ನಾವು ಗೌರವಯುತವಾಗಿ ಗೌಪ್ಯತೆಯನ್ನು ಕೇಳುತ್ತೇವೆ. ತುಂಬಾ ಧನ್ಯವಾದಗಳು" ಎಂದು ಬರೆದುಕೊಂಡಿದ್ದರು.

ಪಿಗ್ಗಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳು!

ಪ್ರಿಯಾಂಕಾ ಹಾಲಿವುಡ್‌ನಲ್ಲಿ ಅನೇಕ ಆಸಕ್ತಿದಾಯಕ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಅವರು ಶೀಘ್ರದಲ್ಲಿಯೇ ಹಾಲಿವುಡ್ ಚಲನಚಿತ್ರವಾದ ‘ಟೆಕ್ಸ್ಟ್ ಫಾರ್ ಯು’ ಮತ್ತು ‘ಸಿಟಾಡೆಲ್’ ನಲ್ಲಿ ನಟಿಸಲಿದ್ದಾರೆ. ಇವುಗಳು ವೆಬ್ ಶೋ ಗಳಾಗಿದೆ. ಹಾಗೂ, ಅವರು ಇನ್ನೊಂದು ಮದುವೆಯ ಹಾಸ್ಯ ಕಥೆಯನ್ನು ಒಳಗೊಂಡ ಪ್ರಾಜೆಕ್ಟ್‌ನಲ್ಲಿ ನಟಿಸಲಿದ್ದು, ಇದಕ್ಕೆ ಮಿಂಡಿ ಕಾಲಿಂಗ್ ಅವರ ಜತೆ ಜೊತೆಗೂಡಿದ್ದಾರೆ.
Published by:Vasudeva M
First published: