ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಂಡ ಗ್ಲೋಬಲ್ ಸ್ಟಾರ್ (Global Star) ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas) ತಮ್ಮ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ (Malti Meri Chopra Jonas) ಎಂದು ಹೆಸರಿಟ್ಟು ನಾಮಕರಣ ಮಾಡಿದ್ದು, ಎಲ್ಲರಿಗೂ ಗೊತ್ತೇ ಇದೆ. ಮೂರು ತಿಂಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡು ಸುದ್ದಿಯಾಗಿದ್ದರು. ಆದರೆ, ಆ ಮಗುವಿಗೆ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ 100 ದಿನ NICU ಅಲ್ಲಿ ಚಿಕಿತ್ಸೆ ಪಡೆದು ಮಗು ಮನೆಗೆ ಬಂದಿದೆ. ವಿಶ್ವ ತಾಯಂದಿರ ದಿನದಂದು ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಶೇರ್ ಮಾಡಿಕೊಂಡಿದ್ದಾರೆ.
ಮಗಳನ್ನು ನೆನೆದು ಪ್ರಿಯಾಂಕಾ ಚೋಪ್ರಾ ಭಾವುಕ!
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ತಮ್ಮ ಮಗಳು ಮಾಲ್ಟಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಸುದೀರ್ಘ ಸಂದೇಶವನ್ನು ಪೋಸ್ಟ್ ಮಾಡಿದ್ದು, ತನ್ನ ಮಗಳು ಅಕಾಲಿಕವಾಗಿ ಜನಿಸಿದ್ದಾಳೆ ಮತ್ತು 100 ದಿನಗಳಿಂದ NICU (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ದಲ್ಲಿ ಇದ್ದಳು ಎಂದು ಹೇಳಿದ್ದಾರೆ. ದಂಪತಿಗಳು ತಮ್ಮ ಮಗಳನ್ನು ಜನವರಿಯಲ್ಲಿ ಸರ್ಗೇಟ್ ಮೂಲಕ ಪಡೆದಿದ್ದರು.
ಮನಗೆ ಮಗಳು ಬಂದಿದ್ದಕ್ಕೆ ಖುಷಿ ಪಟ್ಟ ಜೋಡಿ!
ಪ್ರಿ ಮೆಚ್ಚುರ್ ಬರ್ತ್ ಆಗಿದ್ದರಿಂದ ಮಗುಗೆ ಕೆಲ ಆರೋಗ್ಯ ಸಮಸ್ಯೆ ಇತ್ತು.ಕೆಲ ತಿಂಗಳುಗಳಿಂದ ನಾವು ಸಮಸ್ಯೆ ಅನುಭವಿಸುತ್ತಿದ್ದೆ. ಯಾರ ಬಳಿಯೂ ಹಂಚಿಕೊಳ್ಳದ ನೋವಿನಲ್ಲಿ ಇದ್ದೆವು. ಇದೀಗ ನಮ್ಮ ಮುದ್ದು ಕಂದಮ್ಮ ನಮ್ಮ ಮನೆಗೆ ಕೊನಗೂ ಬಂದಿದೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಗಳ ಜೊತೆ ಇರುವ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: KGF 2 ಸಿನಿಮಾಗೆ 25 ದಿನಗಳ ಸಂಭ್ರಮ, ರಾಕಿ ಭಾಯ್ ಅಬ್ಬರಕ್ಕೆ ಪತರುಗುಟ್ಟಿದ ವರ್ಲ್ಡ್ ಬಾಕ್ಸ್ ಆಫೀಸ್!
ಸರೋಗಸಿ ಮೂಲಕ ಮಗು ಪಡೆದಿದ್ದ ಪಿಗ್ಗಿ-ನಿಕ್!
ಕಳೆದ ಜನವರಿ 22ರಂದು ಸೋಶಿಯಲ್ ಮೀಡಿಯಾ ಮೂಲಕ ಮಗಳ ಜನನದ ಕುರಿತು ದಂಪತಿಗಳು ಬಹಿರಂಗಪಡಿಸಿದ್ದರು, "ಸರೋಗಸಿ ಮೂಲಕ ನಾವು ನಮ್ಮ ಮಗುವನ್ನು ಸ್ವಾಗತಿಸಿದ್ದೇವೆ. ಈ ವಿಶೇಷ ಸಮಯದಲ್ಲಿ ನಾವು ನಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸಲು ಮತ್ತು ಗೌಪ್ಯತೆ ಕಾಪಾಡಲು ಸಹಕರಿಸಿ” ಅಂತಾ ಪ್ರಿಯಾಂಕಾ ತಮ್ಮ ಪೋಸ್ಟ್ನಲ್ಲಿ ಕೇಳಿಕೊಂಡಿದ್ದರು.
ಇದನ್ನೂ ಓದಿ: ಇವ್ರಿಗೆ ವಯಸ್ಸೇ ಆಗಲ್ಲ ಅನ್ಸುತ್ತೆ, ಆಗ ಹೇಗಿದ್ರೂ ಈಗಲೂ ಹಾಗೇ ಇದ್ದಾರೆ ದಂತದ ಬೊಂಬೆ!
ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಎಂದು ಹೆಸರಿಟ್ಟ ನಟಿ!
ಪ್ರಿಯಾಂಕ ಮಗಳ ಜನನ ಪ್ರಮಾಣಪತ್ರದ ಪ್ರಕಾರ, ಜನವರಿ 15ರಂದು ರಾತ್ರಿ 8 ಗಂಟೆಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ ಎಂದು ತಿಳಿದುಬಂದಿದೆ. ಈವರೆಗೂ ದಂಪತಿಗಳು ಅವರು ಮಗುವಿನ ಫೋಟೋವನ್ನು ಎಲ್ಲೂ ಬಹಿರಂಗ ಪಡಿಸಿಲ್ಲ. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗು ಪಡೆದಿರುವ ಅವರು ತಮ್ಮ ಮುದ್ದು ಮಗಳಿಗೆ ನಾಮಕರಣ ಮಾಡಿದ್ದಾರೆ ಎನ್ನಲಾಗಿದೆ. ಪ್ರಿಯಾಂಕಾ ಚೋಪ್ರಾ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರು ಇಟ್ಟಿದ್ದಾರೆ ಎಂದು ಹಲವೆಡೆ ವರದಿಯಾಗಿದೆ. ನೆಟ್ಟಿಗರು ಮಾಲ್ತಿ ಮೇರಿ ಚೋಪ್ರಾ ಜೋನಸ್ ಹೆಸರಿನ ಬಗ್ಗೆ ಸದ್ಯ ಹಾಸ್ಯಭರಿತವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ