Pushpa 2: ಪುಷ್ಪ 2 ಚಿತ್ರದಲ್ಲಿ ಮತ್ತೋರ್ವ ಕನ್ನಡತಿ? ಇಲ್ಲಿದೆ ಹೊಸ ಅಪ್ಡೇಟ್ ​

ಪುಷ್ಪ ಚಿತ್ರದ ಮೊದಲ ಭಾಗವು ಭರ್ಜರಿ ಹಿಟ್​ ಆಗಿದೆ. ಇದರ ಬೆನ್ನಲ್ಲೇ ಪುಷ್ಪ 2 ಚಿತ್ರದ ಸಿದ್ಧತೆಗಳು ಭರದಿಂದ ಸಾಗಿದೆ. ನಿರ್ದೇಶಕ ಸುಕುಮಾರ್​ ಸಹ 2ನೇ ಭಾಗವನ್ನು ಮತ್ತಷ್ಟು ಅದ್ಧೂರಿಯಾಗಿ ಮಾಡಲು ಯೋಚಿಸಿದ್ದಾರಂತೆ. ಇದರ ಭಾಗವಾಗಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಮತ್ತೋರ್ವ ಕನ್ನಡತಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ವರ್ಷ ಬಿಡುಗಡೆಯಾದ ಪುಷ್ಪ (Pushpa) ಚಿತ್ರವು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ಅಲ್ಲದೇ ಈ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ (Allu Arjun) ನ್ಯಾಷನಲ್ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚಿದರು. ಅಲ್ಲದೇ ಬಾಲಿವುಡ್​ ನಲ್ಲಿ (Bollywood) ಪುಷ್ಪ ಚಿತ್ರದ ಕ್ರೇಜ್​ ಸಖತ್ ಆಗಿಯೇ ವರ್ಕೌಟ್ ಆಯಿತು. ಇದೀಗ ಚಿತ್ರದ 2ನೇ ಭಾಗವು ಸಿದ್ದಗೊಳ್ಳುತ್ತಿದೆ. ಅಲ್ಲದೇ ಪುಷ್ಪ ಚಿತ್ರದ 2ನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಿದೆ. ಇದರ ನಡುವೆ ಇನ್ನೂ ಪುಷ್ಪ ಚಿತ್ರದ 2ನೇ ಭಾಗವೇ ಬಿಡುಗಡೆ ಆಗಿಲ್ಲ. ಆದರೆ ಇದಕ್ಕೂ ಮೊದಲೇ ಪುಷ್ಪ ಚಿತ್ರದ 3ನೇ ಭಾಗದ ಕುರಿತು ಸುದ್ದಿಯೊಂದು ಟಾಲಿವುಡ್​ನಲ್ಲಿ ಹರಿದಾಡಿತ್ತು. ಇದೀಗ ಮತ್ತೊಂದು ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಪುಷ್ಪ 2 ಚಿತ್ರದಲ್ಲಿ ಕನ್ನಡದ ಮತ್ತೊಂದು ನಟಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಈಗಾಗಲೇ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯಿಸಿದ್ದು, ಇದೀಗ ಇನ್ನೊಬ್ಬ ನಟಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಪುಷ್ಪ 2 ಚಿತ್ರದಲ್ಲಿ ಪ್ರಿಯಾಮಣಿ:

ಹೌದು, ಈಗಾಗಲೇ ಪುಷ್ಪ ಚಿತ್ರದ ಮೊದಲ ಭಾಗವು ಭರ್ಜರಿ ಹಿಟ್​ ಆಗಿದೆ. ಇದರ ಬೆನ್ನಲ್ಲೇ ಪುಷ್ಪ 2 ಚಿತ್ರದ ಸಿದ್ಧತೆಗಳು ಭರದಿಂದ ಸಾಗಿದೆ. ನಿರ್ದೇಶಕ ಸುಕುಮಾರ್​ ಸಹ 2ನೇ ಭಾಗವನ್ನು ಮತ್ತಷ್ಟು ಅದ್ಧೂರಿಯಾಗಿ ಮಾಡಲು ಯೋಚಿಸಿದ್ದಾರಂತೆ. ಇದರ ಭಾಗವಾಗಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಮತ್ತೋರ್ವ ಕನ್ನಡತಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಹೌದು, ಬಹುಭಾಷಾ ನಟಿ ಪ್ರಿಯಾಮಣಿ ಪುಷ್ಪ 2 ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವರದಿಯೊಂದು ಟಾಲಿವುಡ್​ ನಲ್ಲಿ ಹರಿದಾಡುತ್ತಿದೆ.

ಪ್ರಿಯಾಮಣಿ ಸದ್ಯ ಶಾರುಖ್ ಖಾನ್ ನಟನೆಯ, ಅಟ್ಲೀ ನಿರ್ದೇಶನದ 'ಜವಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ಪುಷ್ಪ 2' ಸಿನಿಮಾದಲ್ಲಿಯೂ ಇವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಪುಷ್ಪ 2 ಚಿತ್ರದಲ್ಲಿ ನಟ ವಿಜಯ್ ಸೇತುಪತಿಗೆ ಜೊತೆಯಾಗಿ ಪ್ರಿಯಾಮಣಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇದನ್ನೂ ಓದಿ: Pushpa: ಬರಲಿದೆ ‘ಪುಷ್ಪ ಪಾರ್ಟ್ 3‘, ಬಿಗ್ ಅಪ್​ಡೇಟ್​ ನೀಡಿದ ನಟ ಫಹಾದ್ ಫಾಸಿಲ್

ಬರಲಿದೆಯೇ ಪುಷ್ಪ-3?:

ಇಂತಹದೊಂದು ಸುದ್ದಿ ಇದೀಗ ಟಾಲಿವುಡ್​ ವಲಯದಲ್ಲಿ ಹರಿದಾಡುತ್ತಿದೆ.  ಪುಷ್ಪ - 3 ಬಗ್ಗೆ ನಟ ಫಹಾದ್​​ ಫಾಸಿಲ್ ಮಾತನಾಡಿದ್ದು, ‘ಮೊದಲಿಗೆ ನಿರ್ದೇಶಕ ಸುಕುಮಾರ್​ ಅವರು​ ನನಗೆ ಕಥೆ ಹೇಳಿದಾಗ ಈ ಸಿನಿಮಾ ಕೇವಲ ಒಂದು ಭಾಗದಲ್ಲಿ ತೆರೆಕಾಣಬೇಕಾದ ಸಿನಿಮಾ ಆಗಬೇಕಿತ್ತು. ಆದರೆ ನಂತರ ಎರಡನೇ ಪಾರ್ಟ್​ಗೆ ಪ್ಲ್ಯಾನ್​ ಮಾಡಲಾಯಿತು. ಸುಕುಮಾರ್​ ಅವರು​ ಇತ್ತೀಚೆಗೆ ನನ್ನ ಬಳಿ ಮಾತನಾಡಿದಾಗ ಮೂರನೇ ಭಾಗಕ್ಕೆ ತಯಾರಾಗುವಂತೆ ಹೇಳಿದ್ದಾರೆ‘ ಎಂದು ಹೇಳುವ ಮೂಲಕ ಪುಷ್ಪ 3 ಬರುವ ಕುರಿತು ಮಾಹಿತಿ ನೀಡಿದರು. ಆದರೆ ಈ ಕುರಿತು ನಿರ್ದೇಶಕ ಸುಕುಮಾರ್ ಅಥವಾ  ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Pushpa 2: ಪುಷ್ಪ 2 ಚಿತ್ರಕ್ಕಾಗಿ ಸಂಭಾವನೆ ಹೆಚ್ಚಿಸಿಕೊಂಡ್ರಾ ಅಲ್ಲು ಅರ್ಜುನ್? ಕೋಟಿಗಳಿಗೆ ಬೆಲೆನೇ ಇಲ್ವಾ?

ಹೇಗಿರಲಿದೆ ಪುಷ್ಪ 2 ಚಿತ್ರ:

ಇನ್ನು, ಪುಷ್ಪ ಮೊದಲ ಭಾಗವು ಸೂಪರ್ ಹಿಟ್ ಆದ ಹಿನ್ನಲೆ 2ನೇ ಭಾಗಕ್ಕೆ ಭರ್ಜರಿ ತಯಾರಿಗಳು ನಡೆದಿವೆ,. ಹೀಗಾಗಿ 2ನೇ ಭಾಗವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ಪುಷ್ಪ 2 ಸಿನಿಮಾದಲ್ಲಿ ಈ ಬಾರಿ ಅಲ್ಲು ಅರ್ಜುನ್​ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆಯಂತೆ. ಪುಷ್ಪರಾಜ್​ ಹೇಗೆ ಬೆಳೆಯುತ್ತಾ ಹೋಗುತ್ತಾನೆ ಹಾಗೂ ಹೇಗೆ ಯಶಸ್ಸು ಪಡೆಯುತ್ತಾ ಎಂಬುದನ್ನ ತೋರಿಸಲಾಗುತ್ತದೆ.

ಅಲ್ಲದೇ, ಇಡೀ ಪುಷ್ಪ 2 ಚಿತ್ರದಲ್ಲಿ ಪುಷ್ಪರಾಜ್ ಆರ್ಭಟ ಹೆಚ್ಚಿರಲಿದೆ, ಹಾಗಾಗಿ ರಶ್ಮಿಕಾ ಮಂದಣ್ಣ ಪಾತ್ರದಲ್ಲಿ ಬದಲಾವಣೆಯಾಗುತ್ತದೆ. ಹೆಚ್ಚಾಗಿ ಅವರನ್ನು ತೋರಿಸುವುದಿಲ್ಲವಂತೆ. ಅವಶ್ಯಕ ಇರುವ ಜಾಗಗಳಲ್ಲಿ ಮಾತ್ರ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಡ್ಯೂರೇಷನ್​ ಕಡಿಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Published by:shrikrishna bhat
First published: