Priyamani: ಮಾತಾಡವ್ರು ಸಾವಿರ ಮಾತನಾಡಿಕೊಳ್ಳಲ್ಲಿ.. ನಾನ್​ ಯಾವುದಕ್ಕೂ ಕೇರ್​ ಮಾಡಲ್ಲ ಅಂದಿದ್ಯಾಕೆ ಪ್ರಿಯಾಮಣಿ?

ಎಷ್ಟೋ ಜನ ನಟ ನಟಿಯರು ಜನರು ಹಬ್ಬಿಸಿರುವ ವದಂತಿ(Rumor)ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವರಾಯ್ತು ಅವರ ಕೆಲಸವಾಯ್ತು ಎಂಬಂತೆ ಇರುತ್ತಾರೆ, ಅವರ ಸಾಲಿನಲ್ಲಿ ಬರುವ ನಟಿ ಎಂದರೆ ಅವರು ಪ್ರಿಯಾಮಣಿ(Priyamani) ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನಟಿ ಪ್ರಿಯಾಮಣಿ

ನಟಿ ಪ್ರಿಯಾಮಣಿ

  • Share this:

ಸಾಮಾನ್ಯವಾಗಿ ಚಲನಚಿತ್ರೋದ್ಯಮದಲ್ಲಿ ಇರುವ ನಟ ನಟಿಯರ ಬಗ್ಗೆ ಮತ್ತು ಅವರ ವೈಯಕ್ತಿಕ ಜೀವನ(Personal Life)ದ ಬಗ್ಗೆ ಅನೇಕ ರೀತಿಯ ವದಂತಿಗಳು, ಉಹಾಪೋಹಗಳು ಪ್ರತಿದಿನ ಹರಿದಾಡುತ್ತಲೇ ಇರುವುದನ್ನು ನಾವು ನೋಡುತ್ತೇವೆ. ಚಿತ್ರೋದ್ಯಮದಲ್ಲಿರುವ ನಟ(Hero) ಮತ್ತು ನಟಿಯರಿಗೆ(Heroine)ಕೇ ಅಭಿಮಾನಿ(Fans)ಗಳ ದೊಡ್ಡ ಬಳಗವೇ ಇರುತ್ತದೆ ಮತ್ತು ಅವರನ್ನು ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಅನೇಕ ಜನ ಅಭಿಮಾನಿಗಳು ಫಾಲೋ ಮಾಡುತ್ತಿರುತ್ತಾರೆ. ಎಂದರೆ ಅವರ ಬಗ್ಗೆ ಇರುವ ಪ್ರತಿಯೊಂದು ಸುದ್ದಿಯನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಅವರ ಅಭಿಮಾನಿಗಳಿಗೆ ಇರುವುದಂತೂ ನಿಜವಾದ ಸಂಗತಿ. ಎಷ್ಟೋ ಜನ ನಟ ನಟಿಯರು ಜನರು ಹಬ್ಬಿಸಿರುವ ವದಂತಿ(Rumor)ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವರಾಯ್ತು ಅವರ ಕೆಲಸವಾಯ್ತು ಎಂಬಂತೆ ಇರುತ್ತಾರೆ, ಅವರ ಸಾಲಿನಲ್ಲಿ ಬರುವ ನಟಿ ಎಂದರೆ ಅವರು ಪ್ರಿಯಾಮಣಿ(Priyamani) ಎಂದು ಹೇಳಿದರೆ ತಪ್ಪಾಗುವುದಿಲ್ಲ.


‘ಪಾತ್ರಕ್ಕೂ ನಿಜ ಜೀವನಕ್ಕೂ ಯಾವುದೇ ಸಂಬಂಧ ಇಲ್ಲ’

ಇತ್ತೀಚೆಗೆ ವೆಬ್ ಶೋಗಳಲ್ಲಿ ನಟಿ ಪ್ರಿಯಾಮಣಿ ತಮ್ಮ ವಿಭಿನ್ನವಾದ ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಎಂದು ಹೇಳಬಹುದು. ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ’ಹಿಸ್ ಸ್ಟೋರಿ’ ನಂತರ ಅವರು ವೆಬ್ ಸೀರೀಸ್ ‘ಭಾಮಕಲಾಪಂ’ ನಲ್ಲಿ ಅನುಪಮ ಎಂಬ ಪಾತ್ರದೊಂದಿಗೆ ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಇವರು ಮನೋರಂಜನಾ ಮಾಧ್ಯಮದವರೊಂದಿಗೆ ನಡೆಸಿದ ವಿಶೇಷ ಚಾಟ್‌ನಲ್ಲಿ, ನಟಿ ಪ್ರಿಯಾಮಣಿ ಅವರು ತಮ್ಮ ಪಾತ್ರ ಅನುಪಮ ಅವರೊಂದಿಗೆ ಅವರ ಬದುಕು ಸಂಬಂಧ ಹೊಂದಿಲ್ಲ ಎಂಬುದರ ಬಗ್ಗೆ ತೆರೆದಿಟ್ಟರು, ಅನುಪಮ ಪಾತ್ರವು ಒಬ್ಬ ಗೃಹಿಣಿಯಾಗಿ ಮನೆಯಲ್ಲಿ ಅಡುಗೆ ಮಾಡುವುದನ್ನು ಇಷ್ಟ ಪಡುತ್ತಾರೆ ಎಂದು ಹೇಳಿದರು.


ಇದನ್ನು ಓದಿ: ಕ್ರಿಕೆಟರ್ಸ್​ಗೆ ದುಡ್ಡು ಕೊಟ್ಟು `ಶ್ರೀವಲ್ಲಿ’ ಡಾನ್ಸ್​ ಮಾಡ್ಸಿದ್ರಾ ಪುಷ್ಪ ಟೀಂ? ಎಲ್ಲಾ ಪ್ರಚಾರದ ಗಿಮಿಕ್ಕು ಗುರೂ!

ಪತಿಯೇ ಎಲ್ಲ ಅಡುಗೆ ಮಾಡ್ತಾರೆ ಎಂದ ಪ್ರಿಯಾಮಣಿ

"ನಾನು ನನ್ನ ವೆಬ್ ಸೀರೀಸ್‌ನಲ್ಲಿ ಬರುತ್ತಿರುವ ಅನುಪಮ ಪಾತ್ರದಂತೆ ಇಲ್ಲ. ಪ್ರಿಯಾಮಣಿ ಅನುಪಮಳಂತೆ ಇಲ್ಲವೇ ಇಲ್ಲ. ಮೊದಲು ವಿಷಯ ಏನೆಂದರೆ ನನಗೆ ಅಡುಗೆ ಮಾಡಲು ಬರುವುದಿಲ್ಲ ಮತ್ತು ನನ್ನ ಪತಿಯೇ ಎಲ್ಲಾ ಅಡುಗೆಗಳನ್ನು ಮಾಡುತ್ತಾರೆ ಮತ್ತು ನಾನು ಬರೀ ಅದನ್ನೆಲ್ಲಾ ತಿನ್ನುವ ಕೆಲಸವನ್ನು ಮಾಡುತ್ತೇನೆ. ಎರಡನೆಯದಾಗಿ, ವೆಬ್ ಸೀರೀಸ್‌ನಲ್ಲಿ ಅನುಪಮ ಗದ್ದಲವನ್ನು ಇಷ್ಟ ಪಡುತ್ತಾಳೆ, ನಾನು ಇದಕ್ಕೆ ತುಂಬಾನೇ ವಿರುದ್ಧವಾಗಿ ನಾನು ನನ್ನ ಸ್ವಂತ ಜೀವನಕ್ಕೆ ಅಂಟಿಕೊಳ್ಳಲು ಇಷ್ಟಪಡುತ್ತೇನೆ. ನಾನು ಮೂಲತಃ ಮನೆಯಲ್ಲಿರುವ ಪಕ್ಷಿ ಮತ್ತು ಬಹುಶಃ ಅಗತ್ಯವಿದ್ದಾಗ ಮಾತ್ರವೇ ಹೊರಗೆ ಹೋಗುತ್ತೇನೆ” ಎಂದು ನಟಿ ಹೇಳಿದರು.


ಇದನ್ನು ಓದಿ : ಬಾಯಿಗೆ ಬಂದ ಹಾಗೇ ಮಾತನಾಡಿ ಸಿಕ್ಕಾಪಟ್ಟೆ ಟ್ರೋಲ್​, ಕೊನೆಗೂ ತಪ್ಪಾಯ್ತು ಕ್ಷಮಿಸಿಬಿಡಿ ಎಂದ ನಟಿ ಶ್ವೇತಾ!

ರೂಮರ್​​ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ನಟಿ!

ನಾನು ಎಂದಿಗೂ ಅನುಪಮಳಂತೆ ಆಗಲು ಬಯಸುತ್ತೇನೆ ಎಂದು ನಾನು ಭಾವಿಸುವುದಿಲ್ಲ" ಎಂದು ಪ್ರಿಯಾಮಣಿ ನಿಜ ಜೀವನದಲ್ಲಿ ತನಗೂ ಮತ್ತು ಅನುಪಮ ಪಾತ್ರಕ್ಕೂ ಎಷ್ಟು ವ್ಯತ್ಯಾಸವಿದೆ ಎಂಬುದರ ಬಗ್ಗೆ ಬಿಚ್ಚಿಟ್ಟರು. ಅವರ ವೆಬ್ ಸೀರೀಸ್‌ನ ಕಥಾವಸ್ತುವಿನ ಮಾದರಿಯಲ್ಲಿ, ಅವರು ಈ ವಿವಾದಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ವದಂತಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ಪ್ರಿಯಾಮಣಿ “ನಾನು ಅದನ್ನು ನಿಭಾಯಿಸಲು ಕಲಿತಿದ್ದೇನೆ. ನೀವು ಅದಕ್ಕೆ ಹೆಚ್ಚು ಪ್ರತಿಕ್ರಿಯಿಸಿದರೆ, ಅದು ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಹಾಕಿದಂತಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.


ಯಾವುದು ಸತ್ಯ ಅಂತ ನಿಮಗೆ ತಿಳಿದಿದ್ದರೆ ಸಾಕಂತೆ!

ಒಂದು ಕಿವಿಯಿಂದ ಅದನ್ನು ಕೇಳಿ ಇನ್ನೊಂದು ಕಿವಿಯಿಂದ ಅದನ್ನು ಬಿಟ್ಟುಬಿಡುವುದು ಒಳ್ಳೆಯದು, ಏಕೆಂದರೆ ಇಂದು ಅಲ್ಲದಿದ್ದರೂ, ನಾಳೆ ಆ ವಿಷಯದ ಬಗ್ಗೆ ಯಾರು ಮಾತಾಡುವುದಿಲ್ಲ” ಎಂದು ಹೇಳಿದರು.“ನೀವು ಅದಕ್ಕೆ ಹೆಚ್ಚು ಪ್ರತಿಕ್ರಿಯಿಸಿದರೆ ಜನರು ಅದರಲ್ಲಿ ಏನೋ ಸತ್ಯವಿದೆ ಎಂದು ಭಾವಿಸುತ್ತಾರೆ ಮತ್ತು ನಾನು ಹೇಳಿದಂತೆ, ಅದು ಬೆಂಕಿಗೆ ತುಪ್ಪ ಸೇರಿಸಿದಂತೆ ಎಂದು ನಾನು ನಂಬುತ್ತೇನೆ. ಯಾವುದು ಸತ್ಯ ಎಂದು ನಿಮಗೆ ತಿಳಿದಿರುತ್ತದೆ ಮತ್ತು ನೀವು ನಿಮ್ಮ ಕುಟುಂಬ ಮತ್ತು ಪತಿಗೆ ಅಷ್ಟೇ ಉತ್ತರಿಸಬೇಕು, ಇಡೀ ಜಗತ್ತಿಗೆ ಉತ್ತರಿಸಬೇಕಾಗಿಲ್ಲ” ಎಂದು ಹೇಳಿದರು.
Published by:Vasudeva M
First published: