Prathama Prasad: ಕಣ್ಣಿನ ಮೂಲಕವೇ ಅಭಿನಯಿಸುವ ನಟಿ ಪ್ರಥಮಾ ಪ್ರಸಾದ್ ಲೈಫ್​ಸ್ಟೋರಿ

Actress Prathama Prasad: ಇನ್ನು ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳನ್ನು ಮಾಡಿರುವ ಇವರು, ಮನಸೆಲ್ಲಾ ನೀನೇ ಧಾರವಾಹಿಯಲ್ಲಿ ನೆಗೆಟಿವ್​ ಪಾತ್ರದಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಪ್ರಥಮಾ ಪ್ರಸಾದ್

ಪ್ರಥಮಾ ಪ್ರಸಾದ್

  • Share this:
ಪ್ರಥಮಾ ಪ್ರಸಾದ್ (Prathama Prasad) , ಹೆಸರು ಕೇಳಿದರೆ ನಮಗೆ ನೆನಪಾಗುವುದು ಶಾಂತವಾದ ಮುಖ, ಕಣ್ಣಿನ ಮೂಲಕವೇ ಸಾವಿರಾರು ಭಾವನೆಗಳನ್ನು ಹೇಳುವ ಅಭಿನಯ. ಸುಮಾರು 10 ವರ್ಷಗಳಿಗೂ ಹೆಚ್ಚು ಸಮಯದಿಂದ ಕಿರುತೆರೆ (Small Screen) ಹಾಗೂ ಬೆಳ್ಳಿ ತೆರೆಯಲ್ಲಿ ವಿವಿಧ ಪಾತ್ರದಲ್ಲಿ ಮಿಂಚುತ್ತಿರುವ ನಟಿ, ಜನರ ಫೇವರೇಟ್​ ಆಗಿದ್ದಾರೆ. ಕನ್ನಡ ಸಿನಿಮಾ ರಂಗ (Kannada Film Industry) ಕಂಡ ಅದ್ಭುತ ನಟಿ ವಿನಯಾ ಪ್ರಸಾದ್ (Vinaya Prasad) ಅವರ ಮಗಳಾಗಿರುವ ಇವರು, ತಮ್ಮ ನಟನೆಯ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ಜರ್ನಿಯ ಬಗ್ಗೆ ನ್ಯೂಸ್18 ಕನ್ನಡ ಜೊತೆ ಮಾತನಾಡಿರುವ ನಟಿ, ಬಹಳಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಥಕ್ ಡ್ಯಾನ್ಸರ್ ಈ ನಟಿ

ಸಿನಿ ಜರ್ನಿ ಆರಂಭವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆಕ್ಟಿಂಗ್ ಕ್ಷೇತ್ರಕ್ಕೆ ಬರುತ್ತೇನೆ ಎನ್ನುವ ಆಲೋಚನೆ ಇರಲಿಲ್ಲ. ಅದರಲ್ಲೂ ನನ್ನ ತಾಯಿ, ವಿದ್ಯಾಭ್ಯಾಸ ಮುಗಿಯುವ ತನಕ ನಟನೆ ಮಾಡಬಾರದು ಎಂದು ಹೇಳಿದ್ದರು. ಅಲ್ಲದೇ ಮುಖ್ಯವಾಗಿ ನನಗೆ ಡ್ಯಾನ್ಸ್ ಎಂದರೆ  ಇಷ್ಟ ಎಂದಿದ್ದಾರೆ. ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಇವರು ಕಥಕ್  ನೃತ್ಯದಲ್ಲಿ ಪರಿಣಿತಿ ಹೊಂದಿದ್ದು, ವಿಧೂಷಿ ಪ್ರಥಮಾ ಪ್ರಸಾದ್ ರಾವ್ ಆಗಿದ್ದು, ಕಥಕ್​ನಲ್ಲಿ ವಿದ್ವತ್ ಮಾಡಿದ್ದಾರೆ. ಹಾಗಂತ ನಟಿ ನೇರವಾಗಿ ವಿದ್ಯಾಭ್ಯಾಸದ ನಂತರ ಬಣ್ಣ ಹಚ್ಚಿದವರಲ್ಲ, ನಾಲ್ಕು ವರ್ಷದ ಮಗುವಿದ್ದಾಗ ಅವರ ತಾಯಿಯ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರಂತೆ.

ಇನ್ನು ನಟಿ ಮೊದಲು ನಿರೂಪಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೈ ಟು ಡ್ಯಾನ್ ಸೀಸನ್ 2 ನಲ್ಲಿ ಸೃಜನ್ ಲೋಕೇಶ್​ ಜೊತೆ ನಿರೂಪಕಿಯಾಗಿ ಪ್ರಥಮಾ ಅವರು ಕಿರುತೆರೆ ಪ್ರವೇಶ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇವರ ಭಾಷೆ ಹಾಗೂ ಎಕ್ಸ್ಪ್ರೆಷನ್ ನೋಡಿದ ನಿರ್ದೇಶಕ ಮಿಲನ ಪ್ರಕಾಶ್​, ತಮ್ಮ ಸೀರಿಯಲ್​ ಬೊಂಬೆಯಾಟವಯ್ಯ ಎನ್ನುವ ಸೀರಿಯಲ್​ಗೆ ನಾಯಕಿಯಾಗಿ ಆಯ್ಕೆ ಮಾಡಿದ್ದರಂತೆ. ಅಲ್ಲಿಂದ ಆರಂಭವಾದ ಪ್ರಥಮಾ ಪ್ರಸಾದ್ ಅವರ ನಟನೆ, ಇದೀಗ ಒಲವಿನ ನಿಲ್ದಾಣ ಧಾರವಾಹಿಯ ತನಕ ನಡೆದು ಬಂದಿದೆ.ಮೊದಲ ಧಾರಾವಾಹಿಯಲ್ಲಿ ನಾಯಕಿಯಾಗಿ ಎಂಟ್ರಿ

ಮೊದಲ ಸೀರಿಯಲ್​ನಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿಗೆ ನಂತರ ಸಹ ಬಹಳ ಮುಖ್ಯವಾದ ಪಾತ್ರ ಮಾತ್ರವಲ್ಲದೇ, ಕಿರುತೆರೆಯ ಪ್ರಮುಖ ನಿರ್ದೇಶಕರ ಜೊತೆ ಧಾರಾವಾಹಿ ಮಾಡುವ ಅವಕಾಶ ಸಿಕ್ಕಿತ್ತು. ಕೆಲ ವರ್ಷಗಳ ಹಿಂದೆ ಪ್ರಸಾರವಾಗಿದ್ದ ಬಹು ಪ್ರಸಿದ್ದ ಧಾರಾವಾಹಿ ದೇವಿಯಲ್ಲಿ ಕೊಲ್ಲುರು ಮೂಕಾಂಬಿಕೆಯ ಪಾತ್ರಗಳಲ್ಲಿ ಇವರು ಮಿಂಚಿದ್ದರು. ದೇವಿಯ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ ನಟಿಗೆ ನಂತರ ಹಲವಾರು ದೇವಿಯ ಪಾತ್ರಗಳು ಒಲಿದು ಬಂದಿದೆ. ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ನಟಿ, ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.  ಮತ್ತೆ ಕಿರುತೆರೆಗೆ ಮರಳಿದ ನಟಿ, ಬಣ್ಣ ಹಚ್ಚಿದ್ದು ಮಹಾದೇವಿ ಧಾರಾವಾಹಿಯಲ್ಲಿ ದೇವಿಯ ಪಾತ್ರಕ್ಕೆ.ಜನ ಹೆಚ್ಚಾಗಿ ಇವರನ್ನು ದೇವಿಯ ಪಾತ್ರದಲ್ಲಿ ನೋಡಿದ್ದಾರೆ. ಮೆಚ್ಚಿದ್ದಾರೆ ಸಹ. ಆದರೆ ಇವರಿಗೆ ದೊಡ್ಡ ಬ್ರೇಕ್ ಕೊಟ್ಟ ಪಾತ್ರ ಎಂದರೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಬ್ರಹ್ಮಗಂಟು ಧಾರಾವಾಹಿ. ಇದರಲ್ಲಿ ನಾಯಕಿಯ ಸೋದರ ಅತ್ತೆಯ ಪಾತ್ರ ಮಾಡಿದ್ದ ಇವರು, ಜನರ ಮನಸ್ಸಿನಲ್ಲಿ ಅದ್ಭುತ ಅಭಿನಯದ ಮೂಲಕ ಅಚ್ಚೊತ್ತಿದ್ದಾರೆ. ನಟಿ ಹೇಳುವಂತೆ ಜನರು ಹೊರಗಡೆ ಸಹ ಈ ಅತ್ತೆಯ ಪಾತ್ರದ ಮೂಲಕ ಅವರನ್ನು ಗುರುತಿಸುತ್ತಾರಂತೆ. ಈ ಧಾರಾವಾಹಿಯಲ್ಲಿ ನಟಿಸಿ ವರ್ಷಗಳೇ ಕಳೆದರೂ ಸಹ ಜನ ಇನ್ನೂ ಇವರ ನಟನೆಯನ್ನು ಮರೆತಿಲ್ಲ.

ಹೆಚ್ಚು ದೇವಿ ಪಾತ್ರಗಳಲ್ಲಿ ಮಿಂಚಿರುವ ನಟಿ

ಹೆಚ್ಚು ದೇವಿ ಪಾತ್ರಗಳನ್ನು ಮಾಡಿರುವುದು, ಅದೇ ಪಾತ್ರಕ್ಕೆ ಸೀಮಿತವಾದಂತೆ ಅನಿಸುವುದಿಲ್ಲವೇ ಎನ್ನು ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕೆಲವೊಮ್ಮೆ ಫೀಲ್ ಆಗಿದ್ದು ಇದೆ, ನಾನು ಇನ್ನೂ ವಿಭಿನ್ನ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟಪಡುತ್ತೀನಿ. ಆದರೆ ಇದನ್ನು ನಾನು ಯಾವತ್ತೂ ಡ್ರಾ ಬ್ಯಾಕ್ ಎಂದು ತಿಳಿದುಕೊಂಡಿಲ್ಲ. ದೇವಿಯ ಪಾತ್ರ ಮಾಡುವುದು ಬಹಳ ಮುಖ್ಯವಾದ್ದು, ಅದನ್ನು ನಿಭಾಯಿಸುವುದು ಎಲ್ಲರ ಬಳಿ ಸಾಧ್ಯವಿಲ್ಲ. ಆದರೆ ನಾನು ಮಾಡುತ್ತೇನೆ ಎನ್ನುವ ಸಂತೋಷವಿದೆ ಎಂದಿದ್ದಾರೆ.  ಅಲ್ಲದೇ, ನನ್ನ ಪಾತ್ರಗಳು ನನಗೆ ಹೆಸರು ನೀಡಿದೆ. ಮುಖ್ಯವಾಗಿ ಜನ ನನ್ನನ್ನು ವಿನಯಾ ಪ್ರಸಾದ್ ಮಗಳು ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ನಟಿಯಾಗಿ ಗುರುತಿಸುತ್ತಾರೆ.

ಇದನ್ನೂ ಓದಿ: ಗರ್ಭಿಣಿ ಪತ್ನಿ ಬಗ್ಗೆ ಕ್ಯಾಮೆರಾ ಮುಂದೆಯೇ ಹೀಗನ್ನಬಾರದಿತ್ತು ರಣಬೀರ್ ಕಪೂರ್!ಸಾಮಾನ್ಯವಾಗಿ ಇಂಡಸ್ಟ್ರಿಯಲ್ಲಿ ಒಬ್ಬರ ಪಾತ್ರ ಒಮ್ಮೆ ಜನರಿಗೆ ಇಷ್ಟವಾದರೆ, ಡೈರೆಕ್ಟರ್​ಗೆ ಸಹ ಇಷ್ಟವಾಗುತ್ತದೆ. ಹಾಗೆಯೇ ಯಾವ ಪಾತ್ರ ಕೊಟ್ಟರೂ ಇವರು ಮಾಡುತ್ತಾರೆ ಎನ್ನುವ ನಂಬಿಕೆ ಬಂದರೆ ಸಾಕು. ಇನ್ನು ನನ್ನ ತಾಯಿ ಬಹಳ ಕಷ್ಟಪಟ್ಟು ಹೆಸರುಳಿಸಿದ್ದಾರೆ. ಆದರೆ ಅದನ್ನು ನಾನು ಯೂಸ್​ ಮಾಡಿಕೊಳ್ಳಬಾರದು. ನನ್ನದೇ ಆದ ಹೆಸರುಗಳಿಸಬೇಕು, ಗಳಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳನ್ನು ಮಾಡಿರುವ ಇವರು, ಮನಸೆಲ್ಲಾ ನೀನೇ ಧಾರವಾಹಿಯಲ್ಲಿ ನೆಗೆಟಿವ್​ ಪಾತ್ರದಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಮೇಶ್​ ಇಂದಿರಾ ನಿರ್ದೇಶನದ ಒಲವಿನ ನಿಲ್ದಾಣ ಎನ್ನುವ ಧಾರಾವಾಹಿಯಲ್ಲಿ ಸಹ ಪ್ರಥಮಾ ಅವರು ಬಹಳ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯ ಜೀವನದಲ್ಲಿ ಇವರಿಗೆ ಬಹಳ ಮಹತ್ವವಿದೆ. ಹೌದು, ನಾಯಕಿಯ ಸೋದರ ಅತ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಂದರ, ಸರಳ ಗೃಹಿಣಿಯಾಗಿ ಜನರಿಗೆ ಈಗಾಗಲೇ ಇಷ್ಟವಾಗಿದ್ದಾರೆ.

ಇದನ್ನೂ ಓದಿ: ಜೊತೆ ಜೊತೆಯಲಿ ಅನಿರುದ್ಧ್ ಒಂದೇ ಅಲ್ಲ, ಸೀರಿಯಲ್‌ಗಳಲ್ಲಿ ನಟರ ಕಿರಿಕ್ ಹೊಸದಲ್ಲ!

ಇನ್ನು 2011ರಿಂದ ಶ್ರುತಿ ನಾಯ್ಡ ಅವರ ಒಡನಾಟ ಹೊಂದಿರುವ ನಟಿ, ಅವರ ನಿರ್ದೇಶನದ ಬಗ್ಗೆ ಹಾಗೂ ಸ್ನೇಹ ಪರತೆಯ ಬಗ್ಗೆ ಹೇಳಿಕೊಂಡಿದ್ದಾರೆ. ನಟಿ ಹೇಳುವಂತೆ ಶ್ರುತಿ ಅವರು ಕೇವಲ ನಿರ್ದೇಶಕಿಯಾಗಿ ಮಾತ್ರವಲ್ಲದೇ, ಸಾಮಾಜಿಕವಾಗಿ ಸಹ ಹಲವಾರು ಸೇವೆಗಳನ್ನು ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಸಹ ಜನರಿಗೆ ಸಹಾಯ ಮಾಡಿದ್ದಾರೆ. ಇವರ ಜೊತೆ ಕೆಲಸ ಮಾಡುವುದು ನಿಜಕ್ಕೂ ಅದೃಷ್ಟ ಎನ್ನುತ್ತಾರೆ. ಸದ್ಯ ಒಲವಿನ ನಿಲ್ದಾಣ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಆರಂಭವಾದ ಕೆಲವೇ ದಿನಗಳಲ್ಲಿ ಜನರಿಗೆ ಬಹಳ ಇಷ್ಟವಾಗಿದೆ.
Published by:Sandhya M
First published: