Pranitha Subhash: ಹಿಂದುಗಳ ಜೀವ ಕೂಡ ಮುಖ್ಯ ಅಂದ ಪ್ರಣಿತಾ, ಉದಯಪುರ್​ ಘಟನೆ ವಿರುದ್ದ ಸಿಡಿದೆದ್ದ ನಟಿ

Udaipur Killing: ಇನ್ನು ಈ ವಿಚಾರವಾಗಿ ಪ್ರಣಿತಾ ಮಾತ್ರವಲ್ಲದೇ, ಹಿರಿಯ ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ಅಶೋಕ್ ಪಂಡಿತ್ ಸೇರಿದಂತೆ ಚಿತ್ರರಂಗದ ಗಣ್ಯರು ಭೀಕರ ಹತ್ಯೆಯ ವಿರುದ್ಧ ಕಿಡಿಕಾರಿದ್ದಾರೆ.

ನಟಿ ಪ್ರಣಿತಾ

ನಟಿ ಪ್ರಣಿತಾ

  • Share this:
ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದ ಹಿಂದೂ (Hindu) ಟೈಲರ್‌ನ ಭೀಕರ ಹತ್ಯೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಸಹ ಈ ಹತ್ಯೆಯನ್ನು ಖಂಡಿಸಿದ್ದಾರೆ. ಈಗಾಗಲೇ ದೇಶದಾದ್ಯಂತ ಪ್ರತಿಭಟನೆಗಳು, ಮೆರವಣಿಗೆ ನಡೆಯುತ್ತಿದ್ದು, ವಿಭಿನ್ನ ರೀತಿಯ ಅಭಿಯಾನಗಳು ಸಹ ಆರಂಭವಾಗಿದೆ. ಈಗ ಈ ಅಭಿಯಾನಕ್ಕೆ ಬಹುಭಾಷಾ ನಟಿ ಕನ್ನಡತಿ ಪ್ರಣಿತಾ ಸುಭಾಶ್​ (Pranitha Subhash) ಕೂಡ ಸಾಥ್ ನೀಡಿದ್ದು, ಹಿಂದೂ ಲಿವ್ಸ್ ಮ್ಯಾಟರ್(ಹಿಂದೂ ಜೀವ ಮುಖ್ಯ) ಎಂದು ಬರೆದಿರುವ ಫಲಕ ಹಿಡಿದು ಉದಯಪುರದ ಘಟನೆಯನ್ನು ಖಂಡಿಸಿದ್ದಾರೆ.

ಯಾರಾದರೂ ಕೇಳುತ್ತೀದ್ದೀರಾ? ಎಂದು ಪ್ರಶ್ನಿಸಿದ ನಟಿ

ಇಸ್ ಎನಿವನ್ ಲಿಸನಿಂಗ್? (ಯಾರಾದರೂ ಕೇಳಿಸಿಕೊಳ್ಳುತ್ತಿದ್ದೀರಾ?) ಎಂಬ ಕ್ಯಾಪ್ಶನ್‌ ಹಾಕಿರುವ ಫೋಟೋವೊಂದನ್ನು ನಟಿ ಶೇರ್ ಮಾಡಿಕೊಂಡಿದ್ದು ಅದರಲ್ಲಿ ಅವರು ಹಿಂದೂ ಲಿವ್ಸ್ ಮ್ಯಾಟರ್(ಹಿಂದೂ ಜೀವ ಮುಖ್ಯ) ಎಂದು ಬರೆದಿರುವ ಫಲಕ ಹಿಡಿದುಕೊಂಡಿದ್ದಾರೆ. ಮತಾಂಧರ ಹುಚ್ಚುಗೆ ಬಲಿಯಾದ ಹಿಂದೂ ಟೈಲರ್‌ನ ಹತ್ಯೆಗೆ ನ್ಯಾಯ ಕೇಳಿದ್ದಾರೆ.

I wish I had not seen the Udaipur video. Absolute terror. The screams in the background will echo in our minds and haunt us for a long time to come. Or will it? #JusticeForKanhaiyaLal

— Pranitha Subhash (@pranitasubhash) June 28, 2022

ಇದನ್ನೂ ಓದಿ: ನಾಗಚೈತನ್ಯ ಜೊತೆಗಿನ ಸಂಬಂಧದ ಬಗ್ಗೆ ಕ್ಲಾರಿಟಿ ಕೊಟ್ಟ ಶೋಭಿತಾ! ನಿಟ್ಟುಸಿರು ಬಿಟ್ಟ ಸ್ಯಾಮ್​ ಫ್ಯಾನ್ಸ್

ಈ ಕೃತ್ಯವನ್ನು "ಸಂಪೂರ್ಣ ಭಯೋತ್ಪಾದನೆ" ಎಂದು ಕರೆದಿರುವ ನಟಿ, "ನಾನು ಉದಯಪುರ ವಿಡಿಯೋವನ್ನು ನೋಡಬಾರದಿತ್ತು ಎಂದು ಅನಿಸುತ್ತಿದೆ. ಆ ನೋವಿನ ಕಿರುಚಾಟ ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತವೆ ಮತ್ತು ದೀರ್ಘಕಾಲದವರೆಗೆ ನಮ್ಮನ್ನು ಕಾಡುತ್ತವೆ. #JusticeForKanhaiyaLal."  ಎಂದು ಒತ್ತಾಯಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಸಹ ಈ ಹತ್ಯೆಯನ್ನು ವಿರೋಧಿಸಿ ಹ;ಲವಾರು ಪ್ರತಿಭಟನೆಗಳು ನಡೆದಿವೆ. ನಂಜನಗೂಡಿನಲ್ಲೂ ಕೆಲ ವ್ಯಾಪಾರಿಗಳು ನನ್ನ ಕತ್ತು ಸೀಳಬೇಡಿ ಎಂದು ಬೋರ್ಡ್ ಹಿಡಿದುಕೊಂಡು ಹತ್ಯೆಯ ವಿರುದ್ದ ಅಭಿಯಾನ ಆರಂಭಿಸಿದ್ದು, ನಾನು ಸತ್ಯ ಹೇಳಲ್ಲ. ಹೇಳಿದವರ ಪರ ನಿಲ್ಲುವುದೂ ಇಲ್ಲ ಎಂಬೆಲ್ಲಾ ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿದ್ದಾರೆ.

Is anyone listening? pic.twitter.com/ecu4tjAfYD

— Pranitha Subhash (@pranitasubhash) June 29, 2022

ಅಲ್ಲದೇ,  ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತನ್ನು ಸೀಳಬೇಡಿ ಎಂದು ಫಲಕ ಹಿಡಿದು ಅಭಿಯಾನ ಆರಂಭಿಸಿದೆ.  ಇನ್ನು ಈ ವಿಚಾರವಾಗಿ ಪ್ರಣಿತಾ ಮಾತ್ರವಲ್ಲದೇ, ಹಿರಿಯ ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ಅಶೋಕ್ ಪಂಡಿತ್ ಸೇರಿದಂತೆ ಚಿತ್ರರಂಗದ ಗಣ್ಯರು ಭೀಕರ ಹತ್ಯೆಯ ವಿರುದ್ಧ ಕಿಡಿಕಾರಿದ್ದಾರೆ. ಆರೋಪಿಗಳು ಕತ್ತು ಸೀಳಿದ್ದಲ್ಲದೇ, ವಿಡಿಯೋ ಮಾಡಿ ಅದರಲ್ಲಿ ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನದ ಪ್ರತೀಕಾರ ಎಂದು ಹೇಳಿಕೊಂಡಿದ್ದಾರೆ. ಈ ಕೃತ್ಯಕ್ಕೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

Horrified… sad…. ANGRY… !#KanhaiyaLal

— Anupam Kher (@AnupamPKher) June 28, 2022

ಇದನ್ನೂ ಓದಿ: ಮೊದಲ ಮದುವೆಯ ನೋವಿನ ಕಥೆ ಬಿಚ್ಚಿಟ್ಟ ಸುಜಾತಾ, ನನಗೆ ಸೆಕೆಂಡ್​ ಚಾನ್ಸ್​ ಸಿಕ್ಕಿದೆ ಎಂದ ನಟಿ

ನಟ ಅನುಪಮ್ ಖೇರ್ ಟ್ವೀಟ್​

ಉದಯಪುರ ಹತ್ಯೆಯನ್ನು ಖಂಡಿಸಿ ನಟ ಅನುಪಮ್ ಖೇರ್ ಕೂಡ ಈ ಸುದ್ದಿ ಕೇಳಿ ಗಾಬರಿ, ದುಃಖ, ಕೋಪ ಎಲ್ಲವೂ ಒಟ್ಟಿಗೆಯಾಗುತ್ತಿದೆ.! #KanhaiyaLal. ಎಂದು ಟ್ವೀಟ್​ ಮಾಡಿದ್ದಾರೆ/ಇನ್ನು ಅಶೋಕ್ ಪಂಡಿತ್ ಸಹ ಟ್ವೀಟ್ ಮಾಡಿ,  "ಇದು ಕೇವಲ ಹಿಂದೂ 'ಟೈಲರ್'ನ ಕೊಲೆಯಲ್ಲ, ಹಿಂದೂಗಳ ಹತ್ಯೆಗಳ 'ಟ್ರೇಲರ್'! #JusticeforKanhaiyaLal." ಎಂದು ಬರೆದುಕೊಂಡಿದ್ದಾರೆ.  ಈ ಘಟನೆಯಿಂದಾಗಿ ರಾಜಸ್ಥಾನ ನಗರದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದ್ದು, ಕರ್ಫ್ಯೂ ವಿಧಿಸಲಾಗಿದೆ. ವೀಡಿಯೊ ಕ್ಲಿಪ್‌ನಲ್ಲಿ, ಹತ್ಯೆ ಮಾಡಿದ ಆರೋಪಿಗಳು  ಆ ವ್ಯಕ್ತಿಯನ್ನು "ತಲೆ ಕತ್ತರಿಸಿ" ಎಂದರೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದರು.
Published by:Sandhya M
First published: