HOME » NEWS » Entertainment » ACTRESS PRANITHA SAYS DARSHAN HAS A HEART OF GOLD AE

Darshan-Pranitha: ದರ್ಶನ್​ ಚಿನ್ನದಂತ ಮನಸ್ಸಿರುವ ಮನುಷ್ಯ ಎಂದ ಪ್ರಣೀತಾ ಸುಭಾಷ್​..!

ದರ್ಶನ್​ ಜೊತೆ ಪೊರ್ಕಿ ಚಿತ್ರದಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಕನ್ನಡದ ಪ್ರೇಕ್ಷಕರಿಗೆ ನಾಯಕಿಯಾಗಿ ಪರಿಚಯವಾದವರು. ನಿನ್ನೆ ಟ್ವಿಟರ್​ನಲ್ಲಿ #AskPranitha ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು.

Anitha E | news18-kannada
Updated:July 6, 2020, 2:28 PM IST
Darshan-Pranitha: ದರ್ಶನ್​ ಚಿನ್ನದಂತ ಮನಸ್ಸಿರುವ ಮನುಷ್ಯ ಎಂದ ಪ್ರಣೀತಾ ಸುಭಾಷ್​..!
ದರ್ಶನ್ ಹಾಗೂ ಪ್ರಣೀತಾ
  • Share this:
ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಷ್​ ಕನ್ನಡದ ಜೊತೆಗೆ ತೆಲುಗು , ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅವರ ಅಭಿನಯದ ಕನ್ನಡ ಸಿನಿಮಾ ರಾಮನ ಅವತಾರ ಬಿಡುಗಡೆಯಾಗಬೇಕಿದೆ. ಆದರೆ ಹಿಂದಿ ಸಿನಿಮಾ 'ಭುಜ್​ ' ಹಾಗೂ 'ಹಂಗಾಮ 2' ರಿಲೀಸ್​ಗೆ ರೆಡಿಯಾಗಿವೆ. 

ದರ್ಶನ್​ ಜೊತೆ 'ಪೊರ್ಕಿ' ಚಿತ್ರದಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಕನ್ನಡದ ಪ್ರೇಕ್ಷಕರಿಗೆ ನಾಯಕಿಯಾಗಿ ಪರಿಚಯವಾದವರು. ನಿನ್ನೆ ಟ್ವಿಟರ್​ನಲ್ಲಿ #AskPranitha ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು.

Actress Pranitha says Darshan has heart of gold
ದರ್ಶನ್​ ಬಗ್ಗೆ ಟ್ವೀಟ್ ಮಾಡಿರುವ ಪ್ರಣೀತಾ ಸುಭಾಷ್​


'ಆಸ್ಕ್​ ಪ್ರಣೀತಾ' ಕಾರ್ಯಕ್ರಮದಲ್ಲಿ ಡಿಬಾಸ್ ದರ್ಶನ್ ಅಭಿಮಾನಿಗಳು, ದಚ್ಚು ಕುರಿತು ಒಂದು ಶಬ್ದದಲ್ಲಿ ಹೇಳಿ ಎಂದಿದ್ದಾರೆ. ಅದಕ್ಕೆ ಉತ್ತರಿಸಿರು ಪ್ರಣೀತಾ, ಅವರು ನನ್ನ ಮೊದಲ ಹೀರೋ ಅವರ ಬಗ್ಗೆ ಗೌರವ ಇದೆ. ಅಲ್ಲದೆ ಕೊರೋನ ಲಾಕ್​ಡೌನ್​ ವೇಳೆ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದಾರೆ ಎಂದು ಕೇಳಿದ್ದೇನೆ. ಅವರದ್ದು ಚಿನ್ನದಂತ ಮನಸ್ಸು ಇರಬೇಕು ಎಂದಿದ್ದಾರೆ.

 ಟ್ವೀಟಿಗರು ಡಾ. ರಾಜ್​ಕುಮಾರ್, ತಮಿಳು ನಟ ಸೂರ್ಯ, ಪುನೀತ್​ ರಾಜ್​ಕುಮಾರ್ ಹಾಗೂ ಪ್ರಣೀತಾರ ಹಿಂದಿ ಸಿನಿಮಾಗಳ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅವೆಲ್ಲದಕ್ಕೂ ನಟಿ ಸಖತ್​ ಕ್ಲಾಸಿಯಾಗಿ ಉತ್ತರಿಸಿದ್ದಾರೆ.

 ರಾಜ್​ಕುಮಾರ್ ಅವರು ಬಂಗಾರದ ಮನುಷ್ಯ, ಅವರ ಮಗ ಅಪ್ಪು, ಸೂರ್ಯ ಬಹಳ  ಸರಳ ವ್ಯಕ್ತಿತ್ವದ ಮನುಷ್ಯ ಎಂದು ಉತ್ತರಿಸಿದ್ದಾರೆ.

Rashmika Mandanna: ಪೋಸ್​ ಕೊಡಲು ಹೆದರುವ ರಶ್ಮಿಕಾ ಫೋಟೋಶೂಟ್​ಗಳಲ್ಲಿ ಕ್ಯಾಮೆರಾವನ್ನೇ ತಿಂದು ಬಿಡುವಂತೆ ಇರುತ್ತಾರಂತೆ..!ಇದನ್ನೂ ಓದಿ: ಫೋನ್​ನಲ್ಲಿ ಮಾತನಾಡುತ್ತಿರುವ ರಾಜ್​ಕುಮಾರ್​ರ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್..!
Published by: Anitha E
First published: July 6, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories