ಗ್ಲಾಮರ್ ಲುಕ್ (Glamour Look) ಹಾಗೂ ಒಳ್ಳೇ ನಟನೆಯಿಂದ ಟಾಲಿವುಡ್ (Tollywood) ಹಾಗೂ ಬಾಲಿವುಡ್ನಲ್ಲಿ (Bollywood) ಹೆಸರು ಮಾಡ್ತಿರೋ ದಕ್ಷಿಣ ಭಾರತದ ಬಹಳ ಹೆಸರು ಮಾಡ್ತಿರೋ ನಟಿಯರ ಸಾಲಿನಲ್ಲಿ ಪೂಜಾ ಹೆಗ್ಡೆ (Pooja Hegde) ಇದ್ದಾರೆ. ಹಲವು ಹಿಟ್ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರೋ ಪೂಜಾ ಗುಡ್ ನ್ಯೂಸ್ನ್ನು ನೀಡಿದ್ದಾರೆ. ಅದೇನು ಅಂದ್ರೆ, ಸಖತ್ ಮಿಂಚುತ್ತಿರೋ ನಟಿ ಪೂಜಾ ಹೆಗ್ಡೆ ಸದ್ಯ ತಮ್ಮ ಸ್ವತಂ ಮನೆಗೆ (Own House) ಹೋಗಿರುವ ಖುಷಿಯಲ್ಲಿದ್ದಾರೆ. ಸೂಪರ್ ಹಿಟ್ (Super hit) ಚಿತ್ರಗಳಲ್ಲಿ ನಟಿಸಿರೋ, ಸಖತ್ ಮೋಡಿ ಮಾಡಿರೋ ಪೂಜಾ ಹೆಗ್ಡೆ ಇದೀಗ ತಮ್ಮದೇ ಆದ ಸ್ವಂತ ಮನೆಯನ್ನು ನಿರ್ಮಿಸಿದ್ದು, ಮುಂಬೈಯಲ್ಲಿ (Mumbai) ಕಟ್ಟಿಸಿರೋ ಹೊಸ ಮನೆಯ ಗೃಹ ಪ್ರವೇಶ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ(Social Media) ಹಂಚಿಕೊಂಡಿದ್ದಾರೆ.
ಇಷ್ಟು ದಿನ ಮುಂಬೈನಲ್ಲಿ 6 ಕೋಟಿ ಬೆಲೆ ಬಾಳುವ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ತಂದೆ ತಾಯಿ ಹಾಗೂ ಸಹೋದರನ ಜೊತೆ ವಾಸವಿದ್ದ ಪೂಜಾ, ತಮ್ಮ ಸ್ವತಂ ಮನೆ ಕಟ್ಟುವ ಯೋಜನೆಯನ್ನು ರೂಪಿಸಿದ್ರು.
ಕಳೆದ ಅಕ್ಟೋಬರ್ನಲ್ಲಿ ಕೂಡಾ "ಬಿಲ್ಡಿಂಗ್ ಮೈ ಡ್ರೀಮ್ಸ್ " ಅಂತ ನಿರ್ಮಾಣ ಹಂತದಲ್ಲಿರೋ ಬ್ಲಾಕ್ ಅಂಡ್ ವೈಟ್ ಫೋಟೋವನ್ನು ಹಂಚಿಕೊಂಡಿದ್ರು. ಇದೀಗ ಮನೆಯು ಸಂಪೂರ್ಣವಾಗಿದ್ದು ಇಂದು ತಮ್ಮ ಕುಟುಂಬಸ್ಥರ ಜೊತೆ ಪೂಜೆ ಸಲ್ಲಿಸಿ ಮನೆಗೆ ಪ್ರವೇಶಿಸಿದ್ದಾರೆ, ಅದರ ಫೋಟೋವನ್ನು ಕೂಡಾ ಶೇರ್ ಮಾಡಿದ್ದಾರೆ.
ಸದ್ಯ ರಾಧೆ ಶ್ಯಾಂ ಸೇರಿದಂತೆ ಹಲವು ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ರೂ ಮನೆಯ ನಿರ್ಮಾಣದ ಕಾರ್ಯ ಹೇಗೆ ನಡೀತಿದೆ. ಮನೆಯ ಇಂಟಿರಿಯಲ್ ಹೇಗಿರಬೇಕು, ವಾಲ್ ಹಾಗೇ ಎಲ್ಲಾ ಕೆಲಸಗಳು ಹೇಗೆ ನಡೆಯುತ್ತಿದೆ ಅಂತ ನೋಡಿಕೊಳ್ತಿದ್ರು. ಈ ಬಗ್ಗೆ ಆಗಾಗ ಫೋಟೊಗಳನ್ನು ಕೂಡಾ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ತಿದ್ರು.
ಇದನ್ನೂ ಓದಿ: ‘ಆರ್ಆರ್ಆರ್’ಗೆ ಡಿಚ್ಚಿ ಕೊಡುತ್ತಾ ‘ಪವರ್‘ ಫುಲ್ ‘ಜೇಮ್ಸ್’? ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಕ್ಲಾಶ್
ಇದೀಗ ಹೊಸ ಮನೆಗೆ ಹೋಗಿರೋ ಫೋಟೋಗೆ ಅಭಿಮಾನಿಗಳು ಹಾಗೂ ಹಿತೈಷಿಗಳು ಪೂಜಾ ಹೆಗ್ಡೆಗೆ ನಿಮ್ಮ ಕನಸೆಲ್ಲವೂ ನನಸಾಗಲಿ ಅಂತ ಶುಭಾಶಯ ಕೋರಿದ್ದಾರೆ. ಈಗಾಗಲೇ ಹೌಸ್ಫುಲ್ 4, ಅಲ ವೈಕುಂಟಪುರಮುಲೋ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದ ಪೂಜಾ ಮನೆಯ ಖುಷಿಯ ಜೊತೆಗೆ ರಾಧೆ ಶ್ಯಾಂ ಸಿನಿಮಾದ ಯಶಸ್ಸಿಗೆ ಎದುರು ನೋಡ್ತಿದ್ದಾರೆ. ಈ ಹಿಂದೆ ಸ್ವಂತ ಮನೆ ನಿರ್ಮಿಸಿರೋ ಬಾಲಿವುಡ್ ನಟಿಯರಾದ ಊರ್ವಶಿ, ಕತ್ರಿನಾ ಸೇರಿದಂತೆ ಹಲವು ನಟಿಯರ ಸಾಲಿಗೆ ಈಗ ಪೂಜಾ ಹೆಗ್ಡೆ ಕೂಡಾ ಸೇರಿದ್ದಾರೆ. ಈ ಹೊಸ ಮನೆಯಲ್ಲಿ ಪೂಜಾ ತಮ್ಮ ತಂದೆ ತಾಯಿ ತಮ್ಮನ ಜೊತೆ ಕಾಲ ಕಳೆಯಲ್ಲಿದ್ದಾರೆ.
ಹಾಗೆ ಹೊಸ ಮನೆಯ ಜೊತೆಗೆ ಮತ್ತಷ್ಟು ಹೊಸ ಸಿನಿಮಾಗಳ ಮೂಲಕ ಜನರಿಗೆ ಮನರಂಜನೆ ನೀಡಲು ತಯಾರಿ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ಎಲ್ಲಾ ಕನಸುಗಳನ್ನು ಒಂದೊಂದಾಗೆ ನನಸು ಮಡ್ಕೊಳ್ತಿರೋ ಪೂಜಾ ಹೆಗ್ಡೆ ಸಕ್ಸಸ್ಗೆ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳ್ತಿದ್ದಾರೆ.
ಇದನ್ನೂ ಓದಿ: Oscar ಅಂಗಳದಲ್ಲಿ ‘ಜೈ ಭೀಮ್’, ರೇಸ್’ನಲ್ಲಿದೆ ಮಲಯಾಳಂನ ‘ಮರಕ್ಕರ್’
ಆದ್ರೆ ಮನೆ ಎಷ್ಟು ಬೆಲೆ ಬಾಳುತ್ತಿದೆ, ಮನೆಯ ಇಂಟಿರಿಯಲ್ ಹೇಗಿದೆ ಅನ್ನೋದರ ಬಗ್ಗೆ ಇನ್ನೂ ಪೂಜಾ ಹೆಗ್ಡೆ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಅಭಿಮಾನಿಗಳು ತಮ್ಮ ನಚ್ಚಿನ ನಟಿಯ ಹೊಸ ಮನೆಯನ್ನು ನೋಡಲು ಕಾಯ್ತಾ ಇದಾರೆ.
ವರದಿ: ಹಂಸ ಶ್ಯಾಮಲ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ