ಒಂದು ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಈ ಕನ್ನಡತಿ

Pooja Hegde: ದಕ್ಷಿಣ ಭಾರತದ ಸಿನಿ ರಂಗದಲ್ಲಿ ಸದ್ಯ ಬೇಡಿಕೆಯ ನಟಿಯಾಗಿದ್ದಾರೆ. ಈಗಾಗಲೇ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ಪೂಜಾ ಹೆಗ್ಡೆ. ಈ ಕಡಲೂರ ಬೆಡಗಿ ಸದ್ಯ ತಾವು ಪಡೆಯಲಿರುವ ಸಂಭಾವನೆಯಿಂದ ಸದ್ದು ಮಾಡುತ್ತಿದ್ದಾರೆ. 

Anitha E | news18-kannada
Updated:September 12, 2019, 4:08 PM IST
ಒಂದು ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಈ ಕನ್ನಡತಿ
ಕಡಲೂರ ಬೆಡಗಿ ಪೂಜಾ ಹೆಗ್ಡೆ
  • Share this:
ಕರಾವಳಿ ಹುಡುಗಿ ಕನ್ನಡದ ಬ್ಯೂಟಿ ಪೂಜಾ ಹೆಗ್ಡೆ ಟಾಲಿವುಡ್​ನಲ್ಲಿ ಶೈನ್​ ಆಗುತ್ತಿರುವ ನಟಿ. ಹೃತಿಕ್​ ರೋಷನ್​ ಅಭಿನಯದ 'ಮೊಹೆಂಜೋದಾರೊ' ಸಿನಿಮಾದ ಮೂಲಕ ಬಿ-ಟೌನ್​ಗೆ ಕಾಲಿಟ್ಟ ಪೂಜಾ ಸದ್ಯ ಟಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

ದಕ್ಷಿಣ ಭಾರತದ ಸಿನಿ ರಂಗದಲ್ಲಿ ಸದ್ಯ ಬೇಡಿಕೆಯ ನಟಿಯಾಗಿದ್ದಾರೆ. ಈಗಾಗಲೇ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ಪೂಜಾ ಹೆಗ್ಡೆ. ಈ ಕಡಲೂರ ಬೆಡಗಿ ಸದ್ಯ ತಾವು ಪಡೆಯಲಿರುವ ಸಂಭಾವನೆಯಿಂದ ಸದ್ದು ಮಾಡುತ್ತಿದ್ದಾರೆ.

Pooja Hegde looks stunning in recent photo shoot goes viral on social media
ನಟಿ ಪೂಜಾ ಹೆಗ್ಡೆ


ಹೌದು, ಪೂಜಾ ತಮ್ಮ ಮುಂದಿನ ಚಿತ್ರಕ್ಕೆ ಭಾರೀ ಸಂಭಾವನೆ ಪಡೆಯುತ್ತಿದ್ದಾರಂತೆ. ನಾಗರ್ಜುನ ಅವರ ಎರಡನೇ ಮಗತ್ರ ಅಖಿಲ್ ಜೊತೆ ಪೂಜಾ ಹೆಗಡೆ ಸಿನಿಮಾದಲ್ಲಿ  ಅಭಿನಯಿಸಲಿದ್ದಾರೆ. ಈ ಚಿತ್ರಕ್ಕಾಗಿ ಪೂಜಾ ಸಂಭಾವನೆ ಒಂದು ಕಾಲು ಕೋಟಿಯಂತೆ.

ಇದನ್ನೂ ಓದಿ: Pailwaan: ಪೈಲ್ವಾನ್​ ನೋಡಿ ಟ್ವೀಟ್​ ಮಾಡಿದ ಕಿಚ್ಚ ಸುದೀಪ್: ಕಣ್ಣೀರಿಟ್ಟ ಪ್ರಿಯಾ-ಸಾನ್ವಿ..!

ಅಂದಹಾಗೆ ಪೂಜಾ ಸದ್ಯ ಟಾಲಿವುಡ್‍ನಲ್ಲಿ ಸಖತ್ ಬ್ಯುಸಿಯಾಗಿದ್ದು, ಈ ವರ್ಷ ಮಹೇಶ್ ಬಾಬು ನಟನೆಯ 'ಮಹರ್ಷಿ' ಚಿತ್ರದಲ್ಲಿ ನಟಿಸಿದ್ದಾರೆ. ಹಾಗೆ ಎನ್‍ಟಿಆರ್ ಜೊತೆ 'ಅರವಿಂದ ಸಮೇತ', ಅಲ್ಲು ಅರ್ಜುನ್ ಜೊತೆ 'ಡಿ ಜೆ' ಚಿತ್ರಗಳಲ್ಲಿ ನಟಿಸಿರೋ ಪೂಜಾ ತೆಲುಗು ಚಿತ್ರರಂಗದಲ್ಲಿ ಹವಾ ಎಬ್ಬಿಸುತ್ತಿದ್ದಾರೆ.

 

Radhika Apte: ರಾಧಿಕಾ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸಲು ಇದೇ ಕಾರಣವಂತೆ..!


 
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ