Pooja Hegde: ಕೈಯಲ್ಲಿ ಸಿನಿಮಾಗಳು ಇಲ್ಲದೇ ಖಾಲಿ ಕೂತ ಪೂಜಾ ಹೆಗ್ಡೆ, ಸಂಭಾವನೆ ಹೆಚ್ಚಿಸಿಕೊಂಡಿದ್ದಕ್ಕೆ ಹಿಂಗಾಯ್ತಂತೆ!

ನಟಿ ಪೂಜಾ ಹೆಗ್ಡೆ ಹೆಚ್ಚಿನ ಸಂಭಾವನೆ ಪಡೆಯುವ ಮೂಲಕ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ‌. ಪೂಜಾ ಹೆಗ್ಡೆ ಒಂದು ಸಿನಿಮಾಗೆ ಅಂದಾಜು 3 ಕೋಟಿ ಪಡೆಯುತ್ತಾರೆ ಎಂಬ ಸುದ್ದಿ ಇದೆ.

ನಟಿ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ

  • Share this:
ಪೂಜಾ ಹೆಗ್ಡೆ(Pooja Hegde) ಬಗ್ಗೆ ಹೇಳಬೇಕು ಎಂದರೆ ಕನ್ನಡ ಬಗ್ಗೆ ಹೇಳಬೇಕು. ಯಾಕೆಂದರೆ ಈ ಮುದ್ದು ಮುಖದ ಚೆಲುವೆ ನಮ್ಮ ಕನ್ನಡದ ಹುಡುಗಿ. ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಬಾಲಿವುಡ್(Bollywood), ಟಾಲಿವುಡ್(Tollywood)​ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಭಾರತ ಚಿತ್ರರಂಗದ ಟಾಪ್​ ನಟಿಯರ ಲಿಸ್ಟ್​ನಲ್ಲಿ ಪೂಜಾ ಹೆಗ್ಡೆಯೂ ಇದ್ದಾರೆ. ಗ್ಲಾಮರ್ ಲುಕ್‌ (Glamour Look) ಹಾಗೂ ಒಳ್ಳೇ ನಟನೆಯಿಂದ   ಟಾಲಿವುಡ್ (Tollywood)  ಹಾಗೂ ಬಾಲಿವುಡ್‌ನಲ್ಲಿ (Bollywood) ಹೆಸರು ಮಾಡ್ತಿರೋ ದಕ್ಷಿಣ ಭಾರತದ ಬಹಳ ಹೆಸರು ಮಾಡ್ತಿರೋ ನಟಿಯರ ಸಾಲಿನಲ್ಲಿ ಪೂಜಾ ಹೆಗ್ಡೆ (Pooja Hegde)  ಇದ್ದಾರೆ. ಅದರಲ್ಲೂ ಸೌತ್​ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅಂದರೆ ಅದು ಪೂಜಾ ಹೆಗ್ಡೆ. ಇನ್ನೂ ಸೌತ್​ ಟಾಪ್​ ನಟಿ(South Top Heroin's)ಯರ ಲಿಸ್ಟ್​ನಲ್ಲಿ ರಶ್ಮಿಕಾ ಮಂದಣ್ಣ(Rashmika Mandanna), ಪೂಜಾ ಹೆಗ್ಡೆ, ಕೀರ್ತಿ ಸುರೇಶ್(Keerthi Suresh)​, ಸಾಯಿ ಪಲ್ಲವಿ(Sai Pallavi), ಹೀಗೆ ಹಲವರ ಹೆಸರಿದೆ. ಆದರೆ, ಪೈಪೋಟಿ ಇರುವುದು ಪೂಜಾ ಹೆಗ್ಢೆ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಅತಿ ಹೆ್ಚ್ಚು ಸಂಭಾವನೆ ಪಡೆಯುತ್ತಾರೆ.  ಆದರಲ್ಲೂ ಪೂಜಾ ಹೆಗ್ಡೆ ನಂಬರ್​ 1 ರಂದು ಸ್ಥಾನದಲ್ಲಿ ನಿಲ್ಲುತ್ತಾರೆ. ಆದರೆ ಈಗ ಸುದ್ದಿಯಾಗುತ್ತಿರುವ  ವಿಚಾರ ಅಂದರೆ, ಪೂಜಾ ಹೆಗ್ಡೆ ಅವರ ಡಿಮ್ಯಾಂಡ್(Demand)​ ಕಡಿಮೆಯಾಗುತ್ತಿದೆಯಂತೆ. ಯಾವುದೇ ಸಿನಿಮಾಗಳು ಪೂಜಾ ಅವರನ್ನು ಹುಡುಕಿಕೊಂಡು ಬರುತ್ತಿಲ್ಲವಂತೆ.

ಸಂಭಾವನೆ ಹೆಚ್ಚಿಸಿಕೊಂಡು ತಪ್ಪು ಮಾಡಿದ್ರಾ ಪೂಜಾ? 

ನಟಿ ಪೂಜಾ ಹೆಗ್ಡೆ ಹೆಚ್ಚಿನ ಸಂಭಾವನೆ ಪಡೆಯುವ ಮೂಲಕ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ‌. ಪೂಜಾ ಹೆಗ್ಡೆ ಒಂದು ಸಿನಿಮಾಗೆ ಅಂದಾಜು 3 ಕೋಟಿ ಪಡೆಯುತ್ತಾರೆ ಎಂಬ ಸುದ್ದಿ ಇದೆ. ಹೀಗಾಗಿ ಪೂಜಾ ಹೆಗ್ಡೆ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರಂತೆ. ಯಾವುದೇ ಸಿನಿಮಾಗಳು ಸಿಗದೇ ಪೂಜಾ ಹೆಗ್ಡೆ ಬೇಸರ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಮುಂದುವರೆದರೆ ಮುಂದೆ ಹೇಗೆ ಎನ್ನುವ ಪ್ರಶ್ನೆ ಪೂಜಾ ಹೆಗ್ಡೆ ಅವರನ್ನು ಕಾಡುತ್ತಿದೆಯಂತೆ. ಈ ಬಗ್ಗೆ ಕುಟುಂಬದವರ ಜೊತೆಯೂ ಚರ್ಚೆ ನಡೆಸಿದ್ದಾರಂತೆ ನಟಿ.

ಇದನ್ನು ಓದಿ: ಕನಸಿನ ಮನೆಗೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ.. ಸೋಷಿಯಲ್ ಮೀಡಿಯಾದಲ್ಲಿ ಗೃಹ ಪ್ರವೇಶದ ಫೋಟೊ ಹಂಚಿಕೊಂಡ ನಟಿ..

ಈಗ ಸಂಭಾವನೆ ಇಳಿಸಿಕೊಳ್ತಾರಾ ನಟಿ?

ಪೂಜಾ ಹೆಗ್ಡೆ ಸಂಭಾವನೆ ವಿಚಾರದಲ್ಲಿ ತುಂಬಾನೆ ಕಟ್ಟು ನಿಟ್ಟು. ಹೀಗಾಗಿ ನಿರ್ಮಾಪಕರು ಈಕಯ ಜೊತೆ ಸಿನಿಮಾ ಮಾಡಲು ನೂರು ಬಾರಿ ಯೋಚಿಸುತ್ತಾರೆ. ಪೂಜಾ ಹೆಗ್ಡೆಗೆ ಇಷ್ಟೊಂದು ದುಡ್ಡು ಕೊಡುವ ಬದಲಿಗೆ, ಹೊಸ ನಾಯಕಿಯರಿಗೆ ಅವಕಾಶ ಕೊಡುವುದೇ ಉತ್ತಮ ಎಂದು ತುಂಬಾ ನಿರ್ಮಾಪಕರು ಇವರ ಹೆಸರನ್ನು ಕೈಬಿಟ್ಟಿದ್ದಾರಂತೆ. ತಮಿಳಿನ 'ಮುಗಮುಡಿ' ಚಿತ್ರದಿಂದ ಬಣ್ಣದ ಲೋಕಕ್ಕೆ ಪೂಜಾ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಮತ್ತು 'ಆಚಾರ್ಯ' ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ.

ಇದನ್ನು ಓದಿ: ದೇವ್ರಿಗೆ ನನ್ನ ಬ್ರಾ ಸೈಜ್​ನದ್ದೇ ಚಿಂತೆ ಎಂದಿದ್ದ ನಟಿಗೆ ಸಂಕಷ್ಟ, ಶ್ವೇತಾ ವಿರುದ್ಧ ದಾಖಲಾಯ್ತು ಎಫ್​ಐಆರ್​!

ಕನಸಿನ ಮನೆಗೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ ಸದ್ಯ ತಮ್ಮ ಸ್ವತಂ ಮನೆಗೆ (Own House) ಹೋಗಿರುವ ಖುಷಿಯಲ್ಲಿದ್ದಾರೆ. ಸೂಪರ್ ಹಿಟ್ (Super hit) ಚಿತ್ರಗಳಲ್ಲಿ ನಟಿಸಿರೋ, ಸಖತ್ ಮೋಡಿ ಮಾಡಿರೋ ಪೂಜಾ ಹೆಗ್ಡೆ ಇದೀಗ ತಮ್ಮದೇ ಆದ ಸ್ವಂತ ಮನೆಯನ್ನು ನಿರ್ಮಿಸಿದ್ದು, ಮುಂಬೈಯಲ್ಲಿ (Mumbai) ಕಟ್ಟಿಸಿರೋ ಹೊಸ ಮನೆಯ ಗೃಹ ಪ್ರವೇಶ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ(Social Media) ಹಂಚಿಕೊಂಡಿದ್ದಾರೆ.
Published by:Vasudeva M
First published: