ಫೇಸ್​ಬುಕ್​ನಲ್ಲಿ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ನಿರ್ದೇಶಕ!

Payel Sarkar: ಪಾಯಲ್​ ಸರ್ಕಾರ್​ ಬಂಗಾಳಿ ನಟಿಯಾಗಿದ್ದು, ತನಗೆ ಬಂದಿರುವ ಅಶ್ಲೀಲ ಸಂದೇಶವನ್ನ ಗಮನಿಸಿದ ಮೊದಲು ಕೋಲ್ಕತ್ತಾ ಸೈಬರ್​ ಕ್ರೈಂ ಸೆಲ್​ ಅನ್ನು ಸಂಪರ್ಕಿಸಿದರು. ನಂತರ ಬರಾಕ್​ಪುರ್​ ಪೊಲೀಸ್​​ ಕಮೀಷನರೇಟ್​ಗೆ ನಿರ್ದೇಶಿಸಿದರು. ನಂತರ ಅಲ್ಲಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದರು.

Payel Sarkar

Payel Sarkar

 • Share this:
  ಬಂಗಾಳಿ ಮೂಲದ ನಟಿ ಪಾಯಲ್​​ ಸರ್ಕಾರ್ (Payel Sarkar)​ ಅವರಿಗೆ ಫೇಸ್​ಬುಕ್​ ಮೂಲಕ ನಿರ್ದೇಶಕರೊಬ್ಬರ ಹೆಸರಿನಲ್ಲಿ ಅಶ್ಲೀಲ ಸಂದೇಶವೊಂದು ಬಂದಿದ್ದು, ಈ ಬಗ್ಗೆ ನಟಿ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

  ಕಾಲಿವುಡ್​ನ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ ಹೆಸರಿನಲ್ಲಿ  ಫೇಸ್​ಬುಕ್ (Facebook)​ ಮೂಲಕ ರಿಕ್ವೆಸ್ಟ್​ ಬಂದಿದೆ. ರಿಕ್ವೆಸ್ಟ್​ ಸ್ವೀಕರಿಸಿದ ನಂತರ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರುಮಾಡಿದ್ದಾರೆ ಎಂದು ನಟಿ ಪಾಯಲ್​ ಸರ್ಕಾರ್​ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಪಾಯಲ್​ ಸರ್ಕಾರ್​ ಬಂಗಾಳಿ ನಟಿಯಾಗಿದ್ದು (Bangali Actor), ತನಗೆ ಬಂದಿರುವ ಅಶ್ಲೀಲ ಸಂದೇಶವನ್ನ ಗಮನಿಸಿದ ಮೊದಲು ಕೋಲ್ಕತ್ತಾ ಸೈಬರ್​ ಕ್ರೈಂ ಸೆಲ್​ ಅನ್ನು ಸಂಪರ್ಕಿಸಿದರು. ನಂತರ ಬರಾಕ್​ಪುರ್​ ಪೊಲೀಸ್​​ ಕಮೀಷನರೇಟ್​ಗೆ ನಿರ್ದೇಶಿಸಿದರು. ನಂತರ ಅಲ್ಲಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದರು.

  Dear sathya: ಫುಡ್ ಡೆಲಿವರಿ ಹುಡುಗರಿಂದ ಟ್ರೈಲರ್ ರಿಲೀಸ್! ಇವನಿಗೆ ಸಿನಿಮಾ ಮಾಡಿದರೆ ಪೋಸ್ಟರ್ ದುಡ್ಡೂ ಬರಲ್ಲ ಅಂದಿದ್ದರು!

  ಫೇಸ್​ಬುಕ್​ ಖಾತೆಯ ಮೂಲಕ ರಿಕ್ಚೆಸ್ಟ್​ ಕಳುಹಿಸಿದ ವ್ಯಕ್ತಿ ಪ್ರಾರಂಭದಲ್ಲಿ ಪಾಯಲ್​ಗೆ ಮುಂಬರುವ ಚಿತ್ರದ ಬಗ್ಗೆ ಸಂದೇಶ ಕಳುಹಿಸಿದ್ದಾರೆ. ನಂತರ ಸಿನಿಮಾದ ಇನ್ನಿತರ ವಿಚಾರಗಳನ್ನು ತಿಳಿಯುವಾಗ ವಿಷಯ ಬೇರೆಡೆ ತಿರುಗಿತು, ನಂತರ  ಅಸಭ್ಯ ಸಂದೇಶಗಳು ಬರಲಾರಂಭಿಸಿತು.

  Tokyo Paralympics: ಚಿನ್ನ ತಂದುಕೊಟ್ಟ ಅವನಿ ಲೇಖರ! ಭಾರತಕ್ಕೆ ಇಂದು ಒಂದೇ ದಿನ ನಾಲ್ಕು ಪದಕ!

  ದೂರು ದಾಖಲಿಸಿದ ಪೊಲೀಸರು ಪರಿಶೀಲನೆ ನಡೆದಿದ್ದಾರೆ. ಆದರೆ ಸಂದೇಶ  ಮತ್ತು ಫೇಸ್​ಬುಕ್​ ಖಾತೆಯನ್ನು ಗಮನಿಸಿದಾಗ ನಕಲಿ ಖಾತೆಯಿಂದ (Fake account) ಸಂದೇಶ ಬಂದಿದೆ ಎಂದು ಗೊತ್ತಾಗಿದೆ.

  ಇನ್ನು ಕಾಲಿವುಡ್ (Kollywood)​ ನಿರ್ದೇಶಕ ಕೂಡ ತನ್ನ ಹೆಸರು ಬಳಸಿಕೊಂಡು ಈ ರೀತಿಯ ಕೃತ್ಯಗೊಂಡಿದ್ದಕ್ಕೆ ಕೋಪಗೊಂಡಿದ್ದಾರೆ. ಪೊಲೀಸರ ಬಳಿ ತಪ್ಪಿತಸ್ಥರು ಯಾರೆಂದು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಸದ್ಯ ನಕಲಿ ಖಾತೆ ಡಿಆ್ಯಕ್ಟೀವ್​ ಆಗಿದೆ.
  Published by:Harshith AS
  First published: