Pavitra Lokesh: ಅಂದು ಸುಚೇಂದ್ರ ಪ್ರಸಾದ್ ಜೀವ ಎಂದಿದ್ದ ಪವಿತ್ರಾ ಲೋಕೇಶ್, ಇಂದೆನಾಯ್ತು? ಹಳೆ ವಿಡಿಯೋ ವೈರಲ್
ಪವಿತ್ರಾ ಲೋಕೇಶ್ ಅವರು ತೆಲುಗು (Telugu) ಚಾನೆಲ್ ಒಂದಕ್ಕೆ ನೀಡಿದ ಹಳೆಯ ಸಂದರ್ಶನವೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ಪವಿತ್ರಾ ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ ಮಾತುಗಳೇ ವೈರಲ್ ಆಗುತ್ತಿವೆ.
ಸದ್ಯ ಬಹುಭಾಷಾ ನಟಿ ಪವಿತ್ರ ಲೋಕೇಶ್ (Pavitra Lokesh) ಅವರ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಪವಿತ್ರ ಲೋಕೇಶ್ ಅವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು (Super Star Mahesh Babu) ಅವರ ಅಣ್ಣ ನಟ ನರೇಶ್ ಅವರ ಜೊತೆ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಈವರೆಗೂ ಪವಿತ್ರಾ ಲೋಕೇಶ್ ನೇರವಾಗಿ ಸ್ಷಷ್ಟನೆ ನೀಡಿಲ್ಲ. ಪವಿತ್ರಾ ಲೋಕೇಶ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ ಪವಿತ್ರಾ ಲೋಕೇಶ್ ಅವರು ತೆಲುಗು (Telugu) ಚಾನೆಲ್ ಒಂದಕ್ಕೆ ನೀಡಿದ ಹಳೆಯ ಸಂದರ್ಶನವೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ಪವಿತ್ರಾ ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ ಮಾತುಗಳೇ ವೈರಲ್ ಆಗುತ್ತಿವೆ.
ವೈರಲ್ ಆಯ್ತು 5 ವರ್ಷಗಳ ಹಿಂದಿನ ವಿಡಿಯೋ:
ಇನ್ನು, ಸುಮಾರು 5 ವರ್ಷದ ಹಿಂದಿನ ಹಳೆಯ ವಿಡಿಯೋ ವೈರಲ್ ಆಗಿದೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಕುರಿತ ವಿಷಯಗಳು ಎಲ್ಲಡೆ ಸಖತ್ ಚರ್ಚೆಯಾಗುತ್ತಿದ್ದರೂ ಪವಿತ್ರಾ ಲೊಕೇಶ್ ಅವರು ಈವರೆಗೂ ಇವುಗಳಿಗೆ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ ಪವಿತ್ರಾ ಲೋಕೇಶ್ ನೀಡಿದ ಸಂದರ್ಶನ ಇವುಗಳ ನಡುವೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪವಿತ್ರಾ ಅವರು ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಮಾತನಾಡಿರುವ ವಿಚಾರಗಳು ಎಲ್ಲಡೆ ಹರಿದಾಡುತ್ತಿವೆ.
ಸುಚೇಂದ್ರ ಪ್ರಸಾದ್ರನ್ನು ಪಡೆಯಲು ನಾನು ಅದೃಷ್ಟಶಾಲಿ:
ಇನ್ನು, ವೈರಲ್ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರನ್ನು ಹೊಗಳಿದ್ದು, ‘ಸುಚೇಂದ್ರ ಪ್ರಸಾದ್ ಅವರು ತುಂಬಾ ಒಳ್ಳೆಯ ವ್ಯಕ್ತಿ. ಅಂತವರು ಬೇರೆಲ್ಲೂ ಸಿಗಲ್ಲ. ಅಲ್ಲದೇ ಅವರಲ್ಲಿ ಯಾವೊಂದು ಚಿಕ್ಕ ಲೋಪವನ್ನೂ ಕಂಡುಹಿಡಿಯಲಾಗದು. ಸುಚೇಂದ್ರ ಪ್ರಸಾದ್ ಅವರನ್ನು ಪಡೆಯಲು ನಾನು ಅದೃಷ್ಟಶಾಲಿ. ಅವರಿಗೆ ಸ್ವಲ್ಪ ಸಮಯ ಸಿಕ್ಕರೂ ಸಾಕು, ನನಗಾಗಿ ಅಡುಗೆ ಮಾಡುತ್ತಾರೆ. ಮನೆಗೆಲಸವನ್ನೆಲ್ಲಾ ಮಾಡಿಕೊಡುತ್ತಾರೆ‘ ಎಂದು ಹೇಳಿದ್ದಾರೆ.
2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಅವರನ್ನು ಪವಿತ್ರ ಲೋಕೇಶ್ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಧೈರ್ಯ ಮತ್ತು ದೃಢ ನಿರ್ಧಾರದಿಂದ ಬರುವಂಥ ಎಲ್ಲಾ ಕಷ್ಟಗಳನ್ನು ಎದುರಿಸಿ ಛಲದಿಂದ ಗುರಿಯತ್ತ ಹೆಜ್ಜೆ ಇಡಬೇಕು ಆಗ ಮಾತ್ರ ಗೆಲುವು ನಿಶ್ಚಿತ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದ್ದ ಪವಿತ್ರ ಲೋಕೇಶ್ ಗಂಡ ಮತ್ತು ಮಕ್ಕಳ ಜೊತೆಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ ಅಂತಲೇ ಎಲ್ಲರೂ ತಿಳಿದುಕೊಂಡಿದ್ದರು.
ಹೌದು, ನರೇಶ್ ಹೇಳಿ ಕೇಳಿ ದೊಡ್ಡ ಮನೆಯಲ್ಲಿ ಹುಟ್ಟಿದವರು. ಮೊದಲ ಅಪ್ಪ ಕೂಡ ಸಾಕಷ್ಟು ಹಣ ಮಾಡಿದ್ದರು. ಎರಡನೇ ಅಪ್ಪ ಕೂಡ ಸೂಪರ್ ಸ್ಟಾರ್. ಇನ್ನೇನು ಕೇಳಬೇಕಾ? ನರೇಶ್ ಒಟ್ಟು ಆಸ್ತಿ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಜೊತೆಗೆ ನರೇಶ್ ಅವರಿಗೂ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. 62 ವರ್ಷದ ನರೇಶ್ ಇದೀಗ 43 ವರ್ಷದ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಿದ್ದಾರಂತೆ ಎಂಬ ವದಂತಿಗಳಿವೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ