• Home
  • »
  • News
  • »
  • entertainment
  • »
  • Nora Fatehi: ಬಾಂಗ್ಲಾದೇಶದಲ್ಲಿ ನಟಿ ನೋರಾ ಫತೇಹಿ ಅವರ ಕಾರ್ಯಕ್ರಮ ರದ್ದು! ಸರ್ಕಾರದ ಈ ಆದೇಶಕ್ಕೆ ಕಾರಣವೇನು ಗೊತ್ತಾ?

Nora Fatehi: ಬಾಂಗ್ಲಾದೇಶದಲ್ಲಿ ನಟಿ ನೋರಾ ಫತೇಹಿ ಅವರ ಕಾರ್ಯಕ್ರಮ ರದ್ದು! ಸರ್ಕಾರದ ಈ ಆದೇಶಕ್ಕೆ ಕಾರಣವೇನು ಗೊತ್ತಾ?

ನಟಿ ನೋರಾ ಫತೇಹಿ

ನಟಿ ನೋರಾ ಫತೇಹಿ

ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ನೋರಾ ಪತೇಹಿ ಕಾರ್ಯಕ್ರಮವನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ. ಹೌದು, ಮಿತವ್ಯಯ ಕ್ರಮಗಳ ಭಾಗವಾಗಿ ಡಾಲರ್‌ಗಳನ್ನು ಉಳಿಸುವ ಪ್ರಯತ್ನದಲ್ಲಿ ಬಾಂಗ್ಲಾದೇಶ ಸರ್ಕಾರವು ಈ ಕ್ರಮ ಕೈಗೊಂಡಿದೆ. ರಾಜಧಾನಿ ಢಾಕಾದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಬಾಲಿವುಡ್‌ ನಟಿ ನೋರಾ ಫತೇಹಿಗೆ ಅನುಮತಿ ನಿರಾಕರಿಸಿದೆ.

ಮುಂದೆ ಓದಿ ...
  • Share this:

ಬಾಲಿವುಡ್‌ ನಟಿ (Bollywood actress) ಹಾಗೂ ಐಟಂ ಸಾಂಗ್‌ ಗಳಿಂದಲೇ ಪ್ರಸಿದ್ಧಿ ಪಡೆದಿರೋ ನೋರಾ ಫತೇಹಿ ಡಾನ್ಸ್‌ ಅಂದರೆ ಜನ ಮುಗಿಬೀಳ್ತಾರೆ. ಭಾರತದಲ್ಲಿ (India) ಮಾತ್ರವಲ್ಲದೇ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿರೋ ಈ ನಟಿ ಅಷ್ಟರ ಮಟ್ಟಿಗೆ ಫೇಮಸ್.‌ ಆದಾಗ್ಯೂ ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ನೋರಾ ಪತೇಹಿ (Nora Fatehi) ಕಾರ್ಯಕ್ರಮವನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ. ಹೌದು, ಮಿತವ್ಯಯ ಕ್ರಮಗಳ ಭಾಗವಾಗಿ ಡಾಲರ್‌ಗಳನ್ನು ಉಳಿಸುವ ಪ್ರಯತ್ನದಲ್ಲಿ ಬಾಂಗ್ಲಾದೇಶ ಸರ್ಕಾರವು (Bangladesh Government) ಈ ಕ್ರಮ ಕೈಗೊಂಡಿದೆ. ರಾಜಧಾನಿ ಢಾಕಾದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಬಾಲಿವುಡ್‌ ನಟಿ ನೋರಾ ಫತೇಹಿಗೆ ಅನುಮತಿ ನಿರಾಕರಿಸಿದೆ.


ಅನುಮತಿ ನಿರಾಕರಣೆಗೆ ಕಾರಣವೇನು?
ವುಮೆನ್ ಲೀಡರ್‌ಶಿಪ್ ಕಾರ್ಪೊರೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೋರಾ ಫತೇಹಿ ಅವರನ್ನು ನೃತ್ಯ ಪ್ರದರ್ಶನ ನೀಡಲು ಹಾಗೂ ಪ್ರಶಸ್ತಿಗಳನ್ನು ವಿತರಿಸಲು ಆಹ್ವಾನ ನೀಡಲಾಗಿತ್ತು. ಆದರೆ "ಜಾಗತಿಕ ಪರಿಸ್ಥಿತಿಯ ದೃಷ್ಟಿಯಿಂದ ಮತ್ತು ವಿದೇಶಿ ವಿನಿಮಯ ಮೀಸಲು ಕಾಯ್ದುಕೊಳ್ಳುವ ಉದ್ದೇಶದಿಂದ" ಅನುಮತಿ ನೀಡಲಾಗಿಲ್ಲ ಎಂದು ಬಾಂಗ್ಲಾದೇಶದ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ ಹೊರಡಿಸಿದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಈವೆಂಟ್‌ನಲ್ಲಿ ನೋರಾ ಫತೇಹಿ ಅವರ ಪ್ರದರ್ಶನವನ್ನು ರದ್ದುಗೊಳಿಸುವುದರಿಂದ ದೇಶಕ್ಕೆ ಸಾಕಷ್ಟು ಹಣವನ್ನು ಉಳಿಸಬಹುದು ಎಂದು ಹೇಳಲಾಗಿದೆ.


ಕ್ಷೀಣಿಸುತ್ತಿರುವ ವಿದೇಶಿ ವಿನಿಮಯದ ಉಲ್ಲೇಖ!
ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಮೀಸಲುಗಳ ಮಧ್ಯೆ ಡಾಲರ್ ಪಾವತಿಗಳ ಮೇಲೆ ಕೇಂದ್ರೀಯ ಬ್ಯಾಂಕ್‌ನ ನಿರ್ಬಂಧಗಳನ್ನು ಸಚಿವಾಲಯವು ಉಲ್ಲೇಖಿಸಿದೆ. ಹಿಂದಿನ ವರ್ಷ $46.13 ಶತಕೋಟಿಯಿದ್ದ ವಿದೇಶಿ ವಿನಿಮಯ ಮೀಸಲು ಅಕ್ಟೋಬರ್ 12 ರ ಹೊತ್ತಿಗೆ $ 36.33 ಶತಕೋಟಿಗೆ ಇಳಿಕೆ ಆಗಿದೆ. ಇದು ಸರಿಸುಮಾರು ನಾಲ್ಕು ತಿಂಗಳ ಆಮದುಗಳನ್ನು ಸರಿದೂಗಿಸಲು ಸಾಕು ಅಷ್ಟೇ ಎಂದು ಸಚಿವಾಲಯ ಹೇಳಿದೆ.


ಇದನ್ನೂ ಓದಿ:  Samantha: ಸರ್ಜರಿ ಮಾಡಿಸ್ಕೊಂಡ್ರಾ ಸಮಂತಾ? ಮುಖ ಹೇಗಾಗಿದೆ ನೋಡಿ


ಈ ಮಧ್ಯೆ, ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಉಪ ನಿರ್ದೇಶಕ ಅನ್ನೆ-ಮೇರಿ ಗುಲ್ಡೆ-ವುಲ್ಫ್ ಮಾತನಾಡಿದ್ದು, ಸಾಲಗಳ ಕುರಿತು ಸರ್ಕಾರದೊಂದಿಗೆ ಮಾತುಕತೆಗಳನ್ನು ನಡೆಸಲು ಈ ತಿಂಗಳ ಕೊನೆಯಲ್ಲಿ ಬಾಂಗ್ಲಾದೇಶಕ್ಕೆ ತನ್ನ ಮೊದಲ ಸಮಾಲೋಚನಾ ಕಾರ್ಯಾಚರಣೆಯನ್ನು ಕಳುಹಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ ಸಿದ್ಧತೆ ನಡೆಸುತ್ತಿದೆ.


ನೋರಾ ಫತೇಹಿ ಅವರ ಬಗ್ಗೆ ಒಂದಿಷ್ಟು ಮಾಹಿತಿ
ಇನ್ನು, ಮೊರೊಕನ್-ಕೆನಡಿಯನ್ ಕುಟುಂಬದಿಂದ ಬಂದ ಫತೇಹಿ 2014 ರಲ್ಲಿ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಈಕೆ ನಟಿ, ರೂಪದರ್ಶಿ, ನರ್ತಕಿ, ಗಾಯಕಿ ಮತ್ತು ನಿರ್ಮಾಪಕಿ ಕೂಡ ಆಗಿದ್ದಾರೆ. ನೋರಾ, ಭಾರತೀಯ ಚಲನಚಿತ್ರೋದ್ಯಮದಲ್ಲಿ ತನ್ನ ನೃತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಸಾಕಷ್ಟು ಹಿಂದಿ ಚಿತ್ರಗಳಲ್ಲಿ ಹಾಗೆಯೇ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ:  Pooja Hegde: ಟ್ರೆಡಿಷನ್ ಡ್ರೆಸ್​ನಲ್ಲಿ ಪೂಜಾ ಹೆಗ್ಡೆ; ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ


ಇತ್ತೀಚಿನ ಕೆಲವು ವರ್ಷಗಳಲ್ಲಿ ನೋರಾ ಐಟಂ ಸಾಂಗ್‌ ಗಳು ಸಾಕಷ್ಟು ಹಿಟ್‌ ಆಗಿವೆ. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನೋರಾ ಬಹುಬೇಡಿಕೆಯ ನಟಿಯಾಗಿದ್ದಾರೆ. ಇನ್ನು ಮುಂಬರುವ ಥ್ಯಾಂಕ್‌ ಗಾಡ್‌ ಹಾಗೂ ಹರಿ ಹರ ವೀರ ಮಲ್ಲು ಚಿತ್ರಗಳಲ್ಲಿ ನೋರಾ ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ, ನೋರಾ ಫತೇಹಿ ಇತ್ತೀಚೆಗೆ ವಿವಾದದಿಂದಲೂ ಹೆಸರಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಜೊತೆ ನೋರಾ ಹೆಸರು ತಳುಕು ಹಾಕಿಕೊಂಡಿದ್ದು, ಈ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

Published by:Ashwini Prabhu
First published: