• Home
  • »
  • News
  • »
  • entertainment
  • »
  • Niveditha Gowda: ನನ್ನ ದುಡ್ಡಲ್ಲಿ ಎಂಜಾಯ್ ಮಾಡ್ತಾ ಇದ್ದೇನೆ, ಕೆಟ್ಟದಾಗಿ ಕಾಮೆಂಟ್ ಹಾಕಿದವರಿಗೆ ನಿವಿ ಟಾಂಗ್!

Niveditha Gowda: ನನ್ನ ದುಡ್ಡಲ್ಲಿ ಎಂಜಾಯ್ ಮಾಡ್ತಾ ಇದ್ದೇನೆ, ಕೆಟ್ಟದಾಗಿ ಕಾಮೆಂಟ್ ಹಾಕಿದವರಿಗೆ ನಿವಿ ಟಾಂಗ್!

ಕೆಟ್ಟದಾಗಿ ಕಾಮೆಂಟ್ ಹಾಕಿವರಿಗೆ ನಿವಿ ಟಾಂಗ್!

ಕೆಟ್ಟದಾಗಿ ಕಾಮೆಂಟ್ ಹಾಕಿವರಿಗೆ ನಿವಿ ಟಾಂಗ್!

ನಿವಿ ಫೋಟೋಗಳನ್ನು ತೆಗೆಯುತ್ತಿರುವವರು ಯಾರು? ಚಂದನ್ ದುಡ್ಡಲ್ಲಿ ಮಜಾ ಮಾಡ್ತಾ ಇದ್ದೀರಾ? ಹೀಗೆ ಕೆಟ್ಟದಾಗಿ ಕಾಮೆಂಟ್‍ಗಳನ್ನು ಮಾಡಿದವರ ವಿರುದ್ಧ ನಿವಿ ಗರಂ ಆಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ನಿವೇದಿತಾ ಗೌಡ (Niveditha Gowda) ಯಾವಾಗಲೂ ಸುದ್ದಿಯಲ್ಲಿ ಇರ್ತಾರೆ. ಅದು ಚೆಂದ ಚೆಂದದ ರೀಲ್ಸ್ (Reels) ಮೂಲಕ. ಆದ್ರೆ ಈ ಬಾರಿ ಸುದ್ದಿ ಆಗಿರೋದು ಸೋಲೋ ಟ್ರಿಪ್ ಹೋಗಿ. ಬಿಗ್ ಬಾಸ್  (Bigg Boss) ಗೊಂಬೆ, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸೋಲೋ ಟ್ರಿಪ್ (Solo Trip) ಹೋಗಿದ್ದಾರೆ. ಮೊದಲ ಬಾರಿ ಅವರು ತಮ್ಮ ಸೋಲೋ ಟ್ರಿಪ್ ನನ್ನು ಎಂಜಾಯ್ ಮಾಡ್ತಾ ಇದ್ದಾರೆ. ನಿವೇದಿತಾ ಗೌಡ ಬಾಲಿ ಸುತ್ತುತ್ತಿದ್ದಾರೆ. ಏಕಾಂಗಿಯಾಗಿ ಪ್ರವಾಸ ಮಾಡುವುದು ಇತ್ತಿಚೇಗೆ ಒಂದು ಕ್ರೇಜ್ ಆಗಿ ಬಿಟ್ಟಿದೆ. ನಿವಿ ಸಹ ಅದನ್ನು ಅನುಭವಿಸಬೇಕು ಎಂದು ಕೊಳ್ತಿದ್ದಾರೆ. ನಿವೇದಿತಾ ಗೌಡ ಅವರು ಟ್ರಿಪ್ ಹೋಗುತ್ತಿರುವುದು ಓಕೆ. ಚಂದನ್ ಶೆಟ್ಟಿ ಬಂದಿಲ್ಲ ಯಾಕೆ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಅದಲ್ಲದೇ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ನಿವೇದಿತಾ ಟಾಂಗ್ ಕೊಟ್ಟಿದ್ದಾರೆ.


    ಮುದ್ದಾಗಿರೋ ನಿವಿ ಗರಂ ಆಗಿದ್ಯಾಕೆ?
    ನಿವಿ ಫೋಟೋಗಳನ್ನು ತೆಗೆಯುತ್ತಿರುವವರು ಯಾರು? ಚಂದನ್ ದುಡ್ಡಲ್ಲಿ ಮಜಾ ಮಾಡ್ತಾ ಇದ್ದೀರಾ? ಹೀಗೆ ಕೆಟ್ಟದಾಗಿ ಕಾಮೆಂಟ್‍ಗಳನ್ನು ಮಾಡಿದವರ ವಿರುದ್ಧ ನಿವಿ ಗರಂ ಆಗಿದ್ದಾರೆ.


    ನಿವೇದಿತಾ ಪೋಸ್ಟ್ ಮಾಡಿದ್ದೇನು?
    'ನಾನು ಕೆಲವು ಕಾಮೆಂಟ್‍ಗಳಿಗೆ ಪ್ರತ್ಯುತ್ತರಿಸಬೇಕು ಎಂದು ಅಲ್ಲ. ಆದರೆ ಫೋಟೋಗಳನ್ನು ಕ್ಲಿಕ್ ಮಾಡಲು, ಪಾವತಿಸುವ ಛಾಯಾಗ್ರಾಹಕರು ಇರುತ್ತಾರೆ ಎಂದು ಕೆಲವರು ತಿಳಿದುಕೊಳ್ಳಬೇಕು. ದಯವಿಟ್ಟು ಪ್ರಯಾಣಿಸಿ ಮತ್ತು ಜಗತ್ತನ್ನು ಅನ್ವೇಷಿಸಿ, ನಿಮ್ಮ ಮಲಗುವ ಕೋಣೆಯಲ್ಲಿ ಸಿಕ್ಕಿ ಹಾಕಿಕೊಂಡ ಅಗ್ಗದ ಕಾಮೆಂಟ್‍ಗಳನ್ನು ಪೋಸ್ಟ್ ಮಾಡುವ ಬದಲು, ನಿಮಗೆ ವಾಸ್ತವ ತಿಳಿಯುತ್ತದೆ.


    ಹುಡುಗಿ ಪ್ರವಾಸಕ್ಕೆ ಹೋದಾಗ ಅನೇಕ ಆರೋಪಗಳಿವೆ. ನಾನು ಉದ್ಯೋಗವನ್ನು ಹೊಂದಿರುವ ಮತ್ತು ಹಣ ಸಂಪಾದಿಸುತ್ತಿರುವ ಸ್ವತಂತ್ರ ಮಹಿಳೆ. ನನ್ನ ಅಗತ್ಯಗಳನ್ನು ನೋಡಿಕೊಳ್ಳಲು ನಾನು ಸಂಪೂರ್ಣವಾಗಿ ಸಮರ್ಥವಾಗಿದ್ದೇನೆ. ನಾನು ನನ್ನ ಗಂಡನ ಹಣವನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ಕಾಮೆಂಟ್ ಮಾಡುವುದಲ್ಲ. ಒಬ್ಬ ಹೆಣ್ಣು ಮಗಳು ತನ್ನದೇ ಆದ ಸಾಮಥ್ರ್ಯ ಹೊಂದಿದ್ದಾಳೆ ಎಂದು ಜನರು ಇನ್ನೂ ನಂಬದಿರುವುದು ಬೇಸರದ ಸಂಗತಿ.


    ಇದನ್ನೂ ಓದಿ: Puttakkana Makkalu: ಇಂಗ್ಲಿಷ್ ಶಾಲೆ ಖೋ ಖೋ ಕೋಚ್​​ಗೆ ಪುಟ್ಟಕ್ಕನ ಕನ್ನಡ ಕ್ಲಾಸ್! 


    ಇದು ಯಾರ ವ್ಯವಹಾರವೂ ಅಲ್ಲ. ನನ್ನ ಪರವಾಗಿ ಮಾತನಾಡುವ ಕೆಲವು ಜನರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಿಮ್ಮಂತಹ ಜನರಿಗಾಗಿ ಜಗತ್ತು ಇನ್ನೂ ಉತ್ತಮ ಸ್ಥಳವಾಗಿದೆ ಎಂಬ ಭರವಸೆ ಇದೆ. ಧನ್ಯವಾದಗಳು' ಎಂದು ಪೋಸ್ಟ್ ಮಾಡಿದ್ದಾರೆ.



    ರೀಲ್ಸ್ ಸುಂದ್ರಿ ನಿವಿ
    ನಿವೇದಿತಾ ಗೌಡ ಅವರು ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೊಸ ರೀಲ್ಸ್ ಹಾಕಿದ್ರೆ ಮುಗೀತು. ಸಾವಿರಾರು ಲೈಕ್ ಗಳು ಕ್ಷಣ ಮಾತ್ರದಲ್ಲಿ ಬರುತ್ತೆ. ಟಿಕ್ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ, ಅದರ ಮೂಲಕ ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟಿದ್ದರು. ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ.


    actress nivedita gowda, nivedita gowda solo trip to bali, nivi post about bad comment people, nivedita gowda new photoshoot, nivedita gowda reels, nivedita gowda bigg boss, ನಟಿ ನಿವೇದಿತಾ ಗೌಡ, ನಿವೇದಿತಾ ಗೌಡ ಹೊಸ ಫೋಟೋಶೂಟ್, ಸೋಲೋ ಟ್ರಿಪ್ ಹೊರಟ ನಿವಿ, ನನ್ನ ದುಡ್ಡಲ್ಲಿ ಎಂಜಾಯ್ ಮಾಡ್ತಾ ಇದ್ದೇನೆ, ಕೆಟ್ಟದಾಗಿ ಕಾಮೆಂಟ್ ಹಾಕಿವರಿಗೆ ನಿವಿ ಟಾಂಗ್!, ನಿವೇದಿತಾ ಗೌಡ ರೀಲ್ಸ್, ನಿವೇದಿತಾ ಗೌಡ ಬಿಗ್ ಬಾಸ್, kannada news, karnataka news,
    ಕೆಟ್ಟದಾಗಿ ಕಾಮೆಂಟ್ ಹಾಕಿವರಿಗೆ ನಿವಿ ಟಾಂಗ್!


    ನಿವೇದಿತಾ ದಿನನಿತ್ಯ ಚಂದದ ರೀಲ್ಸ್ ವಿಡಿಯೋ ಮಾಡುವ ನಟಿ. ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್ ಮಾಡುತ್ತಾರೆ.


    ಇದನ್ನೂ ಓದಿ: Bigg Boss Kannada: ಈ ವಾರದ ಕಳಪೆ ಯಾರು? ಅಮೂಲ್ಯನಾ, ಆರ್ಯವರ್ಧನ್ ಗುರೂಜಿನಾ? 


    ನಿವೇದಿತಾ ಗೌಡ ಅವರು ಇತ್ತಿಚೇಗೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ನಟರಲ್ಲದ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದರು. ನಿವೇದಿತಾಗೆ ತುಂಬಾ ಅಭಿಮಾನಿಗಳು ಇದ್ದಾರೆ.ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರು ಬಿಗ್ ಬಾಸ್ ನಿಂದ ಪರಿಚಯ ಆಗಿ, ಒಳ್ಳೆಯ ಸ್ನೇಹಿತರಾಗಿದ್ದರು. ನಂತರ ಇಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ.

    Published by:Savitha Savitha
    First published: