ಕನ್ನಡ ಕಿರುತೆರೆ (Small Screen) ಬಾರ್ಬಿ ಡಾಲ್ ಎಂದು ಫೇಮಸ್ ಆದವರು ನಿವೇದಿತಾ ಗೌಡ. ನಿವೇದಿತಾ ಗೌಡ (Niveditha Gowda) , ಸಾಮಾಜಿಕ ಜಾಲಾತಾಣದಲ್ಲಿ (Social Media) ಯಾವಾಗಲೂ ಆಕ್ಟೀವ್ ಇರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ದಿನಕ್ಕೆ ಕೊನೆಪಕ್ಷ 2 ರಿಂದ 3 ವಿಡಿಯೋ (Video) ಹಾಕದೆ ಇರುವ ದಿನಗಳಿಲ್ಲ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲಾತಾಣದ (Social Media) ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆ. ಹಾಗೆಯೇ ಅವರು ಮಾಡುವ ವಿಡಿಯೋ ಕೂಡ ಫುಲ್ ವೈರಲ್ ಆಗುತ್ತದೆ.
ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಹೋಮ್ ಟೂರ್ ಮಾಡಿದ್ದಾರೆ. ಅದರಲ್ಲಿ ಮನೆಯಲ್ಲಿ ಏನೆಲ್ಲಾ ಇದೆ. ಯಾವ ಜಾಗದಲ್ಲಿ ಏನೆಲ್ಲಾ ಇಟ್ಟಿದ್ದಾರೆ. ತಮಗೆ ಯಾವ ಜಾಗ ಇಷ್ಟ ಎಂದು ಹೇಳಿರುವ ನಿವೇದಿತಾ ಅವರ ಈ ವಿಡಿಯೋ ಸಹ ಫುಲ್ ಸುದ್ದಿ ಮಾಡಿದೆ.
ಫುಲ್ ಮನೆ ತೋರಿಸಿದ ನಿವೇದಿತಾ ಗೌಡ
ನಿವೇದಿತಾ ಅವರಿಗೆ ಬಹಳಷ್ಟು ಜನ ಹೋಮ್ ಟೂರ್ ಮಾಡುವಂತೆ ರಿಕ್ವೆಸ್ಟ್ ಮಾಡಿಕೊಂಡಿದ್ದರು. ಹಾಗಾಗಿ ಅಭಿಮಾನಿಗಳ ಒತ್ತಾಸೆಯ ಮೇಲೆ ಹೋಮ್ ಟೂರ್ ಮಾಡಿದ್ದು, ಪೂರ್ತಿ ಮನೆಯನ್ನು ತೋರಿಸಿದ್ದಾರೆ.
ವಿಡಿಯೋದ ಆರಂಭದಲ್ಲಿ ಮೊದಲು ದೇವರ ಮನೆಯಲ್ಲಿ ತೋರಿಸಿರುವ ಅವರು, ಅಲ್ಲಿ ಹೆಚ್ಚು ಫೋಟೋ ಇದೆ. ಆದರೆ ನಾವು ಬಾಗಿಲು ಹಾಕಿ ಇಟ್ಟಿರುತ್ತೇವೆ. ಮನೆಯ ಡಾಲರ್ ಅಂದರೆ ಅವರ ಮುಂದಿನ ನಾಯಿ ಒಳಗೆ ಹೋಗಿ ಗಲೀಜು ಮಾಡುತ್ತದೆ ಎಂದು ಬಾಗಿಲು ಹಾಕಿರುತ್ತೇವೆ ಎಂದಿದ್ದಾರೆ.
ಇನ್ನು ಅವರ ಮನೆಯ ಹಾಲ್ನಲ್ಲಿ ಬಿಗ್ ಬಾಸ್ ಮನೆಯ ರೀತಿಯ ಸೋಫಾ ಜೋಕಾಲಿ ಇದ್ದು, ಅದನ್ನು ಕಂಡರೆ ನಿವೇದಿತಾಗೆ ಬಹಳ ಇಷ್ಟವಂತೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಚಂದನ್ ಗಿಫ್ಟ್ ಕೊಟ್ಟಿರುವ ದೊಡ್ಡ ಗೊಂಬೆ ಕಂಡರೆ ಜಾಸ್ತಿ ಇಷ್ಟವಂತೆ. ಆ ಗೊಂಬೆ ಬಹಳ ದೊಡ್ಡದಿದ್ದು, ಅದನ್ನು ಹಾಲ್ನಲ್ಲಿ ಮಲಗಿಸಿಟ್ಟಿದ್ದಾರೆ.
ಇನ್ನು ಅವರ ಮನೆಯಲ್ಲಿ ಸಣ್ಣ ಹೋಮ್ ಟೆಂಟ್ ಇದ್ದು, ಅವರಿಗೆ ಈ ರೀತಿಯ ಕ್ಯೂಟ್ ಟೆಂಟ್ಗಳೆಂದರೆ ಬಹಳ ಇಷ್ಟವಂತೆ. ಆ ಪುಟ್ಟ ಟೆಂಟ್ ನಲ್ಲಿ ಡಾಲರ್ ಆಟ ಆಡೋದು ಹೆಚ್ಚಂತೆ.
ಅಲ್ಲದೇ, ಕಿಚನ್ ಸಹ ತೋರಿಸಿರುವ ಅವರು, ಈ ಜಾಗದಲ್ಲಿ ನಾನು ಅತಿ ಕಡಿಮೆ ಸಮಯ ಕಳೆಯುತ್ತೇನೆ ಎಂದಿರುವ ಅವರು ನನಗೆ ಸರಿಯಾಗಿ ಪಾತ್ರೆ ತೊಳೆಯಲು ಬರುವುದಿಲ್ಲ, ಎಂದಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಹೊಸ ದಾಖಲೆ ಬರೆದ ಕಾಶ್ಮೀರ್ ಫೈಲ್ಸ್ - 9 ಮಿಲಿಯನ್ ವೀಕ್ಷಣೆ ಪಡೆದ ಚಿತ್ರ
ಪಾತ್ರೆ ತೊಳೆಯುವುದು ಎಂದರೆ ಇಷ್ಟವಿಲ್ಲವಂತೆ
ಇದಿಷ್ಟೇ ಅಲ್ಲದೇ, ಅವರ ಬೆಡ್ ರೂ.. ಬ್ಯಾಗ್ ಕಲೆಕ್ಷನ್, ಬಟ್ಟೆ ಕಲೆಕ್ಷನ್ಗಳನ್ನು ಸಹ ಅವರು ತೋರಿಸಿದ್ದು, ಹೆಚ್ಚಿನ ವಿಡಿಯೋಗಳಿಗೆ ಅವರ ಚಾನೆಲ್ ನೋಡುವಂತೆ ಅಭಿಮಾನಿಗಳನ್ನು ಕೇಳಿದ್ದಾರೆ.
ಒಟ್ಟಾರೆಯಾಗಿ ನಿವೇದಿತಾ ಗೌಡ, ಯಾವುದೇ ಫೋಟೋ ಹಾಗೂ ವಿಡಿಯೋ ಮಾಡಿ ಹಾಕಿದರೂ ಸಹ ಅದು ವೈರಲ್ ಆಗುತ್ತದೆ. ಇದೀಗ ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯ ತಯಾರಿಯಲ್ಲಿ ಬ್ಯುಸಿ ಇದ್ದಾರೆ. ಆಗಾಗಾ ಅಲ್ಲಿನ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಸಹ ಅಲ್ಲಿ ಹೇಗೆ ಕ್ಯಾಟ್ ವಾಕ್ ಪ್ರಾಕ್ಟೀಸ್ ಮಾಡಲಾಗುತ್ತದೆ ಎಂಬುದನ್ನ ಶೇರ್ ಮಾಡಿದ್ದು, ನಿವೇದಿತಾ ಹಾಟ್ ಲುಕ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.
ಇದನ್ನೂ ಓದಿ: 'ಚಂದನ'ದ 'ಗೊಂಬೆ' ನಿವೇದಿತಾ ಕ್ಯಾಟ್ವಾಕ್ ವಿಡಿಯೋ ನೀವೂ ನೋಡಿ!
ಈ ವಿಡಿಯೋದಲ್ಲಿ ನಿವೇದಿತಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಮಿಸೆಸ್ ಇಂಡಿಯಾ ಸ್ಪೆರ್ಧೆಗೆ ಈಗ ತಮ್ಮ ತಯಾರಿ ಹೇಗಿದೆ ಎನ್ನುವ ಸಂಪೂರ್ಣ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಸ್ಪರ್ಧೆಗಾಗಿ ಜಿಮ್, ಡಯಟ್, ವರ್ಕೌಟ್ ಕೂಡ ಮಾಡುತ್ತಿದ್ದಾರೆ. ಅಲ್ಲಿ ನೀಡುವ ಕೆಲವೊಂದಿಷ್ಟು ಚಾಲೆಂಜಿಂಗ್ ವಿಚಾರ ತುಂಬಾ ಕುತೂಹಲಕಾರಿಯಾಗಿವೆ. ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು ಎಂಬುದನ್ನ ಕಲಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ