ನಟಿ ನಿತ್ಯಾ ಮೆನನ್ (Actress Nithya Menon) ಕಳೆದ ಕೆಲ ದಿನಗಳಿಂದ ಬಹಳ ಸುದ್ದಿಯಲ್ಲಿದ್ದರು. ಅವರ ಮದುವೆಯ (Wedding) ವಿಚಾರ ಹರಿದಾಡಿದ್ದವು, ನಂತರ ಅದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ನಟಿಗೆ ಸಂಕಷ್ಟವೊಂದು ಎದುರಾಗಿದೆ. ನಟಿಗೆ ಸಿನಿಮಾ (Film) ವಿಮರ್ಶಕನೊಬ್ಬ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ದೂರು ನೀಡಲು ನಟಿ ನಿರ್ಧರಿಸಿದ್ದಾರೆ. ಕೇರಳದ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ವೊಂದರ (You Tube) ವಿಮರ್ಶಕ ನಟಿಗೆ ತಮ್ಮನ್ನು ಮದುವೆಯಾಗುವಂತೆ ಪ್ರತಿದಿನ ಕಿರುಕುಳ ನೀಡುತ್ತಿದ್ದಾನಂತೆ. ಅಲ್ಲದೇ, ನಟಿಗೆ ಕಾಲ ಮಾಡಿ ಸಹ ಕಿರುಕುಳ ನೀಡುತ್ತಿದ್ದು, ಅವನ 30ಕ್ಕೂ ಹೆಚ್ಚು ನಂಬರ್ ಗಳನ್ನು ಬ್ಲ್ಯಾಕ್ ಮಾಡಿರುವುದಾಗಿಯೂ ನಿತ್ಯಾ ಮೆನನ್ ಮಾಹಿತಿ ನೀಡಿದ್ದಾರೆ.
ದೂರು ನೀಡಲು ನಿರ್ಧರಿಸಿರುವ ನಟಿ
ನನಗೆ ಈ ಮೊದಲೇ ಹಲವಾರು ಜನರು ಆತನ ವಿರುದ್ಧ ದೂರು ನೀಡುವಂತೆ ಬಹಳಷ್ಟು ಬಾರಿ ಹೇಳಿದ್ದರು. ಆದರೆ ನಾನು ಆ ಹುಡುಗನ ಜೀವನ ಹಾಳಾಗಬಾರದು ಎಂದು ದೂರು ನೀಡಿಲ್ಲ ಎಂದಿದ್ದಾರೆ. ಈ ಹಿಂದೆ ಸಹ ಮದುವೆ ವಿಚಾರವಾಗಿ ಆ ಹುಡುಗ ನಟಿಯ ಬಗ್ಗೆ ಕೂಡ ಬಹಿರಂಗವಾಗಿಯೇ ಹೇಳಿಕೆ ನೀಡಿ ನಟಿಗೆ ಮಾನಸಿಕ ಕಿರುಕುಳ ನೀಡಿದ್ದ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲೂ ವಿಡಿಯೋ ಹಂಚಿಕೊಂಡಿದ್ದ ಆತ, ನನಗೆ ಗೌರವ ಕೊಡದ ನಿತ್ಯಾ ಮೆನನ್ ಅನ್ನು ಇನ್ನೆಂದಿಗೂ ಮದುವೆ ಆಗಲ್ಲ. ಅವರೇ ಬಂದು ನನ್ನನ್ನ ಕೇಳಿಕೊಂಡರೂ ಮದುವೆ ಆಗುವುದಿಲ್ಲ ಎಂಬೆಲ್ಲಾ ಹೇಳಿಕೆ ನೀಡಿದ್ದನಂತೆ.
ಇನ್ನು ಕಳೆದ ಕೆಲ ದಿನಗಳ ಹಿಂದೆ ನಿತ್ಯಾ ಮೆನನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಂಚಲನ ಮೂಡಿಸಿತ್ತು. ನಿತ್ಯಾ ಮೆನನ್ ಚಿತ್ರರಂಗದ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮಲಯಾಳಂನಲ್ಲಿ ಸ್ಟಾರ್ ನಟನಾಗಿ ಮುಂದುವರಿದಿರುವ ವ್ಯಕ್ತಿಯನ್ನು ಮದುವೆಯಾಗಲಿದ್ದಾರಂತೆ ಎನ್ನಲಾಗುತ್ತಿತ್ತು.
ಇದನ್ನೂ ಓದಿ: ನಾನು ಬಿಗ್ಬಾಸ್ ಮನೆಗೆ ಹೋಗಲ್ಲ ಎಂದ ನಿರ್ದೇಶಕ, ನೀವಿದ್ರೆ ಒಂದ್ ಗತ್ತು ಇರುತ್ತೆ ಅಂತಿದ್ದಾರೆ ನೆಟ್ಟಿಗರು
ಆದರೆ ನಂತರ ಮದುವೆ ಸುದ್ದಿಯನ್ನು ನಟಿ ನಿತ್ಯಾ ಮೆನನ್ ನಿರಾಕರಿಸಿದ್ದರು. ಮದುವೆಯ ಬಗ್ಗೆ ಬಂದಿರುವ ಸುದ್ದಿ ಸುಳ್ಳಾಗಿದ್ದು, ತನ್ನ ಮದುವೆಯ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ. ನಿತ್ಯಾ ಮೆನನ್ ಸದ್ಯ ವಿಜಯ್ ಸೇತುಪತಿ ಅಭಿನಯದ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು
ಜೋಶ್, ಮೈನಾ , ಕೋಟಿಗೊಬ್ಬ 2 ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣದ ಹೆಸರಾಂತ ನಟಿ ಇವರು. ತೆಲುಗಿನಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಲೇ ಹಲವು ವೆಬ್ ಸೀರಿಸ್ ನ ಭಾಗವಾಗಿರುವ ಈ ಚೆಲುವೆ ಸದ್ಯ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮಾಡರ್ನ್ ಲವ್ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಗಾಳಿಪಟ 2 ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
ನಿತ್ಯಾ ಮೆನನ್ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ಸ್ಥಾಪಿಸಿದ್ದಾರೆ. ಅನ್ಫಿಲ್ಟರ್ಡ್ ಎಂಬ ಹೆಸರಿನಲ್ಲಿ ಯೂಟ್ಯೂಬ್ ಜಗತ್ತಿಗೆ ಕಾಲಿಟ್ಟಿರುವ ನಿತ್ಯಾ ತಮ್ಮ 12 ವರ್ಷಗಳ ಸಿನಿಮಾ ವೃತ್ತಿಜೀವನವನ್ನು ವಿಡಿಯೋ ರೂಪದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಹೀರೋಯಿನ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವುದರಿಂದ ಮದುವೆಗೆ ಸಂಬಂಧಿಸಿದಂತೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸದ್ಯ, ನಿತ್ಯಾ ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ವೈರಲ್ ಆಗುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ