ರಾಮಾರ್ಜುನ, ಅಮ್ಮ ಐ ಲವ್ ಯೂ (Amma I Love You) ಸೇರಿದಂತೆ ಹಲವು ಸಿನಿಮಾಗಳ (Film) ಮೂಲಕ ಸ್ಯಾಂಡಲ್ ವುಡ್ನಲ್ಲಿ (Sandalwood) ಹೆಸರು ಮಾಡಿರುವ ನಟಿ ನಿಶ್ವಿಕಾ ನಾಯ್ಡು (Nishvika Naidu) , ತಮ್ಮ ನಟನೆಯ ಮೂಲಕ ಹೆಸರು ಮಾಡಿದ್ದಾರೆ. ಈ ಸುಂದರಿ ಕನ್ನಡದಲ್ಲಿ (Kannada) ಮಾತ್ರವಲ್ಲ ಬೇರೆ ಭಾಷೆಯ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಾವಾಗಲೂ ಸಿನಿಮಾಗಳ ವಿಚಾರಕ್ಕೆ ಸುದ್ದಿಯಲ್ಲಿರುವ ನಟಿ, ಈ ಬಾರಿ ಲಿಪ್ ಲಾಕ್ (Lip Lock) ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ನಟಿ ನಿಶ್ವಿಕಾ ನಾಯ್ಡು ಇತ್ತೀಚೆಗಷ್ಟೆ ಗೆಳತಿಯರೊಂದಿಗೆ ಗೋವಾ ಹೋಗಿದ್ದು, ಅಲ್ಲಿ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯ ಕೆಲವು ಫೋಟೋ ಫುಲ್ ವೈರಲ್ ಆಗಿದೆ.
ವೈರಲ್ ಆಗಿದೆ ಫೋಟೋ ಹಾಗೂ ವಿಡಿಯೋ
ಹೌದು, ಈ ಪಾರ್ಟಿಯಲ್ಲಿ ನಿಶ್ವಿಕಾ ಗೆಳತಿಯೊಬ್ಬರ ಜೊತೆ ಎಂಜಾಯ್ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಗೆಳತಿಯರ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ್ದ ನಟಿ ಫುಲ್ ಎಂಜಾಯ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೆಳತಿಯೊಬ್ಬರು ಹುಕ್ಕಾ ರೀತಿಯ ಒಂದು ವಸ್ತು ಸೇವಿಸಿ ಆ ಹೊಗೆಯನ್ನು ನಿಶ್ವಿಕಾ ಬಾಯಿಗೆ ಬಿಡುತ್ತಾರೆ, ಆಗ ಇಬ್ಬರು ಲಿಪ್ ಲಾಕ್ ಮಾಡಿಕೊಳ್ಳುತ್ತಾರೆ. ಈ ವಿಡಿಯೋವನ್ನು ನಿಶ್ವಿಕಾ ಅವರ ಗೆಳತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ಇದೇ ಚರ್ಚೆಯಾಗುತ್ತಿದೆ.
ತೆರೆಯ ಮೇಲೆ ವಿಭಿನ್ನವಾಗಿ ಕಾಣಿಸಿಕೊಳ್ಳುವ ಈ ನಟಿಯ ಈ ಅವತಾರ ಪಡ್ಡೆ ಹುಡುಗರ ನಿದ್ದೆ ಹಾಳು ಮಾಡಿದ್ದು, ಫುಲ್ ಚರ್ಚೆಗೆ ಸಹ ಕಾರಣವಾಗಿದೆ. ಆದ್ರೆ ಈಗಾಗ್ಲೇ ಎಲ್ಲಾ ಕಡೆ ಸುದ್ದಿಯಾಗಿರೋ ಈ ವಿಡಿಯೋವನ್ನು ಎಲ್ಲೂ ಶೇರ್ ಮಾಡಬಾರದು ಎಂದು ನಿಶ್ವಿಕಾ ನಾಯ್ಡು ಅಲಿಯಾಸ್ ಕಾವ್ಯಾ ಪ್ರಕಾಶ್ (ಕಾವ್ಯಾ ಪ್ರಕಾಶ್ ನಿಶ್ವಿಕಾ ಅವರ ಮೂಲ ಹೆಸರು ಎಂದು ತಿಳಿದು ಬಂದಿದೆ) ನ್ಯಾಯಾಲಯದಿಂದ ಟೆಂಪರರಿ ಇಂಜಂಕ್ಷನ್ ಆರ್ಡರ್ ತಂದಿರುತ್ತಾರೆ. ಆದ ಕಾರಣ ವಿಡಿಯೋವನ್ನು ಇಲ್ಲಿಂದ ಅಳಿಸಲಾಗಿದೆ.
ಬೆಂಗಳೂರು ಮೂಲದವರಾಗಿರುವ ನಿಶ್ವಿಕಾ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿ, ನಂತರ ಚಿತ್ರರಂಗದತ್ತ ಮುಖ ಮಾಡಿ, ಒಳ್ಳೆಯ ಹೆಸರುಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿ ದಿನಗಳಲ್ಲಿಯೇ ಮಾಡೆಲಿಂಗ್ನಲ್ಲಿ ಆಸಕ್ತಿ ಹೊಂದಿದ್ದ ನಿಶ್ವಿಕಾ, ಮಾಡೆಲ್ ಆಗಿ ಸಹ ಉತ್ತಮ ಹೆಸರುಗಳಿಸಿದ್ದರು. ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದ ಸುಂದರಿ ಈಗ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ಧಾರೆ.
ಇದನ್ನೂ ಓದಿ: ಸೋನಮ್ ಸೀಮಂತ ರದ್ದು! ಅರೇ, ಕಪೂರ್ ಮನೆಮಗಳಿಗೆ ಇದೇನಾಯ್ತಪ್ಪಾ?
ಫುಲ್ ಬ್ಯುಸಿ ಇದ್ದಾರೆ ನಟಿ
ನಿಶ್ವಿಕಾ ಮೊದಲು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ 'ವಾಸು ನಾನ್ ಪಕ್ಕಾ ಕಮರ್ಷಿಯಲ್, ಆದರೆ ಇಲ್ಲೊಂದು ವಿಶೇಷವಿದೆ. ಮೊದಲ ಚಿತ್ರ ಬಿಡುಗಡೆಯಾಗುವ ಮೊದಲು, ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಗಿತ್ತು. ತಮ್ಮ ಅದ್ಭುತ ನಟನೆಯಿಂದ ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಅವಕಾಶಗಳಿಸುತ್ತಿರುವ ಸಿಂಪಲ್ ಸುನಿ ನಿರ್ದೇಶನದ, ಗೋಲ್ಡನ್ ಸ್ಟಾರ್ ಅಭಿನಯದ ಸಖತ್ ಸಿನೆಮಾದಲ್ಲಿ ಸಹ ನಟಿಸಿದ್ದರು.
ಇದಲ್ಲದೇ, ರಾಮಾರ್ಜುನ ಚಿತ್ರದಲ್ಲಿ ಅನೀಶ್ಗೆ ನಾಯಕಿಯಾದ ನಿಶ್ವಿಕಾ, ವಿಭಿನ್ನ ಕಥಾ ಹಂದರ ಹೊಂದಿದ್ದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ಜಗ್ಗೇಶ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಪಡ್ಡೆಹುಲಿ ಚಿತ್ರದಲ್ಲಿ ನಟಿಸಿರುವ ನಟಿ, ಸದ್ಯ ಮೂರು ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದು, ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ಧಾರೆ.
ಇದನ್ನೂ ಓದಿ: ವೈರಲ್ ಆಯ್ತು ಮೆಗಾಸ್ಟಾರ್ ಮಗಳ ಚಾಟ್, ಶ್ರೀಜಾ ಮೆಸೇಜ್ ನಲ್ಲಿ ಏನಿದೆ ಗೊತ್ತಾ?
ಯೋಗರಾಜ್ ಭಟ್ಟ ನಿರ್ದೇಶನದ ಗಾಳಿಪಟ-2 ಚಿತ್ರದಲ್ಲಿ ಸಹ ನಿಶ್ವಿಕಾ ನಟಿಸಿದ್ದು, ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಚಿತ್ರ, ಈ ವರ್ಷದ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ. ಅಲ್ಲದೇ ಅವರ ಗುರು ಶಿಷ್ಯರು, ದಿಲ್ ಪಸಂದ್ ಸಿನಿಮಾಗಳು ಸಹ ತೆರೆಗೆ ಬರಲು ಸಿದ್ದವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ