ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್(Lady super star) ನಯನತಾರಾ(Nayanthara).. ಸೂಪರ್ಸ್ಟಾರ್ ರಜನಿಕಾಂತ್(Rajinikanth)ಯಿಂದ ಹಿಡಿದು ಬಾಲಿವುಡ್ನ(Bollywood) ನಟ ಶಾರುಖ್ ಖಾನ್(Shahrukh khan) ನಟನೆಯ ಸಿನಿಮಾಗಳಿಗೂ ನಯನತಾರಾ ಹೀರೋಯಿನ್ ಆಗಿ ಬೇಕೇ ಬೇಕು. ಕನ್ನಡದಲ್ಲಿ(Kannada) ಉಪೇಂದ್ರ (Upendra)ಜೊತೆ ಸೂಪರ್ ನಿಮ್ಮ ದಲ್ಲಿ ನಟಿಸಿರುವ ನಯನತಾರಾ ಕನ್ನಡಿಗರ ಮನಸ್ಸನ್ನು ಕೂಡಾ ಗೆದ್ದಿದ್ದಾರೆ.. ಬಾಲಿವುಡ್ ಟಾಲಿವುಡ್ ಕಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋ ನಯನತಾರಾ ಜೊತೆ ನಟಿಸಲು ಎಲ್ಲಾ ಭಾಷೆಯ ನಟರು ತುದಿಗಾಲಲ್ಲಿ ಕಾಯುತ್ತಿದ್ದಾರೆ.. ಆದರೆ ಎಲ್ಲದಕ್ಕೂ ಬ್ರೇಕ್ ಹಾಕಿ ಶೀಘ್ರವೇ ಹಸೆಮಣೆ ಹತ್ತಲು ನಯನತಾರಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.. ಇದರ ನಡುವೆ ನಯನತಾರಾ ದುಬಾರಿ ಮನೆಯೊಂದನ್ನ ಖರೀದಿಸಿ ಸುದ್ದಿಯಾಗಿದ್ದಾರೆ..
40 ಲಕ್ಷ ಮೌಲ್ಯದ ಮನೆ ಖರೀದಿಸಿದ ಲೇಡಿ ಸೂಪರ್ ಸ್ಟಾರ್..
ಪ್ರಿಯಕರ ವಿಜ್ಞೇಶ್ ಶಿವನ್ ಜೊತೆಗೆ ಶೀಘ್ರವೇ ನಯನತಾರಾ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಮಾಹಿತಿಗಳು ಎಲ್ಲಾ ಕಡೆ ಹರಿದಾಡುತ್ತಿವೆ.. ಹೀಗಾಗಿ ಮದುವೆಗೆ ಮೊದಲೇ ನಯನತಾರಾ ವೈವಾಹಿಕ ಜೀವನವನ್ನು ಹೊಸ ಮನೆಯಲ್ಲಿ ಶುರು ಮಾಡುವ ಉದ್ದೇಶದಿಂದ ಚೆನ್ನೈನ ಪೋಯೆಸ್ ಗಾರ್ಡನ್ನಲ್ಲಿ 4BHKಯ ಹೊಸ ಮನೆ ಖರೀದಿಸಿದ್ದಾರೆ..
ಇದನ್ನೂ ಓದಿ :ನಯನತಾರಾ ನೋಡಿದ್ರೆ 37 ವರ್ಷ ಅಂತ ಯಾರಾದ್ರೂ ಹೇಳ್ತಾರಾ? ಬೊಂಬಾಟ್ ಫಿಗರ್ಗೆ ಇದೇ ಕಾರಣವಂತೆ!
ಸೂಪರ್ ಸ್ಟಾರ್ ರಜನಿ ಮನೆ ಪಕ್ಕವೇ ನಯನತಾರಾ ಮನೆ
ಚೆನ್ನೈನ ಅತಿ ದುಬಾರಿ ಪ್ರದೇಶಗಳಲ್ಲಿ ಒಂದಾಗಿರುವ ಪೋಯಸ್ ಗಾರ್ಡನ್ ನಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆ ಕೂಡ ಇದೆ.. ಅಲ್ಲದೆ ನಟ ಧನುಷ್ ಕೂಡ ಪೋಯಸ್ ಗಾರ್ಡನ್ನಲ್ಲಿ ಮನೆ ಖರೀದಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ... ಹೀಗಿರುವಾಗಲೇ ನಯನತಾರಾ ತಮ್ಮ ಪ್ರಿಯಕರ ವಿಜ್ಞೇಶ್ ಜೊತೆ ವಾಸಮಾಡಲು 4BHK ಮನೆ ಖರೀದಿ ಮಾಡಿದ್ದಾರೆ..
4BHK ಮನೆ ಜೊತೆಗೆ ಮತ್ತೊಂದು ಬಂಗಲೆ ಖರೀದಿ..
ತಮಿಳು ಚಿತ್ರರಂಗದ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಈಗಾಗಲೇ ಹೊಸದಾಗಿ ಖರೀದಿಸಿರುವ 4 ಬೆಡ್ ರೂಮ್ ಫ್ಲ್ಯಾಟ್ ಜೊತೆ ಮತ್ತೊಂದು ಬಂಗಲೆಯನ್ನೂ ಕೊಂಡುಕೊಳ್ಳಲಿದ್ದಾರೆ. ಖರೀದಿ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ನಯನತಾರಾ ಅಧಿಕೃತವಾಗಿ ಈ ವಿಷಯವನ್ನು ತಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ನಿರ್ದೇಶಕ ವಿಘ್ನೇಶ್ ಜೊತೆ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಎರಡು ಬಂಗಲೆಗಳನ್ನು ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ :ಲೇಡಿ ಸೂಪರ್ ಸ್ಟಾರ್ ನಯನತಾರಾ ಬರ್ತ್ಡೇ: 37ರಲ್ಲೂ ಕಾಡುವ ಬ್ಯೂಟಿ ಕ್ವೀನ್!
2 ಸಿನಿಮಾಗಳ ಮುಕ್ತಾಯದ ಬಳಿಕ ನಯನತಾರಾ ಮದುವೆ..
ಈ ಹಿಂದೆ ನಟ ಸಿಂಬು ಹಾಗೂ ಪ್ರಭುದೇಔ ಜೊತೆಗಿನ ರಿಲೇಶನ್ ಶಿಪ್ ನಲ್ಲಿ ನಯನತಾರಾ ಇದ್ರೂ.. ಆದ್ರೆ ಇವರ ಮಧ್ಯೆ ಬ್ರೇಕಪ್ ಆದ ಬಳಿಕ ವಿಘ್ನೇಶ್ ಶಿವನ್ ಜತೆಗೆ ನಯನತಾರಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ವಿಜ್ಞೇಶ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಯನತಾರಾ ಸದ್ಯ ಶಿವನ್ ನಿರ್ದೇಶನದ 'ಕಾದುವಾಕುಲ ರೆಂಡು ಕಾದಲ್' ಚಿತ್ರದಲ್ಲಿ, ಶಾರುಖ್ ಖಾನ್ರ ಲಯನ್ ಮತ್ತು ಅಶ್ವಿನ್ ಶರವಣನ್ರ ಕನೆಕ್ಟ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.. ಶೀಘ್ರವೇ ಈ ಸಿನಿಮಾಗಳನ್ನು ಮುಗಿಸಿ ಹೊಸ ಮನೆಯ ಗೃಹಪ್ರವೇಶ ನೆರವೇರಿಸಿ ವೈವಾಹಿಕ ಜೀವನಕ್ಕೆ ಕಾಲಿಡಬಹುದು ಎಂದು ಹೇಳಲಾಗುತ್ತಿದೆ..
ಇನ್ನು ತಮ್ಮ ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಲೆಡಿ ಸೂಪರ್ ಸ್ಟಾರ್ ಹಲವಾರು ಮಹಿಳಾ ಕೇಂದ್ರಿತ ಚಲನಚಿತ್ರಗಳ ಭಾಗವಾಗಿದ್ದಾರೆ.ಅವರಿಗೆ ಸಾಲು ಸಾಲು ಆಫರ್ ಗಳು ಬರುತ್ತಿದ್ದು, ಸಖತ್ ಬ್ಯುಸಿ ನಟಿ ಎನಿಸಿಕೊಂಡಿದ್ದಾರೆ..ಲೇಡಿ ಟೈಗರ್, ರಾಜ ರಾಣಿ, ಐರಾ, ವಿಶ್ವಾಸಂ, ಬಿಗಿಲ್, ಅಣ್ಣಾತೆ, ಸೂಪರ್, ದರ್ಬಾರ್ ತಿರುಮುರುಗನ್, ಬಿಲ್ಲಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಅಲ್ಲದೇ ಇತ್ತೀಚಿಗೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುತೇಕ ಸಿನಿಮಾಗಳಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ