• Home
  • »
  • News
  • »
  • entertainment
  • »
  • Nayanthara Vignesh Baby: ನಯನತಾರಾ ದಂಪತಿಗೆ ಅವಳಿ ಮಕ್ಕಳು! ಕ್ಯೂಟ್ ಕಂದಮ್ಮಗಳ ಫೋಟೊ ನೋಡಿ

Nayanthara Vignesh Baby: ನಯನತಾರಾ ದಂಪತಿಗೆ ಅವಳಿ ಮಕ್ಕಳು! ಕ್ಯೂಟ್ ಕಂದಮ್ಮಗಳ ಫೋಟೊ ನೋಡಿ

ಅವಳಿ ಮಕ್ಕಳ ತಂದೆ ತಾಯಿಯಾದ ವಿಘ್ನೇಶ್, ನಯನತಾರಾ!

ಅವಳಿ ಮಕ್ಕಳ ತಂದೆ ತಾಯಿಯಾದ ವಿಘ್ನೇಶ್, ನಯನತಾರಾ!

Nayanthara Vignesh Baby Boys: ಮದುವೆಯಾದ ನಾಲ್ಕು ತಿಂಗಳಲ್ಲೇ ದಕ್ಷಿಣ ಭಾರತದ ನಯನತಾರಾ ತಾಯಿಯಾಗಿದ್ದಾರೆ. ನಯನತಾರಾಗೆ ಅವಳಿ ಮಕ್ಕಳು ಜನಿಸಿವೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಮಕ್ಕಳೊಂದಿಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಫೋಟೋಗಳಲ್ಲಿ, ಇಬ್ಬರೂ ಪುತ್ರರ ಪುಟ್ಟ ಪಾದಗಳನ್ನು ಚುಂಬಿಸುತ್ತಿರುವುದನ್ನು ಕಾಣಬಹುದು.

ಮುಂದೆ ಓದಿ ...
  • Share this:

ಬೆಂಗಳೂರು(ಅ.09): ಈ ವರ್ಷದ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayanthara - Vignesh Shivan) ಅವಳಿ ಮಕ್ಕಳನ್ನು ಪಡೆದಿದ್ದಾರೆ. ಭಾನುವಾರ, ಅಕ್ಟೋಬರ್ 9ರಂದು, ನಿರ್ದೇಶಕರು ಟ್ವಿಟರ್​ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಾಡಿಗೆ ತಾಯ್ತನ (Surrogacy) ಅಥವಾ ದತ್ತು ಪಡೆಯುವ ಮೂಲಕ ದಂಪತಿ ಮಕ್ಕಳನ್ನು ಪಡೆದಿದ್ದಾರೆನ್ನಲಾಗುತ್ತಿದೆ. ಈ ಬಗ್ಗೆ ನಿಖರವಾದ ವಿವರಗಳು ಇನ್ನೂ ಲಭ್ಯವಾಗಿಲ್ಲ.


ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಡೇರಿಂಗ್ ಸ್ಟೆಪ್, ಯಾರೂ ಊಹಿಸಿರಲಿಲ್ಲ ನ್ಯಾಚುರಲ್​ ಬ್ಯೂಟಿಯ ಈ ನಿರ್ಧಾರ!


ಇದೇ ವೇಳೆ ಅವರು ಮಕ್ಕಳ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಇದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.


ಈ ಬಗ್ಗೆ ಬರೆದಿರುವ ವಿಘ್ನೇಶ್ ನಯನ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ.  ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆ, ನಮ್ಮ ಪೂರ್ವಜರ ಆಶೀರ್ವಾದ ಎಲ್ಲಾ ಒಳ್ಳೆಯ ಅಭಿವ್ಯಕ್ತಿಗಳ ಹಾರೈಕೆಯ ಫಲವಾಗಿ ನಮಗೆ ಈ ಮಕ್ಕಳಾಗಿವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು ಎಂದಿದ್ದಾರೆ.


ಇದನ್ನೂ ಓದಿ: Ram Gopal Varma: ಸೂಪರ್ ಹಿಟ್ ಸಿನಿಮಾವನ್ನು ಕಾಪಿ ಮಾಡಿದ್ದೆ, ರಹಸ್ಯ ಬಿಚ್ಚಿಟ್ಟ ರಾಮ್​ ಗೋಪಾಲ್ ವರ್ಮಾ


ಕೆಲ ದಿನಗಳಿಂದ ನಯನತಾರಾ ಗರ್ಭಿಣಿ ಎಂಬ ಸುದ್ದಿ ಮುನ್ನೆಲೆಗೆ ಬಂದಿತ್ತು. ದಂಪತಿ ಕೆಲವು ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವುದು ಕಂಡುಬಂದಿತ್ತು. ಇನ್ನು ಮಕ್ಕಳೊಂದಿಗೆ ತಾವು ಮತ್ತು ನಯನತಾರಾ ಇರುವ ಫೋಟೋಗಳನ್ನು ಹಂಚಿಕೊಂಡಿದ್ದ ವಿಘ್ನೇಶ್ ತಾವು ಭವಿಷ್ಯಕ್ಕಾಗಿ ಅಭ್ಯಾಸ ಮಾಡುತ್ತಿದ್ದೇವೆ ಎಂದು ಬರೆದಿದ್ದರು. ಇದರ ಬೆನ್ನಲ್ಲೇ ಈ ದಂಪತಿ ಶೀಘ್ರದಲ್ಲೇ ಮಕ್ಕಳನ್ನು ಹೊಂದಲು ಯೋಜಿಸುತ್ತಿದ್ದಾರೆ ಎಂಬ ವದಂತಿ ಪ್ರಾರಂಭವಾಗಿತ್ತು. ನಯನತಾರಾ ಗರ್ಭಿಣಿ ಎಂಬ ಮಾತುಗಳೂ ಹರಿದಾಡಿದ್ದವು. ಆದರೀಗ ಇವರು ಬಾಡಿಗೆ ತಾಯ್ತನದ ಸಹಾಯದಿಂದ ಮುದ್ದು ಮಕ್ಕಳನ್ನು ಸ್ವಾಗತಿಸಿದ್ದಾರೆ ಎಂಬಂತೆ ಭಾಸವಾಗುತ್ತಿದೆ.


ಜೂನ್‌ನಲ್ಲಿ ನಯನತಾರಾ ಮದುವೆಯಾಗಿದ್ದರು


ಈ ವರ್ಷ ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಚೆನ್ನೈನಲ್ಲಿ ವಿವಾಹವಾದರು. ಈ ನಟ-ನಿರ್ದೇಶಕರ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದರು. ಹೀಗಿರುವಾಗ ಅಭಿಮಾನಿಗಳು ಇಬ್ಬರಿಗೂ ಶುಭಾಶಯ ಕೋರುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಮದುವೆಯ ಹಲವು ಫೋಟೋಗಳು ವೈರಲ್ ಆಗಿವೆ. ಸೂಪರ್ ಸ್ಟಾರ್ ಶಾರುಖ್ ಖಾನ್, ವಿಜಯ್ ಸೇತುಪತಿ ಮತ್ತು ನಿರ್ದೇಶಕ ಅಟ್ಲಿ ಕೂಡ ನಯನತಾರಾ ಮದುವೆಗೆ ಆಗಮಿಸಿದ್ದರು.


ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡುವುದಾದರೆ, ನಯನತಾರಾ ಶೀಘ್ರದಲ್ಲೇ ಶಾರುಖ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅಟ್ಲಿ ನಿರ್ದೇಶನದ ಜವಾನ್ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ನಟಿಸಲಿದ್ದು, ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್ ಚಿತ್ರದ ಶೂಟಿಂಗ್ ಕೆಲ ದಿನಗಳ ಹಿಂದೆ ಮುಗಿದಿದೆ. ಈ ಚಿತ್ರ 2023ರಲ್ಲಿ ಬಿಡುಗಡೆಯಾಗಲಿದೆ.

Published by:Precilla Olivia Dias
First published: