Mouni Roy Marriage; ಜನವರಿಯಲ್ಲಿ ಕೆಜಿಎಫ್ ಗರ್ಲ್ ಮೌನಿ ರಾಯ್ ಕಲ್ಯಾಣ?

ಗೆಳೆಯರು ಮತ್ತು ಕುಟುಂಬಸ್ಥರು ಮದುವೆ ಸ್ವಂತ ಊರು ಕೂಚ್, ಬಿಹಾರ ಅಥವಾ ಪಶ್ಚಿಮ ಬಂಗಾಳದಲ್ಲಿ ನಡೆಸುವ ಕುರಿತು ಪ್ಲಾನಿಂಗ್ ಮಾಡುತ್ತಿದ್ದಾರೆ. ಆದ್ರೆ ಸೂರಜ್ ಮತ್ತು ಮೌನಿ ವಿದೇಶದಲ್ಲಿ ವಿವಾಹ ಮಾಡಿಕೊಳ್ಳಲು ಚಿಂತಿಸಿದ್ದಾರೆ. ಇದುವರೆಗೂ ಮದುವೆ ಸ್ಥಳ ಅಂತಿಮಗೊಂಡಿಲ್ಲ ಎಂದು ವಿದ್ಯುತ್ ಹೇಳಿದ್ದಾರೆ.

ನಟಿ ಮೌನಿ ರಾಯ್​

ನಟಿ ಮೌನಿ ರಾಯ್​

  • Share this:
    ಬಾಲಿವುಡ್ ನಟಿ ಮೌನಿ ರಾಯ್ (Mouni Roy) ಅವರ ಮದುವೆ ಕುರಿತ ಸುದ್ದಿಗಳು ಬಿಟೌನ್ ಗಲ್ಲಿಯಲ್ಲಿ ಆಗಾಗ ಸದ್ದು ಮಾಡುತ್ತಿರುತ್ತದೆ. ದುಬೈನ ಉದ್ಯಮಿ ಸೂರಜ್ ನಂಬಿಯಾರ್ (Sooraj Nambiyar) ಜೊತೆ ರಿಲೇಶನ್ ಶಿಪ್ ನಲ್ಲಿರುವ ಮೌನಿ ರಾಯ್ ಅವರು ಜನವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸೂರಜ್ ಮತ್ತು ಮೌನಿ ರಾಯ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನಟಿ ಬರ್ತ್ ಡೇಯಂದು ಸೂರಜ್ ಪೋಸ್ಟ್ ಹಂಚಿಕೊಂಡು ಅದಕ್ಕೆ ಹಾರ್ಟ್ ಎಮೋಜಿ ಹಾಕಿ, ಇಬ್ಬರು ನನ್ನವರು ಎಂದು ರೊಮ್ಯಾಂಟಿಕ್ ಸಾಲುಗಳನ್ನು ಬರೆದುಕೊಂಡಿದ್ದರು.

    ದುಬೈ ಅಥವಾ ಇಟಲಿಯಲ್ಲಿ ಕಲ್ಯಾಣ!

    ಕೆಲ ಮಾಧ್ಯಮಗಳ ಪ್ರಕಾರ ನಟಿ ಮೌನಿ ರಾಯ್ ಮದುವೆ ದುಬೈ (Dubai) ಅಥವಾ ಇಟಲಿಯಲ್ಲಿ (Italy) ನಡೆಯುವ ಸಾಧ್ಯತೆಗಳಿವೆ. ಮದುವೆ ಕುರಿತು ಮಾಹಿತಿ ಹಂಚಿಕೊಂಡಿರುವ ಮೌನಿರಾಯ್ ಸೋದರ ಸಂಬಂಧಿ ವಿದ್ಯುತ್ ರಾಯ್‍ಸರ್ಕಾರ್, ಜೋಡಿ ತಮ್ಮ ಮದುವೆ ಅತ್ಯಾಪ್ತರ ಸಮ್ಮುಖದಲ್ಲಿ ನಡೆಯಬೇಕೇಂದು ಇಚ್ಛಿಸಿದ್ದಾರೆ. ಮದುವೆ ಕಾರ್ಯಕ್ರಮ ತುಂಬಾನೇ ಖಾಸಗಿಯಾಗಿ ನಡೆಯಲಿದೆ. ಗೆಳೆಯರು ಮತ್ತು ಕುಟುಂಬಸ್ಥರು ಮದುವೆ ಸ್ವಂತ ಊರು ಕೂಚ್, ಬಿಹಾರ ಅಥವಾ ಪಶ್ಚಿಮ ಬಂಗಾಳದಲ್ಲಿ ನಡೆಸುವ ಕುರಿತು ಪ್ಲಾನಿಂಗ್ ಮಾಡುತ್ತಿದ್ದಾರೆ. ಆದ್ರೆ ಸೂರಜ್ ಮತ್ತು ಮೌನಿ ವಿದೇಶದಲ್ಲಿ ವಿವಾಹ ಮಾಡಿಕೊಳ್ಳಲು ಚಿಂತಿಸಿದ್ದಾರೆ. ಇದುವರೆಗೂ ಮದುವೆ ಸ್ಥಳ ಅಂತಿಮಗೊಂಡಿಲ್ಲ ಎಂದು ವಿದ್ಯುತ್ ಹೇಳಿದ್ದಾರೆ. ಮೌನಿ ಮತ್ತು ಸೂರಜ್ 2019ರಿಂದಲೂ ಡೇಟ್ ನಲ್ಲಿ ಇದ್ದಾರೆ.

    ಮೌನಿ ರಾಯ್ ಮುಂದಿನ ಸಿನಿಮಾ

    ಅಯಾನ್ ಮುಖರ್ಜಿ ನಿರ್ಮಾಣದ 'ಬ್ರಹ್ಮಾಸ್ತ್ರ' (Brahmāstra) ದಲ್ಲಿ ರಣ್‍ಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Kapoor And Alia Bhat) ಜೊತೆ ಮೌನಿ ರಾಯ್ ನಟಿಸಿದ್ದಾರೆ. ಇದೇ ಚಿತ್ರದಲ್ಲಿ ಹಿರಿಯ ನಟರಾದ ಅಮಿತಾಬ್ ಬಚ್ಚನ್ (Amitab Bachchan) ಮತ್ತು ನಾಗಾರ್ಜುನ್ (Nagarajun) ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ 'ದಿಲ್ ಗಲತಿ ಕರ್ ಬೈಟಾ ಹೈ' ಮ್ಯೂಸಿಕ್ ಅಲ್ಬಂನಲ್ಲಿ ಗಾಯಕ ಜುಬಿನ್ ನೌಟಿಯಾಲಾ (Jubin Nautiyal) ಜೊತೆ ಮೌನಿ ರಾಯ್ ಹೆಜ್ಜೆ ಹಾಕಿದ್ದರು. ಈ ಹಾಡು ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದು, ಹೊಸ ಹೊಸ ದಾಖಲೆಗಳನ್ನು ಬರೆಯುವ ಹೊಸ್ತಿಲಿನಲ್ಲಿದೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‍ನಲ್ಲಿ ನಟಿಸಿದ್ದ ಮೌನಿ ರಾಯ್

    ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಭಾರತದಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿದ ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ (KGF Chapter 1) ಚಿತ್ರದಲ್ಲಿ ಮೌನಿ ರಾಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಾಗುವಂತೆ ಸೊಂಟ ಬಳುಕಿಸಿದ್ದರು. ಕೆಜಿಎಫ್ ಚಾಪ್ಟರ್- 1 ಕನ್ನಡ, ತಮಿಳು, ತೆಲಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಹಿಂದಿ ಭಾಷೆಯ ಕೆಜಿಎಫ್ ನಲ್ಲಿ ಮೌನಿ ರಾಯ್ ಅವರು ಹೆಜ್ಜೆ ಹಾಕಿದ್ದರು.

    ಇದನ್ನು ಓದಿ: Actress Vijayalakshmi: ನಟಿ ವಿಜಯಲಕ್ಷ್ಮೀ ಮನವಿಗೆ ಕರಗಿದ ಅಭಿಮಾನಿಗಳು; 3 ದಿನಗಳಲ್ಲಿ 7 ಲಕ್ಷ ಹಣ ಸಂದಾಯ

    ನಾಗಿಣಿಯಾಗಿ ಮನೆ ಮನೆ ಮಾತಾದ ನಟಿ ಮೌನಿ ರಾಯ್

    ಮೌನಿ ರಾಯ್ ಖಾಸಗಿ ವಾಹಿನಿಯ 'ನಾಗಿಣಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಮನೆ ಮನೆ ಮಾತಾಗಿದ್ದರು. ಧಾರಾವಾಹಿಯಲ್ಲಿ ನಟನೆ ಜೊತೆಯಲ್ಲಿ ಗ್ಲಾಮರ್ ನಿಂದಲೂ ಮೌನಿ ಹಾಟ್ ಫೇವರೇಟ್ ಆಗಿದ್ದರು. ನಂತರ ಅಕ್ಷಯ್ ಕುಮಾರ್ (Akshay Kumar) ಅಭಿನಯದ 'ಗೋಲ್ಡ್' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ನಟಿಸಿಸಿದ್ದಾರೆ.

    ವರದಿ: ಮೊಹ್ಮದ್​​ ರಫೀಕ್​ ಕೆ
    Published by:HR Ramesh
    First published: