ಮೆಹ್ರೀನ್ ಪೀರ್ಜಾದಾ, ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುತ್ತಿರುವ ಪಂಜಾಬಿ ಮೂಲದ ಸುಂದರಿ. 2016ರಲ್ಲಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮೆಹ್ರೀನ್ ಪೀರ್ಜಾದಾ ಇದುವರೆಗೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ನಲ್ಲಿ ಫಿಲ್ಲೌರಿ ಸೇರಿದಂತೆ ಮಹಾನುಬಾವುಡು, ರಾಜಾ ದಿ ಗ್ರೇಟ್, ನೋಟಾ, ಚಾಣಕ್ಯ, ಪಟ್ಟಾಸ್, ಫನ್ ಆ್ಯಂಡ್ ಫ್ರಸ್ಟ್ರೇಷನ್ ಸೇರಿದಂತೆ ಹತ್ತಕ್ಕೂ ಹೆಚ್ಚು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಅಶ್ವತ್ಥಾಮ್ ರಿಲೀಸ್ ಬಳಿಕ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಅದರ ನಡುವೆಯೇ ಎಫ್ 3 ಅರ್ಥಾತ್ ಫನ್ ಆ್ಯಂಡ್ ಫ್ರಸ್ಟ್ರೇಷನ್ ಚಿತ್ರದ ಸೀಕ್ವಲ್ನಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೇ ಮೆಹ್ರೀನ್ ಬಹುಕಾಲದ ಗೆಳೆಯ ಭವ್ಯ ಬಿಷ್ನೋಯ್ ಜೊತೆ ನಿನ್ನೆ ರಿಂಗ್ ಬದಲಿಸಿಕೊಂಡಿದ್ದಾರೆ.
ಭವ್ಯ ಬಿಷ್ನೋಯ್, ಮೂರು ಬಾರಿ ಹರ್ಯಾಣಾ ರಾಜ್ಯದ ಸಿಎಂ ಆಗಿದ್ದ ಭಜನ್ ಲಾಲ್ರ ಮೊಮ್ಮಗ. ಹರ್ಯಾಣಾದ ಹಿಸ್ಸಾರ್ನನ ಅದಮ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಕುಲ್ದೀಪ್ ಬಿಷ್ನೋಯ್ ಅವರ ಮಗ. ಭವ್ಯ ಬಿಷ್ನೋಯ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
View this post on Instagram
ಇದನ್ನೂ ಓದಿ: Darshan Autograph: ಅಭಿಮಾನಿಯ ಆಸೆ ನೆರವೇರಿಸಿದ ನಟ ದರ್ಶನ್: ಹೇಗಿದೆ ಗೊತ್ತಾ ಡಿಬಾಸ್ ಆಟೋಗ್ರಾಫ್..!
ರಾಜಸ್ತಾನದ ಜೈಪುರದ ಹಳೆಯ ಕಾಲದ ರಾಜಮನೆತನಕ್ಕೆ ಸೇರಿದ ಮಹಲಿನಲ್ಲಿ ಅದ್ಧೂರಿಯಾಗಿ ಮೆಹ್ರೀನ್ ಪೀರ್ಜಾದಾ ಹಾಗೂ ಭವ್ಯ ಬಿಷ್ನೋಯ್ ನಿಶ್ಚಿತಾರ್ಥ ನೆರವೇರಿದೆ. ಮದುವೆಯನ್ನೂ ಸಹ ಇದೇ ರೀತಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುವ ಪ್ಲ್ಯಾನ್ ಈ ಜೋಡಿಯದ್ದು ಎನ್ನಲಾಗಿದೆ.
View this post on Instagram
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ