ನಟಿ ಮೇಘನಾ ರಾಜ್ (Meghana Raj) ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ್ದಾರೆ. ನಟ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಮಗನ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಶೇರ್ ಮಾಡಿ ವ್ಯಾಲೆಂಟೈನ್ಸ್ ಡೇಗೆ (Valentine's Day) ವಿಶ್ ಮಾಡಿದ್ದಾರೆ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಪ್ರೀತಿಸಿ ಮದುವೆಯಾಗಿದ್ರು ನಟಿ ಮೇಘನಾ ರಾಜ್, ಸ್ಯಾಂಡಲ್ವುಡ್ನ (Sandalwood) ಕ್ಯೂಟ್ ಜೋಡಿಯಾಗಿದ್ದ ಇವರ ಬಾಳಲಿ ವಿಧಿ ಚೆಲ್ಲಾಟವಾಡಿತ್ತು. ಹೃದಯಘಾತದಲ್ಲಿ ಚಿರು ಸಾವನ್ನಪ್ಪಿ ವರುಷಗಳೇ ಕಳೆದು ಹೋಗಿದೆ.
ಮುದ್ದು ಮಗನ ಜೊತೆ ಮೇಘನಾ ರಾಜ್
ಚಿರು ಸಾವನ್ನಪ್ಪಿದ ವೇಳೆ ಗರ್ಭಿಣಿಯಾಗಿದ್ದ ಮೇಘನಾ ರಾಜ್, ಮುದ್ದು ಮಗನಿಗೆ ಜನ್ಮ ನೀಡಿದ ಬಳಿಕ . ಮಗನ ರಾಯನ್ ರಾಜ್ ಸರ್ಜಾ ಲಾಲನೆ-ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ. ಮಗನ ಫೋಟೋಗಳನ್ನು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ.
ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮೇಘನಾ
ಇದೀಗ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮೇಘನಾ ರಾಜ್ ಮಗನ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಮಗ ರಾಯನ್ ರಾಜ್ ಫೋಟೋ ಹಾಕಿ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಶುಭಕೋರಿದ್ದಾರೆ. ಮಗನ ಆಟ-ಪಾಠಗಳ ಫೋಟೋ ವಿಡಿಯೋಗಳನ್ನು ಮೇಘನಾ ರಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ತಾರೆ.
View this post on Instagram
ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದ ವೇಳೆ ಮೇಘನಾ ರಾಜ್ ವ್ಯಾಲೆಂಟೈನ್ಸ್ ಡೇಗೆ ಚಿರು ಕೊಟ್ಟ ಗಿಫ್ಟ್ಗಳ ಬಗ್ಗೆ ನೆನೆದು ಕಣ್ಣೀರು ಹಾಕಿದ್ರು. ಚಿರಂಜೀವಿ ಸರ್ಜಾ ಕೊಟ್ಟ ಪ್ರತಿಯೊಂದು ಗಿಫ್ಟ್ಗಳನ್ನು ಕೂಡ ಮೇಘನಾ ಸರ್ಜಾ ಜೋಪಾನವಾಗಿ ಕಾಪಾಡಿಕೊಂಡಿ ಬಂದಿದ್ದಾರೆ.
2 ಮದುವೆ ಬಗ್ಗೆ ಮೇಘನಾ ಸ್ಪಷ್ಟನೆ
ಚಿರು ನಿಧನದ ಬಳಿಕ ಮೇಘನಾ ರಾಜ್ 2ನೇ ಮದುವೆ ಆಗ್ತಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮೇಘನಾ ರಾಜ್, 2ನೇ ಮದುವೆಯಾಗುವ ಆಲೋಚನೆ ನನಗೆ ಇಲ್ಲ. ಚಿರು ಹೇಳಿದ್ದಾರೆ ನೀನು ನಿನ್ನ ಮನಸ್ಸು ಹೇಳುವ ಕೆಲಸ ಮಾಡು ಎಂದು, ಇನ್ನೂ ನನ್ನ ಮನಸ್ಸು ಈ ಬಗ್ಗೆ ಪ್ರಶ್ನೆ ಮಾಡಿಲ್ಲ ಎಂದು ಹೇಳಿದ್ದರು. ಈ ಮೂಲಕ ಎಲ್ಲಾ ಗಾಳಿ ಸುದ್ದಿಗಳಿಗೂ ತೆರೆ ಎಳೆದಿದ್ರು.
ಮತ್ತೆ ಮೇಘನಾ ರಾಜ್ ಆ್ಯಕ್ಟಿವ್
ನಟ ಚಿರಂಜೀವಿ ಸರ್ಜಾ ನೆನಪಿನಲ್ಲೇ ಬದುಕುತ್ತಿರುವ ನಟಿ ಮೇಘನಾ ರಾಜ್ ಇದೀಗ ಮಗನ ಜೊತೆ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇದೀಗ ಸಿನಿಮಾ ಕೆಲಸದಲ್ಲಿ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಚಾನೆಲ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗ್ತಿದ್ದಾರೆ.
ಇದನ್ನೂ ಓದಿ: Meghana Raj: ಪತಿ ನೆನೆದು ಭಾವುಕರಾದ ಮೇಘನಾ ರಾಜ್, ಚಿರು ಇರಬೇಕಿತ್ತು ಎಂದ ಅಭಿಮಾನಿಗಳು
ಇತ್ತೀಚಿಗಷ್ಟೇ ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಅವರ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಮೇಘನಾ ಮತ್ತು ಚಿರು ಫೋಟೋ ನೋಡಿ ಹಲವರು ಸೂಪರ್ ಎಂದು ಕಾಮೆಂಟ್ ಹಾಕಿದ್ದರು. ಇನ್ನೂ ಕೆಲವರು ಚಿರಂಜೀವಿ ಸರ್ಜಾ ಅವರು ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ