17ನೇ ವರ್ಷದಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಮೇಘನಾ ರಾಜ್ (Meghana Raj), ನಟಿಯಾಗಿ ಸ್ಯಾಂಡಲ್ವುಡ್ನಲ್ಲಿ (Sandalwood) ತನ್ನದೇ ಚಾಪು ಮೂಡಿಸಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಸ್ಟಾರ್ ದಂಪತಿ ಸುಂದರ್ ರಾಜ್ (Sundhar Raj) ಹಾಗೂ ಪ್ರಮೀಳಾ ಜೋಷಾಯಿ (Pramila Joshai) ಮಗಳು ಮೇಘನಾ ರಾಜ್, 2009 ರಲ್ಲಿ ತೆರೆಕಂಡ `ಬೆಂಡು ಅಪ್ಪಾರಾವ್ RMP' ಚಿತ್ರದ ಮೂಲಕ ನಾಯಕಿಯಾಗಿ ಸಿನಿಪಯಣ ಆರಂಭಿಸಿದ್ದು, ಇದೀಗ ಮತ್ತೆ ಸೆಕೆಂಡ್ ಇನ್ಸಿಂಗ್ಸ್ ಆರಂಭಿಸಿರುವ ಮೇಘನಾ ರಾಜ್ ತನ್ನ ಸಿನಿ ಜರ್ನಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತಾಡಿದ್ದಾರೆ. ನಟ ಚಿರು ಹಾಗೂ ಮಗ ರಾಯನ್ ರಾಜ್ ಸರ್ಜಾ ಬಗ್ಗೆ ಕೂಡ ಮಾತಾಡಿದ್ದಾರೆ.
ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್
ನನ್ನ ಅಪ್ಪ-ಅಮ್ಮ ನಟಿಸುವುದನ್ನು ನೋಡ್ತಿದ್ದೆ ಚಿಕ್ಕವಯಸ್ಸಿನಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಯಿತು. ನನ್ನ ಕೆರಿಯರ ಆರಂಭಿಸಿದ್ದು 17ನೇ ವರ್ಷದಲ್ಲಿ. ಸಿನಿಮಾ ನನಗೆ ಎಲ್ಲಾ ಆಗಿದೆ. ನನಗೆ ಪ್ರೀತಿ 2 ರೂಪಾದಲ್ಲಿ ಬಂದಿದೆ. ಒಂದು ಚಿರು, ಇಬ್ಬರೂ ನನಗೆ ಅತಿ ಮುಖ್ಯರೇ ಆಗಿದ್ರು. ಸಿನಿಮಾ ಕೂಡ ನನಗೆ ಒಂದು ಎಮೋಷನ್, ಚಿರು ಕೂಡ ನನಗೆ ಎಮೋಷನ್, ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. 2018ರಲ್ಲಿ ಚಿರು ಜೊತೆ ಮದುವೆ ಕೂಡ ಆಯ್ತು ಎಂದು ಮೇಘನಾ ರಾಜ್ ಹಳೇ ನೆನಪಿನ ಬಗ್ಗೆ ಮಾತಾಡಿದ್ದಾರೆ.
ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು
ಚಿರು ಜೊತೆ ವಿವಾಹವಾದ ಬಳಿಕ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದ್ರೆ ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು ಎಂದು ಮೇಘನಾ ಹೇಳಿದ್ದಾರೆ. 2020ನೇ ವರ್ಷ ನನ್ನ ಜೀವನದ ಫುಲ್ ಸ್ಟಾಪ್ ಆಗಿತ್ತು. ನನ್ನ ಜೀವನದಲ್ಲಿ ಮತ್ತೆ ಆಸೆಗಳು ಚಿಗುರಿದ್ದು ರಾಯಲ್ ಹುಟ್ಟಿದ ಮೇಲೆ, ಅವನಿಗಾಗಿ ಬದುಕುವ ನಿರ್ಧಾರ ಮಾಡಿದ್ದೆ. ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ. ಅವನಿಗೆ ನಾನು ತಂದೆ-ತಾಯಿಯಾಗಿ ಬದುಕಬೇಕು ಅಷ್ಟೇ ಎಂದು ನಿರ್ಧಾರ ಮಾಡಿಬಿಟ್ಟಿದೆ. ಇದೇ ನನ್ನ ಬದುಕು ಎಂದು ನಿರ್ಧರಿಸಿದ್ದೆ.
View this post on Instagram
ಇದೇ ವೇಳೆ ಫ್ರೆಂಡ್ಸ್ ಬಗ್ಗೆ ಮಾತಾಡಿದ ಮೇಘನಾ ರಾಜ್, ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಅಂದ್ರೆ ಅದು ನನ್ನ ಫ್ರೆಂಡ್ಸ್ ಎಂದಿದ್ದಾರೆ. ನೀನು ಒಂಟಿಯಾಗಿ ನಿಂತಿದ್ರು. ನಿನ್ನ ಹಿಂದೆ ನನ್ನ ಫ್ರೆಂಡ್ಸ್ ಸಪೋರ್ಟ್ ಸಿಸ್ಟಂ ರೀತಿ ನಿಂತಿರುತ್ತಾರೆ ಎಂದು ಚಿರು ಯಾವಾಗಲು ಹೇಳ್ತಿದ್ದರು ಅದು ನಿಜವಾಗಿದೆ ಎಂದು ಹೇಳಿದ್ರು. ನನಗೆ ಇನ್ನೇನು ಬೇಡ ಎಂದು ಅಂದುಕೊಂಡಾಗ ನನ್ನ ಮುಂದೆ ಒಂದು ಮಿಂಚಿನಂತೆ ಬಂದಿದ್ದು, ನನ್ನ ಸ್ನೇಹಿತ ಪನ್ನಾ, ನಿನಗೋಸ್ಕರ ಏನು ಮಾಡಿಕೊಳ್ತೀಯಾ ಹೇಳು ಅಂದ, ನನಗೆ ಒಂದು ಕಥೆ ಕೂಡ ನೀಡಿದ್ರು.
ಕಥೆ ಹೇಗಿದೆ ಎಂದು ಕೇಳಿದ. ನಾನು ತುಂಬಾ ಚೆನ್ನಾಗಿದೆ ಎಂದೇ ಈ ಸಿನಿಮಾ ನೀನೇ ಮಾಡ್ಬೇಕು ಎಂದು ಹೇಳಿದ್ರು. ನನಗೆ ಆಶ್ವರ್ಯವಾಯಿತು. ನೀನು ಮತ್ತೆ ಕಮ್ ಬ್ಯಾಕ್ ಮಾಡ್ಬೇಕು ಎಂದು ಹೇಳಿದ. ಜೀವನದ ಎಷ್ಟೇ ಫುಲ್ ಸ್ಟಾಪ್ ಹಾಕಿದ್ರು. ನಾನು ಮತ್ತೆ ಬರೆಯಲು ಶುರು ಮಾಡ್ತೀನಿ. ತತ್ಸಮ-ತದ್ಬವ ನನ್ನ ಜೀವಕ್ಕೆ ಹೊಸ ತಿರುವು, ಇದು ಎಲ್ಲಾ ಹೆಣ್ಣು ಮಕ್ಕಳ ಒಳ ಮನಸ್ಸು ಎಂದು ಮೇಘನಾ ರಾಜ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ