• Home
  • »
  • News
  • »
  • entertainment
  • »
  • Meghana Raj: ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎಂದ ರಾಯನ್, ಚಿರು ಮಗನ ಮುದ್ದಾದ ವಿಡಿಯೋ ನೋಡಿ

Meghana Raj: ಅಮ್ಮ ಅಂತ ಹೇಳಿಕೊಟ್ರು ಅಪ್ಪ ಎಂದ ರಾಯನ್, ಚಿರು ಮಗನ ಮುದ್ದಾದ ವಿಡಿಯೋ ನೋಡಿ

ನಟಿ ಮೇಘನಾ ರಾಜ್​

ನಟಿ ಮೇಘನಾ ರಾಜ್​

Rayan Raj Sarja: ಹೌದು, ಬಿಡುವಿನ ಸಮಯದಲ್ಲಿ ಮಗ ರಾಯನ್ ರಾಜ್ ಸರ್ಜಾ ಜೊತೆ ಸಮಯ ಕಳೆಯುವ ಮೇಘನಾ ಮಗನ ಫೋಟೋ ಹಾಗೂ ವಿಡಿಯೊಗಳನ್ನು ಆಗಾಗ ಹಾಕುತ್ತಿರುತ್ತಾರೆ.

  • Share this:

ಮೇಘನಾ ರಾಜ್ (Meghana Raj) ಕನ್ನಡ ಚಿತ್ರರಂಗದ (Sandalwood) ಅದ್ಭುತ ನಟಿ. ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ಜನರ ಮನಸ್ಸನ್ನು ಗೆದ್ದವರು. ಹಾಗೆಯೇ ಸಾಮಾಜಿಕ ಜಾಲತಾಣದ (Social Media) ಮೂಲಕ ಅಭಿಮಾನಿಗಳ (Fans) ಜೊತೆ ಸಂಪರ್ಕದಲ್ಲಿರುವ ಅವರು ಹಾಕುವ ಫೋಟೋ ಹಾಗೂ ವಿಡಿಯೋ ವೈರಲ್ (Video viral) ಆಗುತ್ತದೆ.ಇದೀಗ ಮೇಘನಾ ಮುದ್ದು ಮಗನ ಜೊತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದು ಅಭಿಮಾನಿಗಳಲ್ಲಿ ಸಹ ಕಣ್ಣಾಲಿ ತರಿಸಿದೆ.  


ಅಮ್ಮ ಎಂದು ಹೇಳಿಕೊಟ್ಟರೆ ಅಪ್ಪ ಎಂದ ರಾಯನ್


ಹೌದು, ಬಿಡುವಿನ ಸಮಯದಲ್ಲಿ ಮಗ ರಾಯನ್ ರಾಜ್ ಸರ್ಜಾ ಜೊತೆ ಸಮಯ ಕಳೆಯುವ ಮೇಘನಾ ಮಗನ ಫೋಟೋ ಹಾಗೂ ವಿಡಿಯೊಗಳನ್ನು ಆಗಾಗ ಹಾಕುತ್ತಿರುತ್ತಾರೆ. ಸದ್ಯ ಈ ವಿಡಿಯೋದಲ್ಲಿ ಮೇಘನಾ ಮಗನಿಗೆ ಅಮ್ಮ ಎಂದು ಕರೆಯುವುದನ್ನ ಹೇಳಿಕೊಡುತ್ತಿದ್ದಾರೆ. ರಾಯನ್ ಕೂಡ ಮೇಘನಾ ಹೇಳಿದ ರೀತಿಯೇ ಹೇಳುತ್ತಿರುತ್ತಾನೆ. ಅವರು ಅಮ್ಮ ಎಂಬುದನ್ನ ವಿಭಿನ್ನವಾಗಿ ಹೇಳಿದರೂ ಸಹ ರಾಯನ್ ಹಾಗೆಯೇ ಹೇಳುತ್ತಾನೆ, ಈ ವಿಡಿಯೋ  ಬಹಳ ಮುದ್ದಾಗಿದ್ದು, ಎಲ್ಲರಿಗೂ ಇಷ್ಟವಾಗಿದೆ. ಆದರೆ ಈ ವಿಡಿಯೋದ ಕೊನೆಯಲ್ಲಿ ಮಾತ್ರ ರಾಯನ್ ಅಮ್ಮ ಎಂದು ಹೇಳಿಕೊಟ್ಟರೆ ಅಪ್ಪ ಎನ್ನುತ್ತಾನೆ. ಇದು ಎಲ್ಲರ ಮನಸ್ಸನ್ನು ಗೆದ್ದಿದೆ.


ನಟ ಚಿರು - ಮೇಘನಾ ಬಹಳ ಮುದ್ದಾದ ಜೋಡಿ. ಮೇಡ್ ಫಾರ್ ಈಚ್ ಅದರ್ ಅನ್ನುವಂತೆ ಇಬ್ಬರ ಜೋಡಿ ಇತ್ತು. ಆದರೆ ವಿಧಿಗೂ ಈ ಜೋಡಿ ಕಂಡು ಹೊಟ್ಟೆ ಕಿಚ್ಚಾಯ್ತೆನೋ  ಸಮಯವಲ್ಲದ ಸಮಯದಲ್ಲಿ, ಬದುಕಿ ಬಾಳಬೇಕಾದವರನ್ನ ದೂರ ಮಾಡಿ ತಾನೆಷ್ಟು ಕ್ರೂರಿ ಅನ್ನೋದನ್ನ ತೋರಿಸಿ, ಅಭಿಮಾನಿಗಳನ್ನು ಸಹ ನೋವಿನಲ್ಲಿ ಮುಳುಗಿಸಿತ್ತು.  ಚಿರು ಅಗಲಿಕೆ ನಂತರ ಮೇಘನಾಗೆ ಮಗ ರಾಯನ್ ಸರ್ವಸ್ವ. ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದಾರೆ.


ಇನ್ನು ಇತ್ತೀಚೆಗಷ್ಟೇ ಮೇಘನಾ ಸಾಮಾಜಿಕ ಕಳಕಳಿ ಇರುವ ವಿಡಿಯೋವೊಂದನ್ನು ಹಾಕಿದ್ದರು. ಅದು ಸಹ ಬಹಳ ಸುದ್ದಿಯಾಗಿತ್ತು. ಆ ವಿಡಿಯೋದ ಸಂದೇಶ ಬಹಳ ಅದ್ಭುತವಾಗಿದೆ. ಇದರಲ್ಲಿ ಮಕ್ಕಳಿಗೆ ಮೊಬೈಲ್ ಕೊಡುವುದನ್ನ ಕಡಿಮೆ ಮಾಡಿ ಎಂದು ಹೇಳಲಾಗಿತ್ತು. ಮೊಬೈಲ್​ ಬಿಡಿ, ಮೈದಾನಕ್ಕೆ ನಡಿ ಎಂಬ ಸಂದೇಶವನ್ನು ಈ ವಿಡಿಯೋ ಮೂಲಕ ಮೇಘನಾ ರಾಜ್​ ನೀಡಿದ್ದು, ಮಗ ರಸ್ತೆಯಲ್ಲಿ ಮಕ್ಕಳ ಜೊತೆ ಆಡುವ ವಿಡಿಯೋವನ್ನು ಹಾಕಿಕೊಂಡಿದ್ದರು.


ಇದನ್ನೂ ಓದಿ: ಚಾರ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಾನ್ ಅಬ್ರಾಹಂ, ಕಾಲ್ ಮಾಡಿ ಸೂಪರ್ ಅಂದ್ರಂತೆ ನಟ


ಸಿನಿಮಾಗೆ ಮರಳಿದ ಮೇಘನಾ


2021, ಅಕ್ಟೋಬರ್ 22ರಂದು ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು. ಮೇಘನಾ ತಮ್ಮ ಮಗನಿಗೆ ರಾಯನ್ ರಾಜ್ ಅಂತ ಹೆಸರಿಟ್ಟಿದ್ದಾರೆ. ಸರ್ಜಾ ಫ್ಯಾಮಿಲಿಯ ಕನಸಿನ ಕೂಸಾದ ರಾಯನ್, ಈಗ ಮನೆಯವರೆಲ್ಲರ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣಗಳಲ್ಲೂ ರಾಯನ್​ಗೆ ಅಸಂಖ್ಯಾತ ಫ್ಯಾನ್ಸ್ ಇದ್ದಾರೆ.  ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಗೂ ಸುಂದರ ನಟಿಯರಲ್ಲಿ ಮೇಘನಾ ರಾಜ್ ಕೂಡ ಒಬ್ಬರು. ಹಿರಿಯ ನಟ ಸುಂದರ್ ರಾಜ್ ಹಾಗೂ ಹಿರಿಯ ನಟಿ ಪ್ರಮಿಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್. ಮೇಘನಾ ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನವೇ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ ಹೆಸರು ಮಾಡಿದ್ದರು.

View this post on Instagram


A post shared by Meghana Raj Sarja (@megsraj)

ಮದುವೆ ಬಳಿಕವೂ ಮೇಘನಾ ರಾಜ್ ಸಿನಿಮಾದಲ್ಲಿ ಅಭಿನಯಿಸುವುದನ್ನು ಮುಂದುವರೆಸಿದ್ದರು. ಮೇಘನಾ ಅವರ ಅಧಿಕೃತ ಫೇಸ್ಬುಕ್ ಪುಟವು 2.5 ದಶಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ. ಕೇರಳದ ಪ್ರತಿಷ್ಠಿತ ಕೊಚ್ಚಿ ಟೈಮ್ಸ್ 'ಅತ್ಯಂತ ಅಪೇಕ್ಷಣೀಯ ಮಹಿಳೆ 2015' ಸಮೀಕ್ಷೆಯಲ್ಲಿ ಅವರು ನಂ .19ನೇ ಸ್ಥಾನ ಪಡೆದರು. ಬೆಂಗಳೂರು ಟೈಮ್ಸ್ನ 'ಅತ್ಯಂತ ಅಪೇಕ್ಷಣೀಯ ಮಹಿಳೆ 2015'ರ ಸಮೀಕ್ಷೆಯಲ್ಲಿ ಮೇಘನಾ ರಾಜ್ 10ನೇ ಸ್ಥಾನದಲ್ಲಿದ್ದರು.


ಇದನ್ನೂ ಓದಿ: ನಾಳೆ ಬಿಡುಗಡೆಗೆ ಸಿದ್ದವಾಗಿದೆ 3 ಸಿನಿಮಾಗಳು, ವೀಕೆಂಡ್​ನಲ್ಲಿ ಸಿನಿಪ್ರಿಯರಿಗೆ ಭರ್ಜರಿ ಹಬ್ಬ


ಇಷ್ಟೆಲ್ಲಾ ಸಾಧನೆ ಮಾಡಿರುವ ಮೇಘನಾ ಮತ್ತೆ ಮರಳಿ ಸಿನಿಮಾದತ್ತ ಮುಖ ಮಾಡಿದ್ದು, ಪನ್ನಗ ಭರಣ ಜೊತೆ ಒಂದು ಸಿನಿಮಾವನ್ನು ಮಾಡುತ್ತಿದ್ದಾರೆ. ಈಗಾಗಲೇ ರಿಯಾಲಿಟಿ ಶೋ ಜಡ್ಜ್​ ಆಗಿ ಮೇಘನಾ ಕಾಣಿಸಿಕೊಂಡಿದ್ದು, ಮತ್ತೆ ಫುಲ್​ ಆಕ್ಟೀವ್​ ಆಗುತ್ತಿದ್ದಾರೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು