ನನಗೆ ಸಂಬಂಧಿಸಿದ ಗಾಳಿ ಸುದ್ದಿಗಳನ್ನು ನಂಬಬೇಡಿ; ಅಭಿಮಾನಿಗಳಲ್ಲಿ ಮನವಿ ಮಾಡಿದ ಮೇಘನಾ ರಾಜ್

ಮೇಘನಾಗೆ ಅವಳಿ-ಜವಳಿ ಮಕ್ಕಳಾಗಿದೆ ಎಂಬ ಗಾಳಿ ಸುದ್ದಿ ಹಬ್ಬಿಸುತ್ತಿವೆ. ಜೊತೆಗೆ ಹೆರಿಗೆಗೆ ಮುನ್ನ ಮೇಘನಾ ಚಿರು ಸಮಾಧಿ ಬಳಿ ಹೋಗಿದ್ದರು ಎಂದೆಲ್ಲಾ ಸುದ್ದಿಯನ್ನು ಬಿತ್ತರಿಸಿದ್ದಾರೆ. ಇದನ್ನೆಲ್ಲಾ ಗಮನಿಸಿದ್ದ ಮೇಘನಾ ಮೊದಲ ಬಾರಿ ಮೌನ ಮುರಿದಿದ್ದಾರೆ.

news18-kannada
Updated:September 24, 2020, 9:59 PM IST
ನನಗೆ ಸಂಬಂಧಿಸಿದ ಗಾಳಿ ಸುದ್ದಿಗಳನ್ನು ನಂಬಬೇಡಿ; ಅಭಿಮಾನಿಗಳಲ್ಲಿ ಮನವಿ ಮಾಡಿದ ಮೇಘನಾ ರಾಜ್
ಮೇಘನಾ-ಚಿರು
  • Share this:
ನಟ ಚಿರಂಜೀವಿ ಸರ್ಜಾ ಸಾವಿಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ರಾಜ್ಯದ ಜನರು ಶೋಕ ವ್ಯಕ್ತಪಡಿಸಿದರು. ಅದರಲ್ಲಿಯೂ ಮೇಘನಾ ಸ್ಥಿತಿ ಕಂಡು ಅನೇಕರು ಮರುಗಿದರು.  ಅನೋನ್ಯ ದಂಪತಿಗಳಾಗಿದ್ದ ಈ ಜೋಡಿ ಬೇರ್ಪಟ್ಟಿದ್ದಕ್ಕೆ ಕಣ್ಣೀರಿಟ್ಟವರು ಹೆಚ್ಚು. ಈ ವೇಳೆ ನಟಿ ಮೇಘನಾ ಹೊಟ್ಟೆಯಲ್ಲಿ ಚಿರು ಮತ್ತೆ ಹುಟ್ಟಿ ಬರುತ್ತಾನೆ ಎಂದು ನಟಿ ತಾರಾ ತಿಳಿಸುವ ಮೂಲಕ ಈ ಜೋಡಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿತ್ತು. ಈ ಘಟನೆ ಘಟಿಸಿ ನಾಲ್ಕು ತಿಂಗಳು ಕಳೆದಿದ್ದು, ಸದ್ಯ ಮೇಘನಾ ತುಂಬು ಗರ್ಭಿಣಿ. ಈ ಸಮಯದಲ್ಲಿ ಕೆಲವು ಸಾಮಾಜಿಕ ಜಾಲತಾಣಗಳು ಮೇಘನಾಗೆ ಅವಳಿ-ಜವಳಿ ಮಕ್ಕಳಾಗಿದೆ ಎಂಬ ಗಾಳಿ ಸುದ್ದಿ ಹಬ್ಬಿಸುತ್ತಿವೆ. ಜೊತೆಗೆ ಹೆರಿಗೆಗೆ ಮುನ್ನ ಮೇಘನಾ ಚಿರು ಸಮಾಧಿ ಬಳಿ ಹೋಗಿದ್ದರು ಎಂದೆಲ್ಲಾ ಸುದ್ದಿಯನ್ನು ಬಿತ್ತರಿಸಿದ್ದಾರೆ. ಇದನ್ನೆಲ್ಲಾ ಗಮನಿಸಿದ್ದ ಮೇಘನಾ ಮೊದಲ ಬಾರಿ ಮೌನ ಮುರಿದಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳು ಮನವಿ ಮಾಡಿರುವ ಅವರು, ನನ್ನ ಹಾಗೂ ನನ್ನ ಕುಟುಂಬ ಕುರಿತಾದ ಗಾಳಿ ಸುದ್ದಿಗಳನ್ನು ನಂಬಬೇಡಿ. ಈ ಕುರಿತು ಅಧಿಕೃತ ಪ್ರಕಟಣೆಯನ್ನು ನಾವೇ ನೀಡುತ್ತೇವೆ. ಕೆಲವು ಸಾಮಾಜಿಕ ಜಾಲತಾಣಗಳು ವಿವ್ಯ್ಸೂಗಾಗಿ ನನ್ನ ಬಗ್ಗೆ ಇನ್ನಿಲ್ಲದಂತೆ ಸುಳ್ಳು ಸುದ್ದಿ ಬರೆಯುತ್ತಿವೆ. ಅವರ ಲಾಭಾಕ್ಕಾಗಿ ನಮ್ಮನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ನಿಮ್ಮ ಮುಂದೆ ಬಂದು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
View this post on Instagram

Youtube videos 🙏🏻


A post shared by Meghana Raj Sarja (@megsraj) on


ಈ ಹಿಂದೆಯೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದ ಮೇಘನಾ, ಚಿರು ಅಗಲಿಕೆ ಬಳಿಕ ದೂರ ಉಳಿದಿದ್ದಾರೆ. ಚಿರು ಸಾವಿನ ಸಂದರ್ಭದಲ್ಲಿ ನಾಡಿನ ಜನರು ತೋರಿದ ಪ್ರೀತಿ ಕುರಿತು ಧನ್ಯವಾದ ತಿಳಿಸಿದ್ದರು. ಬಳಿಕ ಒಂದೆರಡು ಸೀಮಿತ ಪೋಸ್ಟ್​ಗಳನ್ನು ಮಾಡಿದ್ದರು.

ನಟಿ ಮೇಘನಾಗೆ ಚಿತ್ರರಂಗದ ಸೇರಿದಂತೆ ಸಾಮಾಜಿಕ ಮಾಧ್ಯಮದ ಮೂಲಕ ಅವರ ಅಭಿಮಾನಿಗಳು ಕೂಡ ಸಾಂತ್ವಾನ ಹೇಳಿದ್ದರು. ಪ್ರಥಮ್​ ಹಾಗೂ ಸಿದ್ದರಾಮಯ್ಯ ಸೊಸೆ ಸ್ಮಿತಾ ಕೂಡ ಅವರನ್ನು ಖುದ್ದು ಭೇಟಿಯಾಗಿ ಧೈರ್ಯ ತುಂಬಿದ್ದರು. ಇದಾದ ಬಳಿಕ ಚಿರು ಕಾರ್ಯವನ್ನು ಪನ್ನಗ ಅವರ ಮನೆಯಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯದಲ್ಲಿ ಹಾಜರಾಗಿದ್ದ ಮೇಘನಾ ನಗು ಮುಖ ಹಲವರಲ್ಲಿ ನೆಮ್ಮದಿ ಮೂಡಿಸಿತ್ತು.
Published by: Seema R
First published: September 24, 2020, 9:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading