ನಟಿ ಮೇಘನಾ ರಾಜ್, ತಮ್ಮ ಅದ್ಭುತ ಅಭಿನಯದ ಮೂಲಕ ಜನರ ಮನ ಗೆದ್ದಿದ್ದ ಈ ಸುಂದರಿ ಕೆಲ ಕಾಲ ಸಿನಿಮಾದಿಂದ ದೂರವಿದ್ದರು. ಪತಿ ಚಿರಂಜೀವಿ ಸರ್ಜಾ ಅಗಲಿಕೆ ಹಾಗೂ ಮಗನ ಜನನದ ನಂತರ ಮೇಘನಾ ಬ್ರೇಕ್ ತೆಗೆದುಕೊಂಡಿದ್ದರು. ನಂತರ ಕಿರುತೆರೆಯ ರಿಯಾಲಿಟಿ ಶೋ ಒಂದರಲ್ಲಿ ಬಣ್ಣ ಹಚ್ಚಿದ್ದ ನಟಿ ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಮೇಘನಾ ಸಿನಿಮಾಗಳನ್ನು ಮಾಡುವುದಾಗಿ ಬಹಳಷ್ಟು ಹಿಂದೆಯೇ ಹೇಳಿದ್ದರು. ಅಲ್ಲದೇ, ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿರುವ ಬಗ್ಗೆ ಸಹ ಮಾಹಿತಿ ನೀಡಿದ್ದರು. ಆದರೆ ಆ ಸಿನಿಮಾಗಳ ಬಗ್ಗೆ ಹೆಚ್ಚು ಅಪ್ಡೇಟ್ ಕೊಟ್ಟಿರಲಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಿನಿಮಾ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.
ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟ ನಟಿ
ಹೌದು, ಮೇಘನಾ ರಾಜ್ ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗುತ್ತಿದ್ದು, ಫುಲ್ ಬ್ಯುಸಿ ಆಗುತ್ತಿದ್ದಾರೆ.ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಅದರಲ್ಲಿ ಜುಲೈ 7 ರಂದು ಒಂದು ಸಣ್ಣ ಆಲೋಚನೆ ನಿಜವಾಗಿದೆ. ನಾವು ಪ್ರಾಜೆಕ್ಟ್ ಅಕ್ಟೋಬರ್ 17, 2021ರಂದು ನಾವು ಸಿನಿಮಾ ಅನೌನ್ಸ್ ಮಾಡಿದ್ದೆವು. ಸಾಕಷ್ಟು ಚರ್ಚೆಗಳ ನಂತರ, ಸ್ಕ್ರಿಪ್ಟ್, ರಿರೈಟಿಂಗ್, ಲುಕ್ ಟೆಸ್ಟ್ ಹೀಗೆ ಎಲ್ಲಆ ಪ್ರಯತ್ನದ ನಂತರ ನಾವೆಲ್ಲರು ಒಟ್ಟಾಗಿ ಸೇರಿ ಈ ಕನಸನ್ನು ಪ್ರಾರಂಭಿಸಿದ್ದೇವೆ. ಈ ಸಿನಿಮಾ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ಯಾಮೆರಾ, ರೋಲಿಂಗ್, ಆಕ್ಷನ್ ಎಂದು ಬರೆದುಕೊಂಡಿದ್ದಾರೆ.
View this post on Instagram
ಕಳೆದ ವರ್ಷ ಚಿರು ಜನ್ಮದಿನದಂದು ಮೇಘನಾ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಅದರಲ್ಲೂ ಈ ಸಿನಿಮಾ ಚಿರು ಅವರ ಕನಸಾಗಿತ್ತು. ಚಿರುಗೆ ಗೆಳೆಯರ ಜೊತೆ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸುವ ಕನಸು ಇತ್ತು. ಆದರೆ ಆ ಕನಸು ನನಸಾಗುವ ಮೊದಲೇ ಚಿರು ವಿಧಿವಶರಾದರು. ಆ ಕನಸನ್ನು ಗೆಳೆಯರ ಜೊತೆ ಸೇರಿ ಮೇಘನಾ ನನಸು ಮಾಡುತ್ತಿದ್ದಾರೆ.
ಇದನ್ನೂ ಓದಿ: ರೆಡ್ ಹಾಟ್ ಡ್ರೆಸ್ನಲ್ಲಿ ಮಿಂಚಿದ ರಶ್ಮಿಕಾ, ಏನಮ್ಮಾ ನಿನ್ನ ಅವತಾರ ಎಂದ ಫ್ಯಾನ್ಸ್!
ಅಲ್ಲದೇ, ಸಿನಿಮಾ ಘೋಷಣೆ ದಿನ ಚಿರುಗೆ ಜೊತೆಯಲ್ಲಿ ಅವರ ಆಪ್ತ ಗೆಳೆಯರು ಇರಲೇಬೇಕು. ಹೊಸ ಸಿನಿಮಾ ಸಹಿ ಮಾಡಿದ್ರೂ ಆ ಸಂಭ್ರಮ ಆಚರಿಸಲು ಗೆಳೆಯರನ್ನು ಒಂದೆಡೆ ಸೇರಿಸುತ್ತಿದ್ದರು. ಅಂದು ನಾನು ಎಲ್ಲದಕ್ಕೂ ಗೆಳೆಯರನ್ನು ಕರೆಸಬೇಕಾ ಅಂತ ಕೇಳುತ್ತಿದ್ದೆ. ಆದ್ರೆ ಇಂದು ಅದೇ ಗೆಳೆಯರ ಬಳಗ ನನ್ನ ಬೆನ್ನಹಿಂದೆ ನಿಂತಿದೆ. ಚಿರು ಸಂಪಾದಿಸಿದ ಗೆಳೆಯರೇ ಅವರ ದೊಡ್ಡ ಶಕ್ತಿ ಎಂದು ಮೇಘನಾ ಹೇಳಿಕೊಂಡಿದ್ದರು.
ಪನ್ನಗಾಭರಣ ನಿರ್ಮಾಣ ಮಾಡುತ್ತಿರುವ ಸಿನಿಮಾ
ಅಲ್ಲದೇ ಈ ಸಿನಿಮಾವನ್ನು ಚಿರು ಆತ್ಮೀಯ ಗೆಳೆಯ ಪನ್ನಗಾಭರಣ ನಿರ್ಮಾಣ ಮಾಡುತ್ತಿದ್ದು, ವಿಶಾಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಇದೊಂದು ಮಹಿಳಾ ಪ್ರಧಾನ ಸಿನಿಮಾ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಿಥಾಲಿ ರಾಜ್ ಲುಕ್ ನಲ್ಲಿ ತಾಪ್ಸಿ ಪನ್ನು, ಸಿನಿಮಾ ನೋಡಿ ಸೂಪರ್ ಅಂದ್ರು ಫ್ಯಾನ್ಸ್
ಮೇಘನಾ ಮತ್ತೆ ಸಿನಿಮಾ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಹಾಗೂ ಸಿನಿಮಾರಂಗದ ಗಣ್ಯರು ಶುಭ ಹಾರೈಸುತ್ತಿದ್ದು, ಈ ಸಿನಿಮಾದಲ್ಲಿ ಮೇಘನಾ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಮನೆ ಮಾಡಿದೆ. ಮೇಘನಾ ರಾಜ್ ಕೊನೆಯದಾಗಿ ಕುರುಕ್ಷೇತ್ರ ಹಾಗೂ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮಗ ರಾಯನ್ ಸರ್ಜಾ ಜನನದ ನಂತರ ಈಗ ಫುಲ್ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗಾಗಲೇ ಅವರು ಕಾಂತ ಕನ್ನಳ್ಳಿ ಸಿನಿಮಾದಲ್ಲಿ ನಟಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ