ನಟಿ ಮೇಘನಾ ರಾಜ್, (Actress Meghana Raj) ತಮ್ಮ ಅದ್ಭುತ ಅಭಿನಯದ ಮೂಲಕ ಜನರ ಮನ ಗೆದ್ದಿದ್ದ ಈ ಸುಂದರಿ ಕೆಲ ಕಾಲ ಸಿನಿಮಾದಿಂದ ದೂರವಿದ್ದರು. ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅಗಲಿಕೆ ಹಾಗೂ ಮಗನ ಜನನದ ನಂತರ ಮೇಘನಾ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಸದ್ಯ ಆಕ್ಟೀವ್ ಆಗಿದ್ದಾರೆ. ಕಷ್ಟಗಳನ್ನು ಮತ್ತು ನೋವುಗಳನ್ನು ಅನುಭವಿಸಿ, ಎದುರಿಸಿ ಇದೀಗ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬಂದಿದ್ದು, ಒಂದು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿ ಪಡೆದ ನಟಿ
ಮೇಘನಾ ರಾಜ್ ಅವರನ್ನು ಅಂತರಾಷ್ಟ್ರೀಯ ಪ್ರಶಸ್ತಿಯೊಂದು ಹುಡುಕಿ ಬಂದಿದ್ದು, ಮೇಘನರಾಜ್ ಅವರಿಗೆ ಈ ಬಾರಿಯ ಪ್ರತಿಷ್ಠಿತ "FOG HERO" ಅವಾರ್ಡ್ ಲಭಿಸಿದೆ. ಈ ಕಾರ್ಯಕ್ರಮ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ "ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ" ಇವರು ಆಯೋಜಿಸುತ್ತಿದ್ದು, ಈ "ಫೆಸ್ಟಿವಲ್ ಆಫ್ ಗ್ಲೋಬ್"(FOG) ಸಮಾರಂಭ ಕಳೆದ ನಲವತ್ತು ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ. ಈ ಬಾರಿ ಸಹ ಇದೇ ಆಗಸ್ಟ್ 19, 20 ಹಾಗೂ 21 ರಂದು ಈ ಸಮಾರಂಭವನ್ನು ಆಯೋಜಿಸಲಾಗಿದ್ದು, ಸುಮಾರು ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಅಲ್ಲಿ ವಾಸಿಸುವ ಹಲವಾರು ಭಾರತೀಯರು ಸೇರಿದಂತೆ ಅಲ್ಲಿನ ಜನರು ಸಹ ಭಾಗವಹಿಸುತ್ತಾರೆ.
ಪ್ರತಿ ಬಾರಿಯೂ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಜನ ಸೇರುತ್ತಾರೆ, ಅಲ್ಲದೇ ಅಲ್ಲಿನ ರಾಜಕೀಯ ವ್ಯಕ್ತಿಗಳು, ಇತರ ಕ್ಷೇತ್ರದ ಗಣ್ಯರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇನ್ನು ಪ್ರತಿವರ್ಷ ಭಾರತದ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವ ವಿಶೇಷ ರೀತಿ ಇದಾಗಿದ್ದು, ಪ್ರತಿಬಾರಿಯೂ ಆಗಸ್ಟ್ 15ರ ಸಮಯದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಮಾಡಲಾಗುತ್ತದೆ.
View this post on Instagram
ಅದ್ಧೂರಿಯಾಗಿ ನಡೆಯಲಿದೆ ಕಾರ್ಯಕ್ರಮ
ಈ ಕಾರ್ಯಕ್ರಮದಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಒಬ್ಬರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕಳೆದ 2 ವರ್ಷದಿಂದ ಕೊರೊನಾ ಇದ್ದ ಕಾರಣ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಬಹಳ ಅದ್ಧೂರಿಯಾಗಿ ಮಾಡಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಈಗಾಗಲೇ ಅಮಿತಾಬ್ ಬಚ್ಚನ್, ದೇವಾನಂದ್, ಆಶಾ ಪರೇಕ್, ವಿನೋದ್ ಖನ್ನಾ, ಧರ್ಮೇಂದ್ರ ಸೇರಿದಂತೆ ಅನೇಕ ಸಿನಿಮಾ ರಂಗದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಾರಿ ದಕ್ಷಿಣ ಸಿನಿಮಾರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೇಘನಾ ರಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ನಟಿ, ಅದ್ಭುತ ಸಾಧಕರು ಪಡೆದಿರುವ ಪ್ರಶಸ್ತಿಯನ್ನು ನಾನು ಈ ಬಾರಿ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯಾಗುತ್ತಿದೆ. ನಾನು ಸಮಾರಂಭಕ್ಕೆ ಹೋಗಿ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಎಲ್ಲೆಡೆ ಅಬ್ಬರಿಸುತ್ತಿದೆ ವಿಕ್ರಾಂತ್ ರೋಣ, ಹೇಗಿದೆ 5ನೇ ದಿನದ ಕಲೆಕ್ಷನ್?
ಮೇಘನಾ ರಾಜ್ ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗುತ್ತಿದ್ದು, ಫುಲ್ ಬ್ಯುಸಿ ಆಗುತ್ತಿದ್ದಾರೆ. ಕಳೆದ ವರ್ಷ ಚಿರು ಜನ್ಮದಿನದಂದು ಮೇಘನಾ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಅದರಲ್ಲೂ ಈ ಸಿನಿಮಾ ಚಿರು ಅವರ ಕನಸಾಗಿತ್ತು. ಚಿರುಗೆ ಗೆಳೆಯರ ಜೊತೆ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸುವ ಕನಸು ಇತ್ತು. ಆದರೆ ಆ ಕನಸು ನನಸಾಗುವ ಮೊದಲೇ ಚಿರು ವಿಧಿವಶರಾದರು. ಆ ಕನಸನ್ನು ಗೆಳೆಯರ ಜೊತೆ ಸೇರಿ ಮೇಘನಾ ನನಸು ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ