Megha Shetty: ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮೇಘಾ ಶೆಟ್ಟಿ, ಚಿತ್ರದ ಫಸ್ಟ್​ಲುಕ್​ ರಿಲೀಸ್​

Sandalwood: ಕನ್ನಡ, ಮರಾಠಿ ಸೇರಿದಂತೆ ಬಹುಭಾಷಾ ಕಲಾವಿದರು ಇರುವ ಚಿತ್ರಕ್ಕೆ  ಸಡಗರ ರಾಘವೇಂದ್ರ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಇನ್ನು ಪ್ರಸಿದ್ದ ಡ್ರೀಮರ್ಸ್ ಪ್ರೊಡಕ್ಷನ್ ದೀಪಕ್ ರಾಣೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಈ ಸಿನಿಮಾ ಮೂಲಕ ಸ್ಯಾಂಡಲ್​ ವುಡ್​ನಲ್ಲಿ ಮೇಘಾ ಶೆಟ್ಟಿ ಹೆಸರುಗಳಿಸಲು ಸಿದ್ಧರಾಗಿದ್ದಾರೆ.

ಚಿತ್ರದ ಫಸ್ಟ್ ಲುಕ್

ಚಿತ್ರದ ಫಸ್ಟ್ ಲುಕ್

  • Share this:
ಮೇಘಾ ಶೆಟ್ಟಿ, (Megha Shetty)  ಜೊತೆ ಜೊತೆಯಲಿ (Jote Jotheyali) ಧಾರಾವಾಹಿಯ (Serial) ಮೂಲಕ ಜನರಿಗೆ ಪರಿಚಿತವಾದ ನಟಿ. ಒಂದರ್ಥದಲ್ಲಿ ಮೇಘಾ ಎಂದರೆ ಯಾರಿಗೂ ತಿಳಿಯಲ್ಲ. ಅವರನ್ನು ಅನು ಸಿರಿಮನೆ ಎಂದು ಕರೆದರೇ ಮಾತ್ರ ಎಲ್ಲರಿಗೂ ತಿಳಿಯುತ್ತದೆ. ಆರ್ಯನ ಮನದರಸಿಯಾಗಿ ಜನರ ಮನದಲ್ಲಿ ಹೆಸರು ಗಳಿಸಿರುವ ಈ ಸುಂದರಿ ಕಿರುತೆರೆ ಮಾತ್ರವಲ್ಲದೇ ಸ್ಯಾಂಡಲ್​ವುಡ್​ನಲ್ಲಿ (Sandalwood)  ಸಹ ಬ್ಯುಸಿ ಇರುವ ನಟಿ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳ (Film) ಅವಕಾಶ ಪಡೆದಿರುವ ಅವರ ಚಿತ್ರದ ಫಸ್ಟ್ ಲುಕ್ ರಿಲೀಸ್​ ಆಗಿದ್ದು, ಸಂತಸದಲ್ಲಿ ನಟಿ ತೇಲುತ್ತಿದ್ದಾರೆ.

ಪ್ಯಾನ್ ಇಂಡಿಯಾ ಚಿತ್ರ ಇದು

ಹೊಸ ನಟ ಕವೀಶ್​ ಶೆಟ್ಟಿ ಜೊತೆ ಮೇಘಾ ಶೆಟ್ಟಿ ಪ್ಯಾನ್​ ಇಂಡಿಯಾ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಆ ಚಿತ್ರಕ್ಕೆ ಹೆಸರಿಡಲಾಗಿರಲಿಲ್ಲ. ಇದೀಗ ಆ ಚಿತ್ರದ ಫಸ್ಟ್​ ಲುಕ್ ಹಾಗೂ ಹೆಸರು ರಿವೀಲ್ ಆಗಿದೆ. ಈ ಚಿತ್ರದ ಫಸ್ಟ್​ ಲುಕ್​ ಅನ್ನು ನಟ, ನಿರ್ದೇಶಕ ರಿಷಭ್ ಶೆಟ್ಟಿ ರಿವೀಲ್ ಮಾಡಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.  ಈ ಚಿತ್ರಕ್ಕೆ `ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಎಂದು ಹೆಸರು ಇಡಲಾಗಿದ್ದು, ಈ ಚಿತ್ರ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿವೆ. ಇಂದು ನಾಯಕ ಕವೀಶ್ ಶೆಟ್ಟಿ ಜನ್ಮದಿನವಿದ್ದು, ಈ ಸಂದರ್ಭದಲ್ಲಿ ಟೈಟಲ್​ ಹಾಗೂ ಫಸ್ಟ್​ ಲುಕ್ ಬಿಡುಗಡೆ ಮಾಡಲಾಗಿದೆ.

ಈಗಾಗಲೇ ಈ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಸ್ವಲ್ಪ ಮಾತ್ರ ಉಳಿದಿದೆ. ಇನ್ನು ಇದೊಂದು ಆಕ್ಷನ್ ಹಾಗು ಸುಂದರ ಪ್ರೇಮಕಥೆ ಇರುವ ಸಿನಿಮಾವಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.  ಈ ಚಿತ್ರದಲ್ಲಿ ಮೇಘಾ ಶೆಟ್ಟಿ, ಕವೀಶ್ ಶೆಟ್ಟಿ ಜೊತೆಗೆ ಮರಾಠಿ ಕಲಾವಿದರಾದ ಶಿವಾನಿ ಸುರ್ವೆ ಹಾಗೂ ವಿರಾಟ್ ಮಡ್ಕೆ ಕೂಡ ನಟಿಸಿದ್ದು, ಕನ್ನಡ, ಮರಾಠಿ ಸೇರಿದಂತೆ ಬಹುಭಾಷಾ ಕಲಾವಿದರು ಇರುವ ಚಿತ್ರಕ್ಕೆ  ಸಡಗರ ರಾಘವೇಂದ್ರ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಇನ್ನು ಪ್ರಸಿದ್ದ ಡ್ರೀಮರ್ಸ್ ಪ್ರೊಡಕ್ಷನ್ ದೀಪಕ್ ರಾಣೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಈ ಸಿನಿಮಾ ಮೂಲಕ ಸ್ಯಾಂಡಲ್​ ವುಡ್​ನಲ್ಲಿ ಮೇಘಾ ಶೆಟ್ಟಿ ಹೆಸರುಗಳಿಸಲು ಸಿದ್ಧರಾಗಿದ್ದಾರೆ.
ಗೆಳೆಯ ಸಡಗರ ರಾಘವೇಂದ್ರ ಅವರ ಮೊದಲ ನಿರ್ದೇಶನದ ಚಿತ್ರ ಇದಾಗಿದ್ದು, ಅವರಿಗೆ ತುಂಬು ಹೃದಯದ ಶುಭಾಷಯಗಳು. ಹಾಗೆಯೇ ಚಿತ್ರದ ನಾಯಕನಾಗಿ ನಟಿಸುತ್ತಿರುವ ಕವೀಶ್, ನಾಯಕಿ ಮೇಘಾ ಮತ್ತು ನಿರ್ಮಾಪಕರು ಹಾಗೂ ಉಳಿದ ಎಲ್ಲಾ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ಶುಭಾಶಯಗಳು ಎಂದು ರಿಷಬ್ ವಿಶ್​ ಮಾಡಿದ್ದಾರೆ.

ಇದನ್ನೂ ಓದಿ: ಮತ್ತೆಂದೂ 'ಶಿವ'ನ ಅವತಾರ ತಾಳಲ್ವಂತೆ ರಾಜ್ ಬಿ ಶೆಟ್ಟಿ, ಈ ಸಲ ಇನ್ನೊಂದು ಡಿಫರೆಂಟ್ ಅವತಾರಕ್ಕೆ ಸಜ್ಜುಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಚಿತ್ರ ಮಾಡುತ್ತಿರುವ ಮೇಘಾ, ಚಂದನ್ ಶೆಟ್ಟಿ ಮ್ಯೂಸಿಕ್ ವಿಡಿಯೋದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದರ ಜೊತೆ ಶಶಾಂಕ್ ಅವರ ‘ಲವ್ 360’ ಚಿತ್ರಕ್ಕೂ ನಾಯಕಿ ಆಗಲಿದ್ದಾರೆ. ಇನ್ನು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಮೇಘನಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದಲ್ಲದೆಯೇ 'ದಿಲ್ ಪಸಂದ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮೇಘಾ ಶೆಟ್ಟಿ ರೊಮ್ಯಾನ್ಸ್ ಮಾಡಲಿದ್ದಾರೆ.

ಇದನ್ನೂ ಓದಿ: ಸೂರ್ಯನೊಬ್ಬ-ಚಂದ್ರನೊಬ್ಬ ರಾಜನೂ ಒಬ್ಬ! ಹೊಸಪೇಟೆಯಲ್ಲಿ ಪುನೀತ್ ಪ್ರತಿಮೆ ಅನಾವರಣ

ಕಿರುತೆರೆಯಲ್ಲಿ ಅನು ಸಿರಿಮನೆ ಎಂದೇ ಖ್ಯಾತರಾಗಿರುವ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್​ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಯ ಅಭಿನಯಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ.
Published by:Sandhya M
First published: