ಕಿರುತೆರೆ (Small Screen) ಯುವನಟಿ ಚೇತನಾ ರಾಜ್ (Chethana Raj) ನಿಧನದ ನಂತರ ಸ್ಯಾಂಡಲ್ವುಡ್ನಲ್ಲಿ ಲಿಂಗ ತಾರತಮ್ಯ ಹಾಗೂ ಬಾಡಿ ಶೇಮಿಂಗ್ (Body Shaming) ಬಗ್ಗೆ ಪರ ವಿರೋಧ ಚರ್ಚೆಗಳು ಹೆಚ್ಚಾಗುತ್ತಿದೆ. ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋದಾಗ ವೈದ್ಯರ ನಿರ್ಲಕ್ಷ್ಯದಿಂದ ಕಳೆದ ವಾರ ನಟಿ ಚೇತನ ರಾಜ್ ಮೃತಪಟ್ಟಿದ್ದರು ಆ ಸಮಯದಿಂದ ಮಹಿಳೆಯರ ಬಗ್ಗೆ ಸ್ಯಾಂಡಲ್ವುಡ್ ನೀತಿಗಳ ಕುರಿತು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಧ್ವನಿಯತ್ತಿದ್ದರು. ಇದೀಗ ಅದಕ್ಕೆ ಪೂರಕ ಎನ್ನುವಂತೆ ನಟಿ ಮಯೂರಿ ಸಹ ಈ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾರಂಗದಲ್ಲಿ ಬಹುತೇಕ ಎಲ್ಲಾ ನಟಿಯರು ಈ ಬಾಡಿ ಶೆಮಿಂಗ್ ಸವಾಲನ್ನು ಎದುರಿಸಿರುತ್ತಾರೆ ಹಾಗೂ ಎದುರಿಸುತ್ತಿದ್ದಾರೆ. ಆದರೆ ನಮ್ಮನ್ನು ನಾವು ಪ್ರೀತಿಸುವುದು ಇಲ್ಲಿ ಬಹಳ ಮುಖ್ಯ. ನಾವು ಹೇಗಿದ್ದೇವಿ ಎನ್ನುವುದನ್ನು ನಾವು ಒಪ್ಪಿಕೊಂಡರೆ ಸಾಕು ಎಂದು ಮಯೂರಿ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ, ನಟಿಯರು ಮಾತ್ರ ಅಂತಲ್ಲ, ಸಮಾಜದಲ್ಲಿ ಎಲ್ಲರೂ, ಬಾಹ್ಯ ಸೌಂದರ್ಯದ ಬಗ್ಗೆ ತುಂಬಾ ತಲೆ ಕೆಡೆಸಿಕೊಳ್ಳುತ್ತಾರೆ. ಈಗಿನ ಜನರೇಷನ್ ಮಕ್ಕಳಲ್ಲಿ ಸಣ್ಣಗೆ ಇದ್ದರೆ ಮಾತ್ರ ಚೆಂದ ಎಂಬ ಮನೋಭಾವ ಬಂದಿದೆ. ಇದು ಒಂದು ರೀತಿಯ ಒತ್ತಡವಿದ್ದಂತೆ. ಅದನ್ನು ಕಡಿಮೆ ಮಾಡುವುದು ಮುಖ್ಯ ಎಂದಿದ್ದಾರೆ.
ಅನುಭವ ಹಂಚಿಕೊಂಡ ನಟಿ
ಸಿನಿಮಾರಂಗಕ್ಕೆ ಬಂದಾಗ ನನಗೂ ಕೂಡ ನಟಿಎಂದರೆ ಹೇಗೆ ಇರಬೇಕು ಎಂಬುನದ್ನ ಹಲವಾರು ಜನರು ಹೇಳಿದ್ದಾರೆ. ಅದರಲ್ಲಿ ಒಬ್ಬರು ನಿರ್ದೇಶಕರು, ನೀನು ನಟಿಯಾಗಿ ಹೀರೊಯಿನ್ ರೀತಿ ಇರುವುದನ್ನು ಕಲಿ ಎಂದಿದ್ದರು ಎಂದು ಮಯೂರಿ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ಗೆ 62ರ ವಸಂತ! 'ಲಾಲೆಟ್ಟ' ಸಿನಿ ಬದುಕಿನ ಹೆಜ್ಜೆ ಗುರುತು ಇಲ್ಲಿವೆ
ಇನ್ನು ಚೇತನಾ ರಾಜ್ ಸಾವಿನ ನಂತರ ಈ ಬಗ್ಗೆ ಟ್ವೀಟ್ ಮಾಡಿದ್ದ ನಟಿ ರಮ್ಯಾ, , ಸಿನಿಮಾರಂಗ ಹೇಗಿದೆ? ಇಲ್ಲಿ ನಟಿಯರನ್ನು ಯಾವ ರೀತಿ ಅಳೆಯಲಾಗುತ್ತೆ? ಎಂಬ ವಿಚಾರಗಳ ಬಗ್ಗೆ ಮಾತನಾಡಿದ್ದು, ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಯುವನಟಿ ಚೇತನಾ ರಾಜ್ (22) ನಿಧನರಾಗಿದ್ದು ನೋವಿನ ಸಂಗತಿ ಎಂದಿದ್ದಾರೆ.
ಪುರುಷನಾದವನು ಡೊಳ್ಳುಹೊಟ್ಟೆ ಇಟ್ಟುಕೊಂಡು, ತಲೆಕೂದಲು ಉದುರಿ ಹೋಗಿ ವಿಗ್ ಹಾಕಿಕೊಂಡರೂ ಹೀರೋ ಅಂತ ಆತನನ್ನ ಅಟ್ಟಕ್ಕೆ ಏರಿಸಲಾಗುತ್ತದೆ. ಮುಖದಲ್ಲಿ ಒಂದೊಂದು ಕೆನ್ನೆಯೂ 5 ಕೆಜಿ ಇದ್ದರೂ ಸಮಸ್ಯೆಯಿರುವುದಿಲ್ಲ. ಅಲ್ಲದೇ, 65 ವರ್ಷವಾದರೂ ಅವರನ್ನು ಹೀರೋ ಎಂದು ಹೇಳುತ್ತಾರೆ. ಅದೇ ಒಂದು ಹೆಣ್ಣು ಸ್ವಲ್ಪ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆದು ಹೀಯಾಳಿಸಲಾಗುತ್ತದೆ. ಪ್ಲಾಸ್ಟಿಕ್ ಸರ್ಜರಿ ಬಳಿಕ ಮೃತರಾದ ಯುವ ನಟಿಯ ಬಗ್ಗೆ ಸುದ್ದಿ ಓದಿ ತಿಳಿದುಕೊಂಡೆ. ಮಹಿಳೆಯರ ಮೇಲೆ ವಿಚಿತ್ರವಾದ ಬ್ಯೂಟಿ ಸ್ಟ್ಯಾಂಡರ್ಡ್ಗಳನ್ನು ಹಾಕಿ, ಹೊಸ ನಿಯಮಗಳನ್ನು ಹಾಕುತ್ತಾರೆ. ಈ ಚಿತ್ರರಂಗದಲ್ಲಿ ಯಾವ ರೀತಿ ಕಾಣಬೇಕು ಎಂಬ ಬಗ್ಗೆ ಮಹಿಳೆಯರ ಮೇಲೆ ತೀವ್ರ ಒತ್ತಡ ಇದೆ ಎಂದು ರಮ್ಯಾ ಅಸಮಾಧಾನ ಹೊರಹಾಕಿದ್ದರು.
ರಮ್ಯಾಗೆ ಪ್ರಿಯಾಂಕಾ ಉಪೇಂದ್ರ ಸಾಥ್
ರಮ್ಯಾ ಹೇಳಿಕೆಗೆ ಒಪ್ಪಿಗೆ ವ್ಯಕ್ತಪಡಿಸಿರುವ ನಟಿ ಪ್ರಯಾಂಕಾ ಉಪೇಂದ್ರ ಚಿತ್ರರಂಗದಲ್ಲಿ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದಾರೆ. ನನಗೂ ಕೂಡ ತುಂಬಾ ಜನ ದಪ್ಪ ಆಗಿದಿರಾ ಅಂತಾ ಕಾಮೆಂಟ್ ಮಾಡಿದರು. ತಾರೆಯರಿಗೆ ಇದು ಹೆಚ್ಚು ಒತ್ತಡ ಇರುತ್ತೆ. ಆ ಒತ್ತಡದಲ್ಲಿ ಬಹುಶಃ ಚೇತನಾ ರಾಜ್ ಕೂಡ ಇದ್ದರು ಅನಿಸುತ್ತೆ. ಯಾಕೆಂದರೆ ನಾನು ಇನ್ನು ಚೆನ್ನಾಗಿ ಕಾಣಿಸಿದ್ರೆ ಕೆಲಸ ಜಾಸ್ತಿ ಸಿಗಬಹುದು ಅಂತಾ ಅವರು ಈ ರೀತಿ ಮಾಡಿಕೊಂಡಿದ್ದಾರೆ .ಆದರೆ ನನಗೂ ಸಿನಿಮಾ ಬಂದ ಮೇಲೆ ಸಾಕಷ್ಟು ಕಾಮೆಂಟ್ ಮಾಡಿದರು, ನಿಮ್ಮ ಹೈಟ್ ಚಿಕ್ಕದು, ನಿಮ್ಮ ಕಣ್ಣು ಸಣ್ಣ ಅಂತಾ ಹೇಳ್ತಾ ಇದ್ದಾರೆ. ಆ ಕಾಮೆಂಟ್ ಗಳನ್ನ ಕ್ರಾಸ್ ಮಾಡಿ ನಾನು ಇವತ್ತು ಸ್ಟೇಜ್ ಗೆ ಬಂದಿದ್ದೇನೆ ಎಂದಿದ್ದರು.
ಇದನ್ನೂ ಓದಿ: ಕ್ಯಾನ್ ಉತ್ಸವದಲ್ಲಿ ಪೂಜಾ ಹೆಗ್ಡೆ ಬ್ಯಾಗೇ ಕಳೆದೋಯ್ತಂತೆ! ರೆಡ್ ಕಾರ್ಪೆಟ್ ಸರ್ಕಸ್ ಬಗ್ಗೆ ‘ರಾಧೆ‘ ಹೇಳಿದ್ದೇನು?
ಅಲ್ಲದೆ ಮದುವೆ ಆದ್ಮಲೇ ಅವಕಾಶಗಳು ಕಡಿಮೆ ಆಗುತ್ತವೆ. ಮಕ್ಕಳು ಆದ್ಮಲೇ ಬ್ಯೂಟಿ ಇರೋಲ್ಲ, ದಪ್ಪ ಆಗಿದ್ದಾರೆ ಎಂಬ ಕಾರಣಕ್ಕೆ ಹೀರೋ ಅಕ್ಕನ ಪಾತ್ರ , ಅಥವಾ ತಂಗಿ ಪಾತ್ರಗಳು ಬರುತ್ತೆ.ಆದರೆ ಹೀರೋಗಳಿಗೆ ಈ ಮಾನದಂಡ ಇಲ್ಲಾ, ವಯಸ್ಸು 65 ಆದರೂ ತಲೆಗೆ ವಿಗ್ ಹಾಕ್ಕೊಂಡು ಆಕ್ಟ್ ಮಾಡ್ತಾರೆ. ಮದ್ವೆ ಆದ ಮೇಲೆ ಹೀರೋಗಳಿಗೆ ಯಾರು ನಿಮ್ಮ ಕಂಬ್ಯಾಕ್ ಸಿನಿಮಾ ಅಂತ ಕೇಳಲ್ಲ. ಆದ್ರೆ ನಮಗೆ ಮದ್ವೆ ಅಗಿ ಮಕ್ಕಳಾದ ಮೇಲೆ ಕಂಬ್ಯಾಕ್ ಸಿನಿಮಾ ಅಂತಾರೆ ಎಂದು ಪ್ರಿಯಾಂಕಾ ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ