HOME » NEWS » Entertainment » ACTRESS MAYURI GET MARRIED WITH CHILD WOOD FRIEND RH

ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದ ಮುದ್ದುಮುಖದ ಸುಂದರಿ ಮಯೂರಿ!

ಕೊರೋನಾ ಅಟ್ಟಹಾಸ ಹಾಗೂ ಲಾಕ್ಡೌನ್ ಪರಿಣಾಮದಿಂದಾಗಿ ಹೆಚ್ಚು ಜನರನ್ನು ಮದುವೆಗೆ ಆಮಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ದೇವಸ್ಥಾನದಲ್ಲೇ ಸರಳವಾಗಿ ತಮ್ಮ ಕುಟುಂಬ, ಸಂಬಂಧಿಕರು ಹಾಗೂ ಆಪ್ತ ಗೆಳೆಯರನ್ನಷ್ಟೇ ಆಮಂತ್ರಿಸಿದ್ದರು.

news18-kannada
Updated:June 12, 2020, 3:01 PM IST
ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದ ಮುದ್ದುಮುಖದ ಸುಂದರಿ ಮಯೂರಿ!
ಅರುಣ್​ ಹಾಗೂ ಮಯೂರಿ
  • Share this:
ಬೆಂಗಳೂರು: ಬಹುಶಃ ಕಿರುತೆರೆಯಲ್ಲಿದ್ದುಕೊಂಡೇ ಸ್ಟಾರ್​ ಡಾಂ ಗಳಿಸಿದ್ದ ಕೆಲವೇ ಮಂದಿ ನಟಿಯರಲ್ಲಿ ಮಯೂರಿ ಕ್ಯಾಟರಿ ಪ್ರಮುಖರು.

ಇಂತಹ ಮಯೂರಿ 2015ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಬಿಗ್​ ಸ್ಕ್ರೀನ್​ಗೆ ಡೆಬ್ಯೂ ಮಾಡಿದರು. ಮೊದಲ ಚಿತ್ರದಲ್ಲೇ ಒಂದು ಬಿಗ್ ಬ್ರೇಕ್ ಕೂಡ ದೊರೆಯಿತು. ನಂತರ ಕಿರುತೆರೆಗಿಂತ ಹೆಚ್ಚಾಗಿ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದರು. ಇಂತಹ ಮಯೂರಿ ಕ್ಯಾಟರಿ ಇಂದು ಮುಂಜಾನೆ ಸದ್ದಿಲ್ಲದೇ ತಮ್ಮ ಬಹುಕಾಲದ ಗೆಳೆಯ ಅರುಣ್ ಜತೆ ಸಪ್ತಪದಿ ತುಳಿದಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಯೂರಿ, ಅರುಣ್ ಕಲ್ಯಾಣೋತ್ಸವ ಜರುಗಿತು. ರಾತ್ರಿ 2.30 ರಿಂದ 3 ಗಂಟೆಯ ಬ್ರಾಹ್ಮಿ ಮಹೂರ್ತದಲ್ಲಿ ಮಯೂರಿ ಹಸೆಮಣೆ ಏರಿದರು. ಇದು ಲವ್ ಕಂ ಅರೇಜ್ ಮ್ಯಾರೇಜ್ ಎಂಬುದೇ ವಿಶೇಷ. ಮಯೂರಿ ಮತ್ತು ಅರುಣ್ ಬಾಲ್ಯದ ಗೆಳೆಯರು. ಗೆಳೆತನದಲ್ಲಿ ಕ್ರಮೇಣ ಪ್ರೀತಿ ಚಿಗುರಿತ್ತು. ಮೊದಲು ಕಿರುತೆರೆ ನಂತರ ಬೆಳ್ಳಿತೆರೆ ಎರಡೂ ಕಡೆಗಳಲ್ಲೂ ನೆಲೆ ಕಂಡುಕೊಳ್ಳಲು ಮಯೂರಿ ಹೋರಾಡುತ್ತಿದ್ದಾಗಲೂ, ಅವರ ಜತೆ ಬೆಂಬಲವಾಗಿ ನಿಂತಿದ್ದರು ಅರುಣ್.

ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ವರ್ಷಗಳಿಂದ ಅರುಣ್ ಅಮೆರಿಕಾದಲ್ಲೇ ಸೆಟಲ್ ಆಗಿದ್ದರು. ಕೆಲ ತಿಂಗಳಿಂದೀಚೆಗೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಇಬ್ಬರೂ ತಮ್ಮ ಮನೆಯವರನ್ನು ಒಪ್ಪಿಸಿ, ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.ಕೊರೋನಾ ಅಟ್ಟಹಾಸ ಹಾಗೂ ಲಾಕ್ಡೌನ್ ಪರಿಣಾಮದಿಂದಾಗಿ ಹೆಚ್ಚು ಜನರನ್ನು ಮದುವೆಗೆ ಆಮಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ದೇವಸ್ಥಾನದಲ್ಲೇ ಸರಳವಾಗಿ ತಮ್ಮ ಕುಟುಂಬ, ಸಂಬಂಧಿಕರು ಹಾಗೂ ಆಪ್ತ ಗೆಳೆಯರನ್ನಷ್ಟೇ ಆಮಂತ್ರಿಸಿದ್ದರು.

 

ಇದನ್ನು ಓದಿ:

 

ಇದನ್ನು ಓದಿ: Mayuri Wedding Photos: ಬಾಲ್ಯದ ಗೆಳೆಯನ ಜೊತೆ ಮಧ್ಯರಾತ್ರಿ ಸಿಂಪಲ್ ಆಗಿ ಹಸೆಮಣೆ ಏರಿದ ನಟಿ ಮಯೂರಿ!

ಕೃಷ್ಣಲೀಲಾ ಬಳಿಕ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯಾ 2, 8ಎಂಎಂ ಬುಲೆಟ್, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷ ಅವರು ನಟಿಸಿರುವ ಮೌನಂ ಸಿನಿಮಾ ತೆರೆಗೆ ಬಂದಿತ್ತು. ಹಾಗೇ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ, ರಶ್ಮಿಕಾ ಮಂದಣ್ಣ ನಾಯಕ, ನಾಯಕಿಯಾಗಿರುವ ಪೊಗರು ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮಯೂರಿ. ನಂದಕಿಶೋರ್ ಆಕ್ಷನ್ ಕಟ್ ಹೇಳಿರುವ ಪೊಗರು ಸಿನಿಮಾ ಥಿಯೇಟರ್​ಗಳು ಓಪನ್ ಆಗುತ್ತಲೇ ತೆರೆಗೆ ಬರುವ ನಿರೀಕ್ಷೆಯಿದೆ. ಅದೇನೇ ಇರಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಯೂರಿ ಹಾಗೂ ಅರುಣ್ ಜೋಡಿಗೆ ಶುಭಾಶಯಗಳು.
First published: June 12, 2020, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading