ರೋಗಿಯನ್ನ ಉಳಿಸಲು ಪೆಟ್ರೋಲ್​ ಹಾಕಿದ ಕಿರಿಕ್​ ಹುಡುಗಿ ರಶ್ಮಿಕಾ!

news18
Updated:July 18, 2018, 1:55 PM IST
ರೋಗಿಯನ್ನ ಉಳಿಸಲು ಪೆಟ್ರೋಲ್​ ಹಾಕಿದ ಕಿರಿಕ್​ ಹುಡುಗಿ ರಶ್ಮಿಕಾ!
news18
Updated: July 18, 2018, 1:55 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗೆ ರಾಜಾಜಿನಗರದ ಪೆಟ್ರೋಲ್​ ಬಂಕ್​ವೊಂದರಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಪ್ರತ್ಯಕ್ಷವಾಗಿದ್ದರು. ಬಂಕ್​ನಲ್ಲಿ ರಶ್ಮಿಕಾ ಕಾಣಿಸಿಕೊಂಡರೆ ಅದರಲ್ಲೇನು ವಿಶೇಷ ಅಂದುಕೊಂಡರಾ? ಹವದು ಅದರಲ್ಲೂ ವಿಶೇಷ ಇದೆ. ಅಂದು ಅವರು ಅಲ್ಲಿ ಬರುತ್ತಿದ್ದ ವಾಹನಗಳಿಗೆ ಪೆಟ್ರೋಲ್​ ಹಾಕುವ ಕೆಲಸ ಮಾಡೋಕೆ ಹೋಗಿದ್ದರು.

ಹೌದು... ಆದರೆ ಅದು ಯಾವ ಸಿನಿಮಾ ಚಿತ್ರೀಕರಣವೂ ಅಲ್ಲ. ಅದು ನಿಜವಾಗಿಯೂ ರಶ್ಮಿಕಾ ಸಾಮಾಜಿಕ ಕಳಕಳಿ ಹೊಂದಿರುವ ಒಂದು ಕಾರಣಕ್ಕಾಗಿ ಆ ಕೆಲಸಕ್ಕೆ ಕೈ ಜೋಡಿಸಿದ್ದರು.

ಖಾಸಗಿ ವಾಹಿನಿಯೊಂದರಲ್ಲಿ ನಟ ಸೃಜನ್​ ಲೋಕೇಶ್​ ಅವರು ಆರಂಭಿಸಿರುವ  'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ಸಾಮಾಜಿಕ ಕಳಕಳಿ ಹೊಂದಿರುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಧ್ರುವ ಸರ್ಜಾ ಆಟೋ ಓಡಿಸುವ ಮೂಲಕ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ್ದರು. ಈ ಕುರಿತಾದ ಕಾರ್ಯಕ್ರಮ ಕಳೆದ ಭಾನುವಾರ ಪ್ರಸಾರವಾಗಿತ್ತು. ಈ ಭಾನುವಾರ ರಶ್ಮಿಕಾ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿರುವ ಸಂಚಿಕೆ ಪ್ರಸಾರವಾಗಲಿದೆ.

ಪಲ್ಲವಿ ಎಂಬುವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಸಹಾಯ ಮಾಡುವ ಕಾರಣಕ್ಕೆ ರಶ್ಮಿಕಾ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಪಲ್ಲವಿ ಅವರಿಗೆ ಎಷ್ಟು ಹಣದ ಅಗತ್ಯವಿದೆ ಹಾಗೂ ರಶ್ಮಿಕಾ ಎಷ್ಟು ಹಣ ಸಂಪಾದಿಸಿ ನೀಡಿದ್ದಾರೆ ಅನ್ನೋದು ಈ ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ. ಉದಯ ಟಿವಿಯಲ್ಲಿ ಪ್ರತಿ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ನಟಿ ಲಕ್ಷ್ಮೀ ನಡೆಸಿಕೊಡಲಿದ್ದಾರೆ.

 
Loading...First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626