• Home
  • »
  • News
  • »
  • entertainment
  • »
  • Dr Rajkumar: ಡಾ ರಾಜ್ ಗೆ ಇಷ್ಟವಾಗಿದ್ದ ಚಿತ್ರವನ್ನು ಆಮಿರ್ ಖಾನ್ ಹಾಳು ಮಾಡಿದ್ರಾ? ಇದು ಅಪ್ಪು ಹೇಳಿದ್ದಂತೆ

Dr Rajkumar: ಡಾ ರಾಜ್ ಗೆ ಇಷ್ಟವಾಗಿದ್ದ ಚಿತ್ರವನ್ನು ಆಮಿರ್ ಖಾನ್ ಹಾಳು ಮಾಡಿದ್ರಾ? ಇದು ಅಪ್ಪು ಹೇಳಿದ್ದಂತೆ

ಆಮಿರ್​ ಖಾನ್​

ಆಮಿರ್​ ಖಾನ್​

Malavika Avinash On Laal Singh Chaddha: ಇನ್ನು ಅಮಿರ್ ಖಾನ್​ ಹಾಗೂ ಕರೀನಾ ಕಪೂರ್ ಅಭಿನಯದ ಈ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟಿಸುವುದರ ಜೊತೆ ಸುದ್ದಿ ಸಹ ಮಾಡಿದೆ. ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

  • Share this:

ಅಮಿರ್​ಖಾನ್​ (Amir Khan) ಅವರ ಬಹುನಿರೀಕ್ಷಿತ ಚಿತ್ರ ಲಾಲ್​ಸಿಂಗ್ ಚಡ್ಡಾ (Laal Singh Chaddha)  ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಏಪ್ರಿಲ್​ 14ರಂದು ಲಾಲ್​ ಸಿಂಗ್​ ಛಡ್ಡಾ ಸಿನಿಮಾ ರಿಲೀಸ್​ ಮಾಡುವುದಾಗಿ ಹೇಳಿಕೊಂಡಿತ್ತು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಸ್ವತಃ ಬಾಲಿವುಡ್​ (Bollywood) ಮಂದಿ ಚಿತ್ರತಂಡಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ಚೇಂಜ್​ ಮಾಡುವಂತೆ ಹೇಳಿಕೊಂಡಿತ್ತು. ಇದಾದ ಬಳಿಕ ಚಿತ್ರತಂಡ ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹಾಕಿರುವುದಕ್ಕೆ ಚಿತ್ರತಂಡ ಪ್ರಕಟಣೆ ಹೊರಡಿಸಿತ್ತು. “ನಮ್ಮ ಚಿತ್ರ ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿಲ್ಲ. ಸಿನಿಮಾ ಕೆಲಸಗಳು ಮುಗಿಯಲು ಸಾಧ್ಯವಾಗದೇ ಇರುವುದೇ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹಾಕಲು ಕಾರಣ. 11 ಆಗಸ್ಟ್ 2022 ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ” ಎಂದು ತಿಳಿಸಿತ್ತು. ಇದೀಗ ಈ ಚಿತ್ರದ ಬಗ್ಗೆ ನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ (Malavika Avinash) ​ ಅವರು ಒಂದು ಪೋಸ್ಟ್​ ಮಾಡಿದ್ದು, ಅದು ಭಾರೀ ಚರ್ಚೆಯಲ್ಲಿದೆ.


ಹೌದು, ಲಾಲ್​ಸಿಂಗ್ ಚಡ್ಡಾ ಹಾಲಿವುಡ್​ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್​ ಎನ್ನುವುದು ಎಲ್ಲರಿಗೂ ತಿಳಿದಿದೆ, ಆದರೆ ಈ ಚಿತ್ರ ನಮ್ಮ ವರನಟ ಡಾ.ರಾಜ್​ಕುಮಾರ್ ಅವರ ಫೇವರೇಟ್​ ಚಿತ್ರಗಳಲ್ಲಿ ಒಂದು ಎನ್ನುವುದು ಹಲವಾರು ಜನರಿಗೆ ಗೊತ್ತಿಲ್ಲ. ಈ ಬಗ್ಗೆ ನಮ್ಮ ರಾಜರತ್ನ ದಿವಂಗತ ಪುನೀತ ರಾಜ್​ಕುಮಾರ್ ಹೇಳಿರುವ ಕೆಲ ಮಾತುಗಳನ್ನು ನಟಿ ಮಾಳವಿಕಾ ಅವಿನಾಶ್​ ನೆನೆಸಿಕೊಂಡಿದ್ದು, ಈ ಬಗ್ಗೆ ಫೇಸ್​ಬುಕ್​ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.  ಪುನೀತ್ ರಾಜ್‌ಕುಮಾರ್ ಒಮ್ಮೆ ತಮ್ಮ ತಂದೆ, ದಂತಕಥೆ ರಾಜ್‌ಕುಮಾರ್ ಅವರು ಚಿತ್ರವನ್ನು ಎಷ್ಟು ಇಷ್ಟಪಟ್ಟಿದ್ದಾರೆಂದು ಮಾಳವಿಕಾ ಅವರಿಗೆ ಹೇಳಿದ್ದರಂತೆ.


ಪೋಸ್ಟ್​ನಲ್ಲಿ ಏನಿದೆ? 


ಇನ್ನು ಪೋಸ್ಟ್​ನಲ್ಲಿ ನಾನು ಈ ಫಾರೆಸ್ಟ್ ಗಂಪ್ ಚಿತ್ರವನ್ನು ಕನಿಷ್ಠ ಎಂದರೂ 20 ಬಾರಿ ನೋಡಿದ್ದೇನೆ, ಪ್ರತಿ ಬಾರಿ ನೋಡಿದಾಗಲೂ ಕಣ್ಣೀರು ಬರುತ್ತದೆ. ಅಂತಹ ಅದ್ಭುತ ಚಿತ್ರ ಇದು ಎಂದು ಮಾಳವಿಕಾ ಹೇಳಿದ್ದಾರೆ.  ಇನ್ನು ಯಾವುದೇ ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಭಾಷೆ ಮುಖ್ಯವಲ್ಲ. ಭಾವನೆಗಳು ಬಹಳ ಅಗತ್ಯ. ಭಾವನೆಗಳಿಗೆ ಮಿತಿ ಇಲ್ಲ ಅದು ಸಾರ್ವತ್ರಿಕ. ಹಾಗಾಗಿಯೇ ರಾಜ್​ಕುಮಾರ್​ ಅಂತಹ ಮೇರು ನಟರಿಗೆ ಈ ಫಾರೆಸ್ಟ್ ಗಂಪ್ ಚಿತ್ರ ಇಷ್ಟವಾಗಿದ್ದು ಎಂದು ಬರೆದಿದ್ದಾರೆ.ಇದನ್ನೂ ಓದಿ: 52ರಲ್ಲೂ ಸಖತ್ ಹ್ಯಾಂಡ್​ಸಮ್​! ಮಾಧವನ್​ಗಿಂದು ಜನ್ಮದಿನದ ಸಂಭ್ರಮ


ಇನ್ನು ಈ ಚಿತ್ರವನ್ನು ನೋಡಿದ ನನಗೆ ಭಗವದ್ಗೀತೆಯ ಕೆಲ ಸಾಲುಗಳು ನೆನಪಾಗಿದ್ದವು, ನೀವು ನಿಮ್ಮ ಕೆಲಸ ಮಾಡಿ  ಫಲ ಫಲಾವನ್ನು ನನಗೆ ಬಿಡಿ ಎಂಬ ವಾಕ್ಯ ಈ ಚಿತ್ರದ ಮೆಸೇಜ್​ ಎನಿಸುತ್ತದೆ. ರಾಜ್​ಕುಮಾರ್ ಅವರಿಗೂ ಸಹ ಇದೆ ಮೆಸ್ಏಜ್​ ಈ ಚಿತ್ರದಲ್ಲಿ ಕಾಣಿಸಿದೆ ಎಂದಿದ್ದಾರೆ.  ಇನ್ನು ಇದೊಂದು ಅದ್ಬುತ ಚಿತ್ರವಾಗಿದ್ದು, ಯಾವುದೇ ಭಾಷೆಯ ಹಂಗಿಲ್ಲದೇ ನಾವು ಚಿತ್ರವನ್ನು ಅರ್ಥ ಮಾಡಿಕೊಳ್ಳಬಹುದು. ಅದರಲ್ಲೂ ಈಗಿನ ಕಾಲದಲ್ಲಿ ಈ ಚಿತ್ರಗಳ ರಿಮೇಕ್​ ಅಗತ್ಯವಿಲ್ಲ. ನಾವು ಸಬ್ ​ಟೈಟಲ್​ ಮೂಲಕ ಎಲ್ಲಾ ಭಾಷೆಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾಳವಿಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಚಿತ್ರ ಹಾಳು ಮಾಡಿದ್ರಾ ಅಮಿರ್? 


ಅಲ್ಲದೇ ಈಗಾಗಲೇ ಲಾಲ್ ಸಿಂಗ್ ಚಡ್ಡಾ ಚಿತ್ರದ ಟ್ರೇಲರ್ ರಿಲೀಸ್​ ಆಗಿದ್ದು, ಅದರಲ್ಲಿ ಅಮೀರ್ ಖಾನ್​ ಅವರ ಅಭಿನಯ ಟಾಮ್ ಹ್ಯಾಂಕ್ಸ್​ ಅವರ ಅಭಿನಯದ ಮುಂದೆ ಸಪ್ಪೆ ಎಂದಿದ್ದು, ಹೆಚ್ಚಾಗಿ ಅಮಿರ್ ಖಾನ್​ ಕೇವಲ ಒಂದೇ ರಿಯಾಕ್ಷನ್​ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ. ಇದು ಮೂಲ ಚಿತ್ರದ ಭಾವವನ್ನು ಹಾಳು ಮಾಡಿದೆ. ಅಮಿರ್ ಖಾನ್​ ಸಾಧನೆಗಳನ್ನು ಮಾಡಿರುವ ನಟ, ಆದರೆ ಇದರಲ್ಲಿ ಅವರು ವಿಚಿತ್ರವಾಗಿ ಮಾಡಿದ್ದು, ನಿಜಕ್ಕೂ ಮೂಲ ಚಿತ್ರವನ್ನು ಹಾಳು ಮಾಡಿದಂತೆ ಎನ್ನುವ ರೀತಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಆರ್​ಸಿಬಿ ಆಪದ್ಬಾಂಧವ ದಿನೇಶ್​ ಕಾರ್ತಿಕ್ ಬರ್ತ್ ಡೇ - ಡಿಕೆ ಬಗ್ಗೆ ಗೊತ್ತಿರದ ಸಂಗತಿಗಳಿವು


ಅಲ್ಲದೇ ಈ ಚಿತ್ರದಲ್ಲಿ ನಮಗೆ ಭಗವದ್ಗೀತೆಯ ಸಾರ ಕಾಣಿಸುವುದು ಅನುಮಾನ ಎಂದಿದ್ದಾರೆ.  ಇನ್ನು ಅಮಿರ್ ಖಾನ್​ ಹಾಗೂ ಕರೀನಾ ಕಪೂರ್ ಅಭಿನಯದ ಈ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟಿಸುವುದರ ಜೊತೆ ಸುದ್ದಿ ಸಹ ಮಾಡಿದೆ. ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Published by:Sandhya M
First published: