ಬಾಲಿವುಡ್ ನ (Bollywood) ಅತ್ಯಂತ ಸ್ಟೈಲಿಶ್ ನಟಿ (Actor) ಎಂದೇ ಹೆಸರು ಪಡೆದಿರುವ ಮಲೈಕಾ ಅರೋರಾ (Malaika Arora), ಈಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋನಿಂದ (Reality Show) 'ಮೂವಿಂಗ್ ಇನ್ ವಿತ್ ಮಲೈಕಾ' ದಿಂದ ಸಾಕಷ್ಟು ಮಂದಿಯ ಮನಸ್ಸು ಕದ್ದಿದ್ದಾರೆ. ಮಲೈಕಾ ಅರೋರಾ ಕೆಲ ದಿನದ ಹಿಂದೆ ತಮ್ಮ ಮಾಜಿ ಪತಿ ಮತ್ತು ಮತ್ತ ತಮ್ಮ ಮದುವೆ ವಿಷಯದ ಬಗ್ಗೆ ಹೇಳಿಕೊಂಡಿದ್ದರು. ತಾವಾಗಿಯೇ ಮಾಜಿ ಪತಿ ಅರ್ಬಾಜ್ ಖಾನ್ ಗೆ ಪ್ರಪೋಸ್ ಮಾಡಿದ್ದರು ಎಂಬ ವಿಷಯವನ್ನೂ ಹೇಳೀದ್ದರು. ಈಗ ನಟಿ ಮಲೈಕಾ ಅರೋರಾ, ಅರ್ಜುನ್ ಕಪೂರ್ ಜೊತೆಗಿನ ಸಂಬಂಧದಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅಲ್ಲದೇ ನಟಿ ಮಲೈಕ ಅರೋರಾ ಮದುವೆಯಾಗದೇ, ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸಹ ಸದ್ದು ಮಾಡ್ತಿದೆ.
ಕಾರ್ಯಕ್ರಮದಲ್ಲಿ ತಮ್ಮ ಮದುವೆ ಬಗ್ಗೆ ಹೇಳಿಕೊಂಡ ನಟಿ
ರಿಯಾಲಿಟಿ ಶೋ ನಲ್ಲಿ ನಟಿ ಮಲೈಕಾ ಅರೋರಾ, ತಮ್ಮ ಪ್ರಣಯ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಟಿ ಮಲೈಕಾ, ಮಾಜಿ ಪತಿ ಅರ್ಬಾಜ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆಯೂ ಸುದೀರ್ಘವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಅರ್ಜುನ್ ಕಪೂರ್ ಅವರನ್ನು ಮದುವೆಯಾಗುವ ಸಾಧ್ಯತೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಕಾರ್ಯಕ್ರಮದಲ್ಲಿ ಫರಾ ಖಾನ್ ಅವರು ಮತ್ತೆ ಮದುವೆಯಾಗುವ ಯೋಚನೆ ಇದೆಯೇ ಎಂದು ನಟಿ ಮಲೈಕಾರನ್ನು ಕೇಳಿದಾಗ ಅದಕ್ಕೆ ಉತ್ತರಿಸಿದ ನಟಿ ಮಲೈಕಾ ಭವಿಷ್ಯದಲ್ಲಿ ಏನಾಗುತ್ತೋ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಫರಾ ಖಾನ್ ಅವರು ಮಕ್ಕಳ ಬಗ್ಗೆ ಪ್ರಶ್ನಿಸಿದಾಗ, ನಟಿ ಮಲೈಕಾ, ಇವೆಲ್ಲಾ ತುಂಬಾ ಕಾಲ್ಪನಿಕ ವಿಚಾರಗಳು ಎಂದು ಹೇಳಿದ್ದಾರೆ. ಇಂಥಹ ವಿಷಯಗಳನ್ನೆಲ್ಲಾ ಕೇವಲ ಸಂಗಾತಿ ಜೊತೆ ಹಂಚಿಕೊಳ್ಳಬೇಕು. ಇಂತಹ ವಿಷಯಗಳನ್ನ ಕೇವಲ ಸಂಗಾತಿ ಜೊತೆ ಚರ್ಚಿಸಬೇಕಾಗುತ್ತದೆ ಎಂದಿದ್ದಾರೆ.
ನಾನು ನನ್ನ ಸಂಗಾತಿಯ ಜೊತೆಗೆ ಖುಷಿಯಾಗಿದ್ದೇನೆ
ನಟಿ ಮಲೈಕಾ ಅರೋರಾ ಮುಂದುವರೆದು ಮಾತನಾಡಿ, ನಾನು ನನ್ನ ಸಂಗಾತಿ ಜೊತೆ ಸಂತಸದಿಂದ ಇದ್ದೇನೆ. ನಮ್ಮ ಸಂಬಂಧ ಉತ್ತಮವಾಗಿದೆ. ನಾನು ಖುಷಿಯಾಗಿರಲು ಇಷ್ಟ ಪಡುತ್ತೇನೆ. ನಾನು ಇಲ್ಲಿಯವರೆಗೆ ನನ್ನಿಚ್ಛೆಯಂತೆ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ನನ್ನೊಂದಿಗೆ ಇರುವ ಸಂಗಾತಿಯ ಬಗ್ಗೆ ಜಗತ್ತು ಏನು ಹೇಳುತ್ತದೆಯೋ ಅದರ ಬಗ್ಗೆ ನಾನು ಎಂದಿಗೂ ತಲೆ ಕೆಡಿಸಿಕೊಳ್ಳಲ್ಲ.
ನಾವಿಬ್ಬರೂ ಖುಷಿಯಾಗಿರುವುದು ನನಗೆ ಮುಖ್ಯ. ಯಾರು ಏನಂದುಕೊಂಡರೆ ನನಗೇನೂ ಆಗಬೇಕಿಲ್ಲ. ನನ್ನ ಸಂಗಾತಿಯನ್ನು ನಾನು ಖುಷಿಯಾಗಿಡಲು ಬಯಸುತ್ತೇನೆ. ನಾನು ತುಂಬಾ ರೋಮ್ಯಾಂಟಿಕ್ ಆಗಿದ್ದೇನೆ. ನಾನು ನನ್ನ ಸಂಗಾತಿ ಖುಷಿಯಾಗಿರುವುದನ್ನು ಬಯಸುತ್ತೇನೆ. ಆಗ ನಾವು ಒಟ್ಟಿಗೆ ಜೀವನವನ್ನು ಆನಂದಿಸಬಹುದು ಎಂದಿದ್ದಾರೆ.
ಟ್ರೋಲ್ ಯಾವಾಗಲೂ ಆಗುತ್ತೇನೆ
ಅರ್ಜುನ್ ಕಪೂರ್ ಬಗ್ಗೆ ಮಾತನಾಡಿದ ನಟಿ ಮಲೈಕಾ ಅರೋರಾ, ತನ್ನ ಸಂಗಾತಿ ಜೀವನದ ಪ್ರೀತಿಯ ಸ್ನೇಹಿತ ಮತ್ತು ದೊಡ್ಡ ವಿಮರ್ಶಕ ಎಂದಿದ್ದಾರೆ. ತಾವು ತನಗಿಂತ ಕಿರಿಯ ವ್ಯಕ್ತಿಯ ಜೊತೆ ಡೇಟಿಂಗ್ ಮಾಡುವ ವಿಷಯದಿಂದಾಗಿ ಹೆಚ್ಚು ಟ್ರೋಲ್ ಗೆ ಒಳಗಾಗುತ್ತೇನೆ. ಹಲವರು ಹಲವು ತರದ ಪ್ರಶ್ನೆ ಕೇಳುತ್ತಾರೆ. ಪ್ರತಿದಿನ ಏನಾದರೂ ಕೆಟ್ಟದ್ದನ್ನು ಎದುರಿಸುತ್ತೇನೆ.
ಇದನ್ನೂ ಓದಿ: ಮಾಜಿ ಪತಿ ಬಗ್ಗೆ ಮಲೈಕಾ ಮಧುರ ಮಾತುಗಳು! ನಟಿ ಭಾವುಕ
ಇದು ಸುಲಭವಲ್ಲ. ಗಂಡಸು ತನಗಿಂತೆ ಮೂವತ್ತು ವರ್ಷ ಚಿಕ್ಕವಳೊಂದಿಗೆ ಡೇಟ್ ಮಾಡಿದ್ರೆ ಅವನಿಗೆ ಏನೂ ಹೇಳಲ್ಲ. ಆದ್ರೆ ಮಹಿಳೆ ತಮಗಿಂತ ಕಿರಿಯ ವ್ಯಕ್ತಿಯ ಜೊತೆ ಡೇಟ್ ಮಾಡಿದ್ರೆ ತಾಯಿ ಮಗನ ಸಂಬಂಧ ಎಂದು ಕೆಟ್ಟದಾಗಿ ನೋಡುತ್ತಾರೆ. ಇಂತಹ ಹಲವು ಸಂಗತಿಗಳನ್ನು ಹೊರಗಿನವರಿಗಿಂತ ನನ್ನವರೇ ನನಗೆ ಹೇಳಿದ್ದಾರೆ. ಇದು ಸಾಕಷ್ಟು ನೋವು ತಂದಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ