ಅರ್ಜುನ್ ಕಪೂರ್ ಬಗ್ಗೆ ಅಚ್ಚರಿಯ ಸತ್ಯ ಬಿಚ್ಚಿಟ್ಟ ಮಲೈಕಾ ಅರೋರ

ಅರ್ಜುನ್ ಕಪೂರ್- ಮಲೈಕಾ ಅರೋರ

ಅರ್ಜುನ್ ಕಪೂರ್- ಮಲೈಕಾ ಅರೋರ

ಅರ್ಜುನ್ ಕಪೂರ್- ಮಲೈಕಾ ಅರೋರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಫೋಟೋಗಳಿಗೆ ಪರಸ್ಪರ ಪ್ರೀತಿ ಮತ್ತು ರೊಮ್ಯಾಂಟಿಕ್ ಆಗಿ ಕಮೆಂಟ್​ಗಳನ್ನು ಹಾಕುತ್ತಿರುತ್ತಾರೆ. ಈ ಕಾರಣದಿಂದಲೇ ಅವರಿಬ್ಬರ ಬಗ್ಗೆ ಅಭಿಮಾನಿಗಳ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ.

  • Share this:

ಬಾಲಿವುಡ್ ನಟ-ನಟಿಯರ ಲವ್​ ಸ್ಟೋರಿಗಳು, ಬ್ರೇಕಪ್​ಗಳು, ಅಭಿಮಾನಿಗಳ ಪಾಲಿಗೆ ಸದಾ ಅಚ್ಚರಿಯ ಸಂಗತಿ. ತಮ್ಮ ಪ್ರೀತಿಯ ನಟ-ನಟಿಯರು ಏನು ಮಾಡುತ್ತಿದ್ದಾರೆ? ಅವರು ಯಾರೊಂದಿಗೆ ಸುತ್ತಾಡುತ್ತಿದ್ದಾರೆ? ಯಾರೊಂದಿಗೆ ಯಾರು ಮದುವೆಯಾದರೆ ಒಳ್ಳೆ ಜೋಡಿಯಾಗುತ್ತದೆ? ಹೀಗೆ ಸದಾ ಗಾಸಿಪ್​ಗಳನ್ನು ಮಾಡುವುದೆಂದರೆ ಅಭಿಮಾನಿಗಳಿಗೆ ಇಷ್ಟದ ಕೆಲಸ. ಬಾಲಿವುಡ್​ನ ಸದ್ಯದ ಜೋಡಿಯಲ್ಲಿ ಸದಾ ಸುದ್ದಿಯಲ್ಲಿರುವ ಜೋಡಿಯೆಂದರೆ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ. ಮಲೈಕಾಗಿಂತ ವಯಸ್ಸಿನಲ್ಲಿ ಬಹಳ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಸಾರ್ವಜನಿಕವಾಗಿಯೇ ತಮ್ಮಿಬ್ಬರ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

ಸಲ್ಮಾನ್ ಖಾನ್ ತಮ್ಮನಿಗೆ ಡೈವೋರ್ಸ್ ನೀಡಿದ ನಂತರ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್ ಶುರು ಮಾಡಿದ ಮಲೈಕಾ ಅರೋರ ಅರ್ಜುನ್ ಕಪೂರ್ ಬಗ್ಗೆ ಹಲವು ವಿಚಾರಗಳನ್ನು ನೇಹಾ ಧೂಪಿಯಾ ಶೋನಲ್ಲಿ ಹಂಚಿಕೊಂಡಿದ್ದಾರೆ. ‘ನೋ ಫಿಲ್ಟರ್ ನೇಹಾ’ ಶೋನಲ್ಲಿ ತಮ್ಮ ಪ್ರಿಯಕರನ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಕಮೆಂಟ್ ನೋಡಿ ಹಿಗ್ಗಿದ ರಣವೀರ್ ಸಿಂಗ್; ವಿಡಿಯೋ ವೈರಲ್​

ತಾವಿಬ್ಬರು ಮದುವೆಯಾಗುವ ಬಗ್ಗೆ ಶೋನಲ್ಲಿ ಮಾತನಾಡಿರುವ ಮಲೈಕಾ ಅರೋರ ಬಿಳಿ ಪರಿಕಲ್ಪನೆಯಲ್ಲಿ ಮದುವೆಯಾಗುವ ಆಸೆಯಿದೆ ಎಂದು ತಿಳಿಸಿದ್ದಾರೆ. ಅರ್ಜುನ್ ಕಪೂರ್ಗೆ ಫೋಟೋಗ್ರಫಿಯ ಗಂಧಗಾಳಿಯೂ ಇಲ್ಲ. ಅವರು ಒಳ್ಳೆಯ ಫೋಟೋಗ್ರಾಫರ್ ಅಲ್ಲ ಎಂಬ ವಿಷಯವನ್ನು ಮಲೈಕಾ ಅರೋರ ಬಿಚ್ಚಿಟ್ಟಿದ್ದಾರೆ.

ಹಾಗೇ, ಇನ್ನೊಂದು ಅಚ್ಚರಿಯ ಸಂಗತಿಯನ್ನೂ ಹೇಳಿರುವ ಮಲೈಕಾ ಅರೋರ ತನಗೆ ಅರ್ಜುನ್ ಬಗ್ಗೆ ಎಲ್ಲವೂ ಇಷ್ಟ. ಆದರೆ, ಅವರು ದುಡ್ಡ ಖರ್ಚು ಮಾಡುವಾಗ ಹಿಂದೆ-ಮುಂದೆ ನೋಡುವುದಿಲ್ಲ. ಕೈಲಿದ್ದ ಅಷ್ಟೂ ದುಡ್ಡನ್ನೂ ನೀರಿನಂತೆ ಖರ್ಚು ಮಾಡುತ್ತಾರೆ. ಅದೊಂದು ನನಗೆ ಇಷ್ಟವಾಗುವುದಿಲ್ಲ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಅರ್ಜುನ್ ಕಪೂರ್- ಮಲೈಕಾ ಅರೋರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಫೋಟೋಗಳಿಗೆ ಪರಸ್ಪರ ಪ್ರೀತಿ ಮತ್ತು ರೊಮ್ಯಾಂಟಿಕ್ ಆಗಿ ಕಮೆಂಟ್​ಗಳನ್ನು ಹಾಕುತ್ತಿರುತ್ತಾರೆ. ಈ ಕಾರಣದಿಂದಲೇ ಅವರಿಬ್ಬರ ಬಗ್ಗೆ ಅಭಿಮಾನಿಗಳ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಗಾಸಿಪ್ ಕಾಲಂನಲ್ಲಿ ಸದಾ ಸುದ್ದಿಯಲ್ಲಿರುವ ಈ ಜೋಡಿ ಹಸೆಮಣೆ ಏರುವುದು ಯಾವಾಗ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

 

 

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು