ಬಾಲಿವುಡ್​ ಫಿಲ್ಮ್​ ಮೇಕರ್ಸ್​ ಬಗ್ಗೆ ಶಾಕಿಂಗ್ ಮಾಹಿತಿ ರಿವೀಲ್​ ಮಾಡಿದ ನಟಿ Mahima Chaudhry..!

ಒಂದು ಕಾಲದಲ್ಲಿ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಮಹಿಮಾ ಚೌಧರಿ ಬಾಲಿವುಡ್​ನ ಮತ್ತೊಂದು ಮುಖವನ್ನು ಆಗಾಗ ಪರಿಚಯಿಸುತ್ತಲೇ ಇರುತ್ತಾರೆ. ಈ ಹಿಂದೆ ತನಗೆ ಎದುರಾಗಿದ್ದ ಲೈಂಗಿಕ ಕಿರುಕುಳದ ಕುರಿತಾಗಿ ಹೇಳಿಕೊಂಡಿದ್ದ ನಟಿ ಈಗ ಇದೇ ಬಾಲಿವುಡ್​ ಬಗೆಗಿನ ಮತ್ತೊಂದು ವಿಷಯದ ಬಗ್ಗೆ ಈಗ ಮಾತನಾಡಿದ್ದಾರೆ.

ನಟಿ ಮಹಿಮಾ ಚೌಧರಿ

ನಟಿ ಮಹಿಮಾ ಚೌಧರಿ

  • Share this:
ಬಾಲಿವುಡ್​ನಲ್ಲಿ ಜನಪ್ರಿಯ ನಟರಾದ ಶಾರುಖ್ ಖಾನ್, ಸಂಜಯ್ ದತ್ ಸೇರಿದಂತೆ ಇನ್ನಿತರೆ ನಟರ ಜೊತೆ ನಟಿಸಿದ್ದ ಮಹಿಮಾ ಚೌಧರಿ ತಮ್ಮ ವಿಭಿನ್ನ ಪಾತ್ರಗಳಿಂದ ಅಭಿಮಾನಿಗಳ ಮನ ಸೆಳೆದ ನಟಿ ಅಂತ ಹೇಳಿದರೆ ಅತಿಶಯೋಕ್ತಿಯಲ್ಲ.ಇವರು ಬಹಳ ವರ್ಷಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತೇ..? ಮಹಿಮಾ ತಾವು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾಗ ಹಿಂದಿ ಚಿತ್ರೋದ್ಯಮವು ಹೇಗಿತ್ತು ಎನ್ನುವುದರ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ನಟಿ ಮಹಿಮಾ ಮಾತನಾಡುತ್ತಾ 'ಈ ಹಿಂದೆ ಹಿಂದಿ ಚಿತ್ರೋದ್ಯಮದಲ್ಲಿ ತನ್ನ ನಟಿಯರಿಗೆ ಸ್ವಲ್ಪವೂ ದಯೆ ತೋರುತ್ತಿರಲಿಲ್ಲ. ಆದರೆ ಈಗ ಬಹಳಷ್ಟು ಸುಧಾರಿಸಿದೆ. ಈ ಮೊದಲು ಇದು ಈಗಿರುವುದಕ್ಕಿಂತ ಹೆಚ್ಚು ಪುರುಷ ಪ್ರಾಬಲ್ಯ ಹೊಂದಿತ್ತು' ಎಂದು ನಟಿ ಮಹಿಮಾ ಹೇಳಿದ್ದಾರೆ.

ನಟಿ ತಾನು ಹೇಳಿದ್ದನ್ನು ವಿವರಿಸುತ್ತಾ, 'ಹಿಂದಿ ಚಿತ್ರೋದ್ಯಮದ ನಟಿಯರು ಈಗ ಉತ್ತಮ ವೇತನ, ಜಾಹೀರಾತುಗಳನ್ನು ಪಡೆಯುತ್ತಿದ್ದಾರೆ. ಅವರು ಈ ಹಿಂದೆಗಿಂತಲೂ ಉತ್ತಮ ಸ್ಥಾನದಲ್ಲಿದ್ದಾರೆ. ಅವರು ಮೊದಲಿಗಿಂತ ಈಗ ಸುದೀರ್ಘವಾದ ವೃತ್ತಿ ಜೀವನ ಹೊಂದಿದ್ದಾರೆ' ಎಂದು ಮಹಿಮಾ ಹೇಳಿದ್ದಾರೆ.

1997ರಲ್ಲಿ ಬಾಲಿವುಡ್ ನ ಜನಪ್ರಿಯ ನಟ ಶಾರುಖ್ ಖಾನ್‌ಗೆ ನಟಿಯಾಗಿ ‘ಪರ್ದೇಸ್‌’ ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹಿಂದಿನ ದಿನಗಳನ್ನು ಮೆಲುಕು ಹಾಕುತ್ತಾ ನಟಿ ಆಗಿನ ದಿನಗಳಲ್ಲಿ ನಟಿಯರು ಯಾರ ಜೊತೆಯಾದರೂ ಸಂಬಂಧ ಹೊಂದಿದ್ದರೂ ಅದು ಅವರ ವೃತ್ತಿ ಜೀವನದ ಮೇಲೆ ತುಂಬಾ ಪರಿಣಾಮ ಬೀಳುತ್ತಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Mahima Chaudhry: ನಿರ್ದೇಶಕ ಸುಭಾಷ್​ ಘಾಯ್​ ವಿರುದ್ಧ ಕಿರುಕುಳ ನೀಡಿದ್ದ ಆರೋಪ ಹೊರಿಸಿದ ನಟಿ ಮಹಿಮಾ ಚೌಧರಿ..!

ಇನ್ನಷ್ಟು ಸಂಗತಿಗಳನ್ನು ಬಿಚ್ಚಿಟ್ಟ ಮಹಿಮಾ "ನೀವು ಯಾರೊಂದಿಗಾದರೂ ಡೇಟಿಂಗ್ ಮಾಡಲು ಪ್ರಾರಂಭಿಸಿದ ತಕ್ಷಣವೇ, ಜನರು ನಿಮ್ಮ ಬಗ್ಗೆ ಬರೆಯುತ್ತಿದ್ದರು. ಏಕೆಂದರೆ ಆಗಿನ ಚಿತ್ರೋದ್ಯಮ ಹಾಗೂ ಫಿಲ್ಮ್​ ಮೇಕರ್ಸ್​ ಚುಂಬಿಸದ ಮತ್ತು ಕನ್ಯತ್ವವನ್ನು ಹೊಂದಿರುವ ನಟಿಯರನ್ನು ಮಾತ್ರ ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳಲು ಬಯಸುತ್ತಿದ್ದರು. ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದರೆ, ‘ಅವಳು ಡೇಟಿಂಗ್ ಮಾಡುತ್ತಿದ್ದಾಳೆ' ಎಂದು ಹೇಳುತ್ತಿದ್ದರು. ನೀವು ಮದುವೆಯಾಗಿದ್ದರೆ, ನಿಮ್ಮ ಸಿನಿಮಾ ಜೀವನವನ್ನು ಮರೆತು ಬಿಡಬೇಕಿತ್ತು. ನಿಮಗೆ ಮಗುವಿದ್ದರೆ, ಸಿನಿಮಾ ನಿಮಗೆ ಸಂಪೂರ್ಣವಾಗಿ ಮುಗಿದಂತೆ ಎಂಬಂತಿತ್ತು" ಎಂದು ಅವರು ನೆನಪಿಸಿಕೊಂಡಿದ್ದಾರೆ.

ನಟರಾದ ಗೋವಿಂದ ಮತ್ತು ಅಮೀರ್ ಖಾನ್ ಅವರನ್ನು ಉಲ್ಲೇಖಿಸಿ "ಖಯಾಮತ್ ಸೆ ಖಯಾಮತ್ ತಕ್'' ಸಿನಿಮಾ ಬಂದಾಗಲೂ, ಅವರು ಮದುವೆಯಾಗಿದ್ದಾರೆ ಎಂದು ನಮಗೆ ತಿಳಿದಿರಲಿಲ್ಲ. ನಟರು ತಮ್ಮ ಮಕ್ಕಳ ಛಾಯಾಚಿತ್ರಗಳನ್ನು ತೋರಿಸಲಿಲ್ಲ ಮತ್ತು ಅವರ ವಯಸ್ಸನ್ನು ಸಹ ಬಹಿರಂಗಪಡಿಸುತ್ತಿರಲಿಲ್ಲ. ಈ ಎಲ್ಲಾ ವಿಷಯಗಳು ಈಗ ತುಂಬಾನೇ ಬದಲಾಗಿವೆ" ಎಂದು ನಟಿ ಹೇಳಿದ್ದಾರೆ.

ಈಗ ಪರಿಸ್ಥಿತಿಗಳು ಹೇಗೆ ಬದಲಾಗಿದ್ದು, ನೀವು 48 ವರ್ಷದವರಾಗಿದ್ದು, ನಿಮ್ಮ ಸಂಬಂಧಗಳು ನಿಮ್ಮ ವೃತ್ತಿ ಜೀವನ ಮುಂದುವರಿಸಲು ಬಯಸುತ್ತೀರಾ ಅಥವಾ ವೈಯಕ್ತಿಕ ಜೀವನ ಹೊಂದಲು ಬಯಸುತ್ತೀರಾ ಎಂಬುದಕ್ಕೆ ನಿರ್ಧರಿಸುವ ಅಂಶವಲ್ಲ ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Mahima Chaudhry: ನಟಿ ಮಹಿಮಾ ಚೌಧರಿ ಸಿನಿ ಭವಿಷ್ಯಕ್ಕೆ ಕುತ್ತು ತಂದ ಘಟನೆ ನಡೆದದ್ದು ಬೆಂಗಳೂರಿನಲ್ಲೇ ಅಂತೆ..!

ನಿರ್ದೇಶಕ ಸುಭಾಷ್​ ಘಾಯ್​ ಅವರೇ ಮಹಿಮಾ ಚೌಧರಿ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು. ಬಾಲಿವುಡ್​ನ ಸ್ಟಾರ್​ ನಟರೊಂದಿಗೆ ಕೆಲಸ ಮಾಡಿರುವ ಒಂದು ಕಾಲದ ಸ್ಟಾರ್​ ನಿರ್ದೇಶಕ ಸುಭಾಷ್​ ಘಾಯ್​ ವಿರುದ್ಧ ನಟಿ ಮಹಿಮಾ ಚೌಧರಿ ಬಹಳ ವರ್ಷಗಳ ನಂತರ ಹಿಂಸೆ ನೀಡಿದ ಆರೋಪಿಸಿದ್ದರು. ಈ ಹಿಂದೆ ಸುಭಾಷ್​ ಘಾಯ್​ ವಿರುದ್ಧ ರಾಖಿ ಸಾವಂತ್​ ಸಹ ಇಂತಹದ್ದೇ ಆರೋಪ ಮಾಡಿದ್ದರು. ನಿರ್ದೇಶಕ ಸುಭಾಷ್ ಘಾಯ್​, ತನಗೆ ಹಿಂಸೆ ನೀಡುವುದರೊಂದಿಗೆ, ತನ್ನ ಸಿನಿ ಜೀವನಕ್ಕೆ ತೊಂದರೆಯಾಗುವಂತೆ ಮಾಡಿದ್ದರು ಎಂದು ಮಹಿಮಾ ಆರೋಪಿಸಿದ್ದಾರೆ. ನನ್ನ ಕಷ್ಟದ ಸಮಯದಲ್ಲಿ ಜೊತೆಗೆ ನಿಂತಿದ್ದು ಕೆಲವೇ ಕೆವರು ಮಾತ್ರ ಎಂದು ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಮಹಿಮಾ.
Published by:Anitha E
First published: