'ಬಾಹುಬಲಿ' ಸಿನಿಮಾ ತೆರೆಕಂಡ ನಂತರ ಪ್ರಭಾಸ್ ರೇಂಜ್ ಬೇರೆನೇ ಆಗಿದೆ. ಕೇವಲ ಟಾಲಿವುಡ್ಗೆ ಸೀಮಿತವಾಗಿದ್ದ ಪ್ರಭಾಸ್ ಈಗ ಬಾಲಿವುಡ್ನಲ್ಲೂ ಚಿರಪರಿಚಿತರಾಗಿದ್ದಾರೆ. ಅವರ ಅಭಿನಯದ 'ಸಾಹೋ' ಟಾಲಿವುಡ್ನಲ್ಲಿ ಸದ್ದು ಮಾಡದೇ ಹೋದರೂಬಿ-ಟೌನ್ನಲ್ಲಿ ಕೊಂಚ ಮಟ್ಟಿಗೆ ಜಯ ಸಾಧಿಸಿತು.
ಪ್ರಭಾಸ್ ಅಭಿನಯದ ಸಿನಿಮಾ 'ಸಾಹೋ' ನೆಲಕಚ್ಚಿದರೂ ಅವರ ತಾರಾ ವರ್ಚಸ್ಸಿಗೆ ಯಾವುದೇ ತೊಂದರೆಯಾಗಿಲ್ಲ. ಈಗಲೂ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಸ್ಟಾರ್ ನಟಿಯರು ಸಾಲಿನಲ್ಲಿ ನಿಲ್ಲುತ್ತಾರೆ. ಇಂತಹ ನಟನೊಂದಿಗೆ ನಟಿಸಲು ಚಾನ್ಸ್ ಕೊಡ್ತೀವಿ ಅಂದರೆ ಏನಾಗಬೇಡ ಹೇಳಿ.
![Actress kidnapped after promising her a role with Tollywood star Prabhas]()
ಪ್ರಭಾಸ್, ಕೃತಿ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ
ಹೌದು, ಪ್ರಭಾಸ್ ಹಾಗೂ ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ಅವರ ಕಾಂಬಿನೇಷನ್ನಲ್ಲಿ ಸಿನಿಮಾ ಒಂದು ಬರುತ್ತಿದ್ದು, ಅದಕ್ಕಾಗಿ ನಾಯಕಿಯ ಹುಡುಕಾಟ ನಡೆದಿದೆ ಅಂತ 'ರಾಹು' ಖ್ಯಾತಿಯ ನಟಿ ಕೃತಿ ಗಾರ್ಗ್ ಅವರಿಗೆ ಕರೆ ಬಂದಿದೆ. ಅದೂ ನಿರ್ದೇಶಕ ಸಂದೀಪ್ ರೆಡ್ಡಿ ಅವರ ಹೆಸರಲ್ಲೇ ಈ ಕರೆ ಮಾಡಲಾಗಿದ್ದು, ಮುಂಬೈನಲ್ಲಿ ಈ ಹೊಸ ಸಿನಿಮಾದ ಆಡಿಷನ್ ನಡೆಯುತ್ತಿದೆ. ಅದರಲ್ಲಿ ಭಾಗಿಯಾಗಿ ಎಂದು ಕೃತಿ ಅವರಿಗೆ ಕರೆ ಮಾಡಲಾಗಿದೆ.
ಇದನ್ನೂ ಓದಿ: ತೃತೀಯ ಲಿಂಗಿಗಳಿಗಾಗಿ ಮನೆ ಕಟ್ಟಲು ಕೋಟಿ ಕೋಟಿ ದಾನ ಮಾಡಿದ ಅಕ್ಷಯ್ ಕುಮಾರ್..!
ಪ್ರಭಾಸ್ ಜತೆ ನಟಿಸುವ ಅವಕಾಶ ಮಿಸ್ ಮಾಡಿಕೊಳ್ಳಬಾರದು ಎಂದು ಕೃತಿ ಸೀದಾ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೆ ಮಿಂಚಿತವಾಗಿ ತನಗೆ ಕರೆ ಮಾಡಿದವರು ಯಾರು..? ಏನು..? ಎಂದು ವಿಚಾರಿಸಿಲ್ಲ. ಆದರೆ ಕರೆ ಬಂದಿರುವ ವಿಷಯವನ್ನು ತಿಳಿದವರಿಗೆ ಹೇಳಿದ್ದಾರೆ.
ಇದನ್ನೂ ಓದಿ: Shruti Hassan: ಕುಡಿತಕ್ಕೆ ವಿದಾಯ ಹಾಡಿದ ನಟಿ ಶ್ರುತಿ ಹಾಸನ್..!
ಕೃತಿ ಮುಂಬೈಗೆ ಹೋದ ನಂತರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೊತೆಗೆ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಕೃತಿ ಅವರ ಕುಟುಂಬದವರಲ್ಲಿ ಆತಂಕ ಮನೆ ಮಾಡಿದೆ. ಕೃತಿ ವಿಷಯವಾಗಿ ಸದ್ಯ ಹೈದರಾಬಾದಿನ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ 'ರಾಹು' ಚಿತ್ರದ ನಿರ್ದೇಶಕ ಸುಬ್ಬು ದೂರು ದಾಖಲಿಸಿದ್ದಾರೆ.
Rashmika Mandanna: ರಶ್ಮಿಕಾಗೆ ಲವ್ ಆಗಿದ್ಯಂತೆ: ಯಾರ್ ಮೇಲೆ ಗೊತ್ತಾ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ