• Home
  • »
  • News
  • »
  • entertainment
  • »
  • Rasik Dave Death: ಮಹಾಭಾರತದಲ್ಲಿ ನಟಿಸಿ ಮನಗೆದ್ದಿದ್ದ ನಟ ಇನ್ನಿಲ್ಲ, ಕಿಡ್ನಿ ವೈಫಲ್ಯದಿಂದ ರಸಿಕ್ ದವೆ ವಿಧಿವಶ

Rasik Dave Death: ಮಹಾಭಾರತದಲ್ಲಿ ನಟಿಸಿ ಮನಗೆದ್ದಿದ್ದ ನಟ ಇನ್ನಿಲ್ಲ, ಕಿಡ್ನಿ ವೈಫಲ್ಯದಿಂದ ರಸಿಕ್ ದವೆ ವಿಧಿವಶ

ರಾಸಿಕ್​ ದವೆ

ರಾಸಿಕ್​ ದವೆ

Actress Ketki Dave: ರಸಿಕ್ 2006 ರಲ್ಲಿ ತಮ್ಮ ಪತ್ನಿಯೊಂದಿಗೆ ‘ನಾಚ್ ಬಲಿಯೇ 2’ ನಲ್ಲಿ ಭಾಗವಹಿಸಿದ್ದರು. ರಸಿಕ್ ದವೆ 1982 ರಲ್ಲಿ ಗುಜರಾತಿ ಚಲನಚಿತ್ರ 'ಪುತ್ರ ವಧು' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

  • Share this:

ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ( Kyunki Saas Bhi Kabhi Bahu Thi) ನಟಿ ಕೇತ್ಕಿ ಡೇವ್ (Ketki Dave) ಅವರ ಪತಿ ರಸಿಕ್ ದವೆ (Rasik Dave) ಜುಲೈ 29 ರಂದು ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರು ಕಳೆದ ಎರಡು ವರ್ಷಗಳಿಂದ ಡಯಾಲಿಸಿಸ್‌ಗೆ ಒಳಗಾಗಿದ್ದರು, ಆದರೆ ಇತ್ತೀಚೆಗೆ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ವಿಧಿವಶರಾಗಿದ್ದಾರೆ.  65 ವರ್ಷದ ರಾಸಿಕ್ ಡೇವ್ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ರಸಿಕ್ ನಿಧನಕ್ಕೆ ಗಣ್ಯರ ಸಂತಾಪ


ರಸಿಕ್ ಅವರನ್ನು ಅವರ ಸಹೋದ್ಯೋಗಿಗಳು ಪ್ರೀತಿಯಿಂದ ರಸಿಕ್ ಭಾಯ್ ಎಂದು ಕರೆಯುತ್ತಿದ್ದರು. ಅವರ ನಿಧನ ಕಿರುತೆರೆಗೆ ತುಂಬಲಾಗದ ನಷ್ಟವಾಗಿದ್ದು, ಗಣ್ಯರಯ ಸಂತಾಪ ಸೂಚಿಸಿದ್ದಾರೆ.  ಕೇತ್ಕಿ ಅವರ ತಾಯಿ ಕೂಡ ಜನಪ್ರಿಯ ನಟಿಯಾಗಿದ್ದು, ತಾಯಿ ಸರಿತಾ ಜೋಶಿ ಮತ್ತು ಅವರ ತಂದೆ (ದಿವಂಗತ) ಪ್ರವೀಣ್ ಜೋಶಿ ರಂಗಭೂಮಿ ನಿರ್ದೇಶಕರಾಗಿದ್ದರು. ರಾಸಿಕ್ ಮತ್ತು ಕೇತ್ಕಿ ಡೇವ್ ಗುಜರಾತಿ ನಾಟಕ ಕಂಪನಿಯನ್ನು ನಡೆಸುತ್ತಿದ್ದರು.




ಇದನ್ನೂ ಓದಿ: ವಿದೇಶದಲ್ಲಿ ರಾಕಿಭಾಯ್ ನೋಡಿ ಫ್ಯಾನ್ಸ್ ಖುಷ್, ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಂಡ ಯಶ್​


ಅನಾರೋಗ್ಯದಿಂದ ಬಳಲುತ್ತಿದ್ದ ನಟ


ರಸಿಕ್ 2006 ರಲ್ಲಿ ತಮ್ಮ ಪತ್ನಿಯೊಂದಿಗೆ ‘ನಾಚ್ ಬಲಿಯೇ 2’ ನಲ್ಲಿ ಭಾಗವಹಿಸಿದ್ದರು. ರಸಿಕ್ ದವೆ 1982 ರಲ್ಲಿ ಗುಜರಾತಿ ಚಲನಚಿತ್ರ 'ಪುತ್ರ ವಧು' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಗುಜರಾತಿ ಮತ್ತು ಹಿಂದಿ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.









View this post on Instagram






A post shared by Rasik Dave (@daverasik95)





ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ ಅಕ್ಷಯ್ ಕುಮಾರ್, ಸಿನಿಮಾ ವಿರುದ್ದ ಗುಡುಗಿದ ಸುಬ್ರಮಣಿಯನ್ ಸ್ವಾಮಿ


ಅಲ್ಲದೇ, ಗುಜರಾತಿ ಮತ್ತು ಹಿಂದಿ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳಲ್ಲಿ ನಟಿಸಿರುವ ಕೇತ್ಕಿ ದವೆ, ಆಮ್ದಾನಿ ಅತ್ತನ್ನಿ ಖರ್ಚಾ ರೂಪಯ್ಯ, ಮನಿ ಹೈ ತೋ ಹನಿ ಹೈ, ಕಲ್ ಹೋ ನಾ ಹೋ ಮತ್ತು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿಯಂತಹ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ 2 ರಲ್ಲೂ ಅವರು ಭಾಗವಹಿಸಿದ್ದರು.

Published by:Sandhya M
First published: