ಹೊಲದಲ್ಲಿ ನಾಟಿ ಮಾಡುತ್ತಿರುವ ಕೀರ್ತಿ ಪಾಂಡಿಯನ್
ಲಾಕ್ಡೌನ್ನಲ್ಲಿ ಸಿನಿ ತಾರೆಯರು ತಮಗೆ ಬೇಕಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲವರು ಮನೆ ಕೆಲಸದಲ್ಲಿ ಮನೆಯವರಿಗೆ ಸಹಾಯ ಮಾಡಿದರೆ, ಮತ್ತೆ ಕೆಲವರು ಫಿಟ್ನೆಸ್ ಹಾಗೂ ಟಿಕ್ಟಾಕ್ ವಿಡಿಯೋಗಳಲ್ಲಿ ನಿರತರಾಗಿದ್ದಾರೆ. ಇನ್ನೂ ಸ್ವಲ್ಪ ಜನ ಮನೆಯಲ್ಲಿ ಟೆರೆಸ್ ಗಾರ್ಡನ್ನಲ್ಲಿ ಗಿಡ ನೆಡುತ್ತಾ ಕಾಲ ಕಳೆಯುತ್ತಿದ್ದಾರೆ. ಆದರೆ ಇಲ್ಲೊಬ್ಬರು ನಟಿ ತಮಗಿಷ್ಟದ ತಮಗಿಷ್ಟದ ಕೆಲಸ ಮಾಡುತ್ತಿದ್ದಾರೆ.
ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಗಾದೆ ಇದೆ. ಇದಕ್ಕೆ ತಕ್ಕಂತೆ ನಟಿಯೊಬ್ಬರು ತಮ್ಮ ಹೊಲದಲ್ಲಿ ಕೈ-ಕಾಲುಗಳನ್ನು ಕೆಸರು ಮಾಡಿಕೊಂಡು ವ್ಯವಸಾಯ ಮಾಡೋಕೆ ನಿಂತಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ಅಂತೀರಾ? ಉತ್ತರ ಮುಂದಿದೆ ಓದಿ...
Beach Baby Always! ♥️ #favouriteplace #beach pic.twitter.com/7Isv5JFC7c
ಕಾಲಿವುಡ್ ನಟಿ ಕೀರ್ತಿ ಪಾಂಡಿಯನ್... ಒಂದು ಕಾಲದ ನಾಯಕ ನಟ ಹಾಗೂ ಖಳ ನಟನಾಗಿ ಮಿಂಚಿದ್ದ ಅರುಣ್ ಪಾಂಡಿಯನ್ ಅವರ ಮಗಳು. ಕೀರ್ತಿ ತಮ್ಮ ಹೊಲದಲ್ಲಿ ನಾಟಿ ಮಾಡುತ್ತಾ ಬ್ಯುಸಿಯಾಗಿದ್ದಾರೆ.
'ತುಂಬಾ' ಖ್ಯಾತಿಯ ನಟಿ ಲಾಕ್ಡೌನ್ನಿಂದಾಗಿ ಸದ್ಯ ತಮ್ಮ ಹಳ್ಳಿಯಲ್ಲಿದ್ದಾರೆ. ಅಲ್ಲೇ ತಮ್ಮ ಹೊಲದಲ್ಲಿ ವ್ಯವಸಾಯ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ಟ್ರ್ಯಾಕ್ಟರ್ ಏರಿ ತಮ್ಮ ಹೊಲದಲ್ಲಿ ಉಳುಮೆ ಮಾಡುತ್ತಿದ್ದರು ಕೀರ್ತಿ. ಅವರ ಟ್ರ್ಯಾಕ್ಟರ್ ವಿಡಿಯೋ ಸಹ ವೈರಲ್ ಆಗಿತ್ತು.
'ತುಂಬಾ' ಸಿನಿಮಾದ ಮೂಲಕ ನಾಯಕ ನಟಿಯಾಗಿ ಪರಿಚಯವಾದವರು ಕೀರ್ತಿ ಪಾಂಡಿಯನ್. ಸದ್ಯ ತನ್ನ ತಂದೆ ಅರುಣ್ ಅವರೊಂದಿಗೆ ಸೇರಿ ಮಲಯಾಳಂನ 'ವಿಲನ್' ಎಂಬ ಸಿನಿಮಾದ ತಮಿಳು ರಿಮೇಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಕೀರ್ತಿ.
Kichcha Sudeep: ರಿವೀಲ್ ಆಯ್ತು ಕಿಚ್ಚನ ಸ್ಟನ್ನಿಂಗ್ ಲುಕ್: ಹೊಸ ಚಿತ್ರಕ್ಕಾಗ ಈ ತಯಾರಿ..!
Published by:
Anitha E
First published:
May 7, 2020, 6:28 PM IST