Drink & Drive: ಎಣ್ಣೆ ಏಟಲ್ಲಿ ಗಾಡಿ ಓಡಿಸಿ, ಪೊಲೀಸರ ಕೆನ್ನೆಗೇ ಏಟು ಕೊಡೋದಾ? ಈ ನಟಿ ಕೈಗೆ ಬಿತ್ತು ಕೋಳ!

ಈಕೆ ಯುವನಟಿ. ನಟಿಸಿದ್ದು ಮೂರು ಮತ್ತೊಂದು ಸಿನಿಮಾ. ಆದರೆ ಅದಾಗಲೇ ಸಾಕಷ್ಟು ನೇಮು ಫೇಮು ಗಳಿಸಿಕೊಂಡಿದ್ದಾಳೆ. ಹೀಗಾಗಿಯೇ ಕುಡಿದು ಚಾಲನೆ ಮಾಡಿದ್ದನ್ನ ಪ್ರಶ್ನೆ ಮಾಡಿದ ಪೊಲೀಸರ ಮೇಲೆಯೇ ಕೈ ಮಾಡಿದ್ದಾಳೆ.

ನಟಿ ಕಾವ್ಯಾ ಥಾಪರ್

ನಟಿ ಕಾವ್ಯಾ ಥಾಪರ್

  • Share this:
ಮುಂಬೈ: ವೀಕೆಂಡ್‌ (Weekend) ಬಂತು ಅಂದ್ರೆ ಸಾಕು ಜನ ಸಾಮಾನ್ಯರಿಂದ (Common People) ಸೆಲಿಬ್ರಿಟಿಗಳವರೆಗೂ (Celebrity) ಎಲ್ಲರೂ ಮೈಮರೆಯುತ್ತಾರೆ. ಪಾರ್ಟಿ (Party), ಶಾಪಿಂಗ್ (Shopping), ಸುತ್ತಾಟ ಅಂತ ಎಂಜಾಯ್ (Enjoy) ಮಾಡ್ತಾರೆ. ಆದ್ರೆ ಹಾಗೆ ಕೆಲವರು ತಮ್ಮ ಎಂಜಾಯ್‌ಮೆಂಟ್‌ನಿಂದ (Enjoyment) ಬೇರೆಯವರಿಗೂ ತೊಂದರೆ ಕೊಡುತ್ತಾರೆ. ಅದರಲ್ಲೂ ಹಲವು ಸೆಲಬ್ರಿಟಿಗಳು ಸದಾಕಾಲ ಯಾವುದಾದರೊಂದು ಕಿರಿಕ್ ಮಾಡ್ತಾನೇ ಇರ್ತಾರೆ. ಇದೀಗ ಜನಪ್ರಿಯ ಯುವ ನಟಿಯೊಬ್ಬಳು (Actress) ಕಿರಿಕ್ ಮಾಡಿಕೊಂಡು, ಸುದ್ದಿಯಾಗಿದ್ದಾಳೆ. ಎಣ್ಣೆ ಏಟಲ್ಲಿ ಕಾರು ಓಡಿಸಿದ್ದಲ್ಲದೇ (Drink And Drive), “ಯಾಕಮ್ಮ ಹಿಂಗ್ ಕುಡಿದು, ಗಾಡಿ ಓಡಿಸ್ತೀಯಾ” ಅಂತ ಕೇಳಿದ ಪೊಲೀಸರ (Police) ಮೇಲೆಯೇ ಕೈ ಮಾಡಿದ್ದಾಳೆ. ಇದೀಗ ಮಾಡಿದ ತಪ್ಪಿಗೆ ಖಾಕಿಯಿಂದ ಕೈಗೆ ಕೋಳ ತೊಡಿಸಿಕೊಂಡಿದ್ದೂ ಆಗಿದೆ. ಹಾಗಿದ್ರೆ ಆಕೆ ಯಾರು? ಆ ನಟಿ ಮಾಡಿದ ಕಿರಿಕ್ ಏನು ಅನ್ನೋದನ್ನು ನೀವೇ ಓದಿ…

ಒಳಗೆ ಸೇರಿದರೆ ಗುಂಡು, ಕಿರಿಕ್ ಮಾಡಿದಳು ನಟಿ!

ಈಕೆ ಜನಪ್ರಿಯ ಯುವ ನಟಿಯರಲ್ಲಿ ಒಬ್ಬಳು. ಆಕೆ ರಾತ್ರಿ ಪಾರ್ಟಿಗೆ ಅಂತ ಹೋಗಿದ್ದಾಳೆ. ಅಲ್ಲಿ ಸ್ನೇಹಿತರ ಜೊತೆ ಸಖತ್ತಾಗೇ ಕುಡಿದು, ಚಿತ್ ಆಗಿದ್ದಾಳೆ. ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿ ತನ್ನ ಕಾರು ಓಡಿಸಿಕೊಂಡು ಬಂದಿದ್ದಾಳೆ. ದಾರಿ ಮಧ್ಯೆ ಪೊಲೀಸರು ತಡೆದಿದ್ದಾರೆ. ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ ಮಾಡಿದ್ದಾರೆ. ಆಗ ಈ ನಟಿ ರಂಪಾಟ ಮಾಡಿದ್ದಾಳೆ.

ಪೊಲೀಸರ ಮೇಲೆಯೇ ಕೈ ಮಾಡಿದ ನಟಿ

ಯಾಕಮ್ಮ ಕುಡಿದು ಕಾರು ಓಡಿಸ್ತೀಯಾ ಅಂತ ಪೊಲೀಸರು ಕೇಳಿದ್ದಾರೆ. ಅದು ನನ್ನ ಇಷ್ಟ, ನೀವ್ಯಾರು ಪ್ರಶ್ನೆ ಮಾಡೋದಕ್ಕೆ ಅಂತೆಲ್ಲ ಜಗಳ ತೆಗೆದಿದ್ದಾಳೆ. ಅಷ್ಟರಲ್ಲಿ ಅವಳನ್ನು ಕಂಟ್ರೋಲ್ ಮಾಡೋಕೆ ಅಂತ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಬಂದಿದ್ದಾರೆ. ರಾಂಗ್ ಆಗಿದ್ದ ಈ ನಟಿ, ಮಹಿಳಾ ಕಾನ್ಸ್‌ಟೇಬಲ್ ಮೇಲೆಯೂ ಕೈ ಮಾಡಿದ್ದಾಳೆ.

ಕುಡಿದು ಬೀದಿ ಜಗಳ ಮಾಡಿದ ಆ ನಟಿ ಯಾರು ಗೊತ್ತಾ?

ಹೌದು, ಇಷ್ಟೆಲ್ಲಾ ಕುಡಿದು, ಬೀದಿಯಲ್ಲಿ ಗಲಾಟೆ ಮಾಡಿ, ಪೊಲೀಸರ ಮೇಲೆಯೇ ಕೈ ಮಾಡಿದ ಆ ನಟಿ ಬೇರೆ ಯಾರೂ ಅಲ್ಲ, ಕಾವ್ಯಾ ಥಾಪರ್. ಈಕೆ ಬಾಲಿವುಡ್‌ನ ಯುವನಟಿ. ನಟಿಸಿದ್ದು ಮೂರು ಮತ್ತೊಂದು ಸಿನಿಮಾ. ಆದರೆ ಅದಾಗಲೇ ಸಾಕಷ್ಟು ನೇಮು ಫೇಮು ಗಳಿಸಿಕೊಂಡಿದ್ದಾಳೆ.

ಇದನ್ನೂ ಓದಿ: "ನನಗೆ ಇರುವ AIDS ನನ್ನ ಹೆಂಡ್ತಿಗೂ ಬರಲಿ" ಅಂತ ಈ ಪಾಪಿ ಮಾಡಿದ್ದೇನು? ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ!

ತಡರಾತ್ರಿ ಒಂದು ಗಂಟೆಗೆ ಕಾರಲ್ಲಿ ಆತನೂ ಇದ್ದ

ತಡ ರಾತ್ರಿ 1 ಗಂಟೆ ಸುಮಾರಿಗೆ ಮುಂಬೈನ ಜುಹೂ ಪ್ರದೇಶದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್  ಘಟನೆ ನಜೆದಿದೆ. ನಟಿ ಅಲ್ಲಿಗೆ ಪಾರ್ಟಿಗಾಗಿ ಬಂದಿದ್ದರು. ಕುಡಿದು ಚಿತ್ ಆಗಿದ್ದ ನಟಿ, ಪಕ್ಕದಲ್ಲಿ ಗೆಳೆಯನ್ನು ಕೂರಿಸಿಕೊಂಡು, ಪೂರ್ವ ಉಪನಗರದಲ್ಲಿರುವ ತನ್ನ ನಿವಾಸಕ್ಕೆ ಹಿಂತಿರುಗುತ್ತಿದ್ದಳು.

ಈ ವೇಳೆ ದಾರಿ ಮಧ್ಯೆ ನಿರ್ಭಯಾ ಸ್ಕ್ವಾಡ್‌ನ ಮಹಿಳಾ ಪೊಲೀಸರು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಆಕೆ ಗಲಾಟೆ ಮಾಡಿ, ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆಯನ್ನೂ ಮಾಡಿದ್ದಾಳೆ.

ನಟಿಗೆ ನ್ಯಾಯಾಂಗ ಬಂಧನ

ನಟಿ ಕಾವ್ಯಾ ಥಾಪರ್ ಮೇಲೆ ಐಪಿಸಿ ಮತ್ತು ಮೋಟಾರು ವಾಹನಗಳ ಕಾಯ್ದೆಯ ಸೂಕ್ತ ಸೆಕ್ಷನ್‌ಗಳಡಿಯಲ್ಲಿ ದುಡುಕಿನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತು ಸಾರ್ವಜನಿಕ ಸೇವೆಯಲ್ಲಿರುವವರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಕೇಸ್ ಹಾಕಲಾಗಿದೆ.

ಇದನ್ನೂ ಓದಿ: ಎರಡು ವರ್ಷಗಳ ನಂತರ ಪತ್ತೆಯಾದ ಅಮೆರಿಕದ Missing Girl..!

ಆಕೆಯನ್ನು ಬಂಧಿಸಿ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಕೆಯನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಗಿದೆ ಅಂತ ಮುಂಬೈ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
Published by:Annappa Achari
First published: