ಕಂಗನಾ ರಣಾವತ್ ಪಠಾಣ್ ಸಿನಿಮಾವನ್ನು (Pathaan Cinema) ಹೊಗಳುತ್ತಿದ್ದಾರೂ ಟ್ರೋಲ್ (Troll) ಮಾಡುತ್ತಿದ್ದಾರೋ ಅವರಿಗೆ ಗೊತ್ತು. ಕಾರಣ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಕೋಳಿ ಜಗಳಗಳಿಂದಲೇ ಟ್ವಿಟರ್ನಿಂದ (Twitter) ನಿಷೇಧಿಸಲ್ಪಟ್ಟಿದ್ದ ಬಾಲಿವುಡ್ (Bollywood) ನಟಿ ಈಗ ಮತ್ತೆ ಟ್ವಿಟರ್ಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್ (Kangana Ranaut) ಪಠಾಣ್ ಅವರನ್ನು ಹೊಗಳಿರುವ ವಿಡಿಯೋ (Video) ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿದ್ದು, ಅದನ್ನು ನೆಟ್ಟಿಗರು ಟ್ರೋಲ್ (Troll) ಮಾಡುತ್ತಿದ್ದಾರೆ. ಆದರೂ ಅವರು ಸಿನಿಮಾಗಳ ಬಗ್ಗೆ ಸರಣಿ (Series) ಟ್ವೀಟ್‌ಗಳನ್ನು ಮಾಡುತ್ತಲೇ ಇದ್ದಾರೆ. ಅಲ್ಲಿ ಅವರು ಶಾರುಖ್ ಖಾನ್ (Shah Rukh Khan) ಅಭಿನಯದ ಬಗ್ಗೆ ಸೂಕ್ಷ್ಮವಾಗಿ ಬರೆದಿದ್ದಾರೆ.
ಶಾರುಖ್ ಅಭಿನಯದ ಬಗ್ಗೆ ಅವರ ಇತ್ತೀಚಿನ ಟ್ವೀಟ್ ಅವರನ್ನು ಟ್ರೋಲ್ ಮಾಡಿತು. ಕಂಗನಾ ಅವರೇ ನಿಮ್ಮ ಸಿನಿಮಾ ಮೊದಲ ದಿನ 55 ಲಕ್ಷ ರೂಪಾಯಿ ಗಳಿಸಿತು. ಅದರ ಟೋಟಲ್ ಕಲೆಕ್ಷನ್ 2.58 ಕೋಟಿ. ಪಠಾಣ್ ಸಿನಿಮಾ 100 ಕೋಟಿಗಿಂತ ಹೆಚ್ಚು ಗಳಿಸಿದೆ . ಕಂಗನಾ ಅವರಿಗೆ ತುಂಬಾ ನಿರಾಸೆ ಆಗಿದೆ ಎಂದು ಟ್ರೋಲ್ ಮಾಡಿ ಟ್ವೀಟ್ ಮಾಡಲಾಗಿತ್ತು.
Pathaan’s single day earning is more than your life time earnings
— Dr Nimo Yadav (@niiravmodi) January 27, 2023
ಇದನ್ನೂ ಓದಿ: Pathaan-Kangana Ranaut: ಚಿತ್ರರಂಗ ಇರೋದು ಹಣ ಮಾಡೋಕಲ್ಲ, ಪಠಾಣ್ ಸಿನಿಮಾ ಬಗ್ಗೆ ಗೇಲಿ ಮಾಡಿದ್ರಾ ಕಂಗನಾ?
ಮತ್ತೊಬ್ಬ ಟ್ವಿಟರ್ ಬಳಕೆದಾರ, ಪಠಾಣ್‌ನ ಒಂದೇ ದಿನದ ಗಳಿಕೆಯು ನಿಮ್ಮ ಜೀವಮಾನದ ಗಳಿಕೆಗಿಂತ ಹೆಚ್ಚು ಎಂದು ಹೇಳಿದಾಗ ಕಂಗನಾ ರಣಾವತ್ ಅವರಿಗೆ ತಿರುಗೇಟು ನೀಡಿದ್ದಾರೆ. ನನ್ನ ಬಳಿ ಯಾವುದೇ ಗಳಿಕೆ ಉಳಿದಿಲ್ಲ, ನಾನು ನನ್ನ ಹಣವನ್ನು ಸಿನಿಮಾಗೆ ಹಾಕಿದ್ದೇನೆ. ಭಾರತದ ಸಂವಿಧಾನ ಮತ್ತು ಈ ಮಹಾನ್ ರಾಷ್ಟ್ರದ ಮೇಲಿನ ನಮ್ಮ ಪ್ರೀತಿಯನ್ನು ಆಚರಿಸುವ ಸಿನಿಮಾವನ್ನು ನಿರ್ಮಿಸಲು ನಾನು ನನ್ನಲ್ಲಿದ್ದ ಪ್ರತಿಯೊಂದು ವಸ್ತುವನ್ನು ಅಡವಿರಿಸಿದ್ದೇನೆ. ಹಣ ಏನು ? ಎಲ್ರೂ ಸಂಪಾದಿಸ್ತಾರೆ, ಆದರೆ ಈ ರೀತಿ ಖರ್ಚು ಮಾಡಿದವರಿದ್ದಾರಾ? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಪಠಾಣ್ ಕುರಿತು ಟ್ವೀಟ್ ಮಾಡಿದ ಕಂಗನಾ ರಣಾವತ್, ಪಠಾಣ್ ಅವರು ದ್ವೇಷದ ಮೇಲಿನ ಪ್ರೀತಿಯ ವಿಜಯ ಎಂದು ಹೇಳಿಕೊಳ್ಳುವವರೆಲ್ಲರ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಯಾರ ದ್ವೇಷದ ಮೇಲೆ ಯಾರ ಪ್ರೀತಿ? ಯಾರು ಟಿಕೆಟ್ ಖರೀದಿಸುವುದು ಮತ್ತು ಅದನ್ನು ಸಕ್ಸಸ್ ಮಾಡುವುದು? ಹೌದು 80% ಭಾರತೀಯರು ವಾಸಿಸುವ ಭಾರತದ ಪ್ರೀತಿಯಿಂದ ಪಠಾಣ್ ಸಿನಿಮಾ ಆಗಿದೆ ಎಂದಿದ್ದಾರೆ.
ಪಠಾಣ್ ಬಿಡುಗಡೆಯಾದ ಎರಡೇ ದಿನಗಳಲ್ಲಿ ವಿಶ್ವದಾದ್ಯಂತ 200 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಶಾರುಖ್ ಸಿನಿಮಾಗೆ ಫ್ಯಾನ್ಸ್ ಫಿದಾ
4 ವರ್ಷದ ಬಳಿಕ ಶಾರುಖ್ ಖಾನ್ ಮತ್ತೆ ಪಠಾಣ್ ಮೂಲಕ ತೆರೆ ಮೇಲೆ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸದ್ದು ಮಾಡಿದ್ದ ಈ ಸಿನಿಮಾ, ವಿವಾದಗಳಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿತ್ತು. ಇದೀಗ ಪಠಾಣ್ ಸಿನಿಮಾ ತೆರೆ ಮೇಲೆ ಬಂದಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ.
ವಾರ್ ಸಿನಿಮಾ ಖ್ಯಾತಿಯ ಸಿದ್ಧಾರ್ಥ್ ಆನಂದ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಶ್ ರಾಜ್ ಫಿಲಂಸ್ ಈ ಚಿತ್ರಕ್ಕೆ ಕೋಟಿ ಕೋಟಿ ಹಣ ಸುರಿದಿದೆ. ಶಾರುಖ್ ಜತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸಹ ಸಾಥ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ